ನವದೆಹಲಿ: ಟೆಕ್ಕಿಯೊಬ್ಬರು (Techie) 4 ಕೋಟಿ ರೂ. ಉದ್ಯೋಗದ ಆಫರ್ ತಿರಸ್ಕರಿಸಿ ಈಗ 540 ಕೋಟಿ ರೂ. ಮೌಲ್ಯದ ಕಂಪನಿಯನ್ನು ಸ್ಥಾಪಿಸಿ ಸುದ್ದಿಯಾಗಿದ್ದಾರೆ.
ವರುಣ್ ಮುಮ್ಮಡಿ (Varun Vummadi) ಮತ್ತು ಈಶಾ ಮಣಿದೀಪ್ (Esha Manideep) ಐಐಟಿ ಖರಗ್‌ಪುರದಿಂದ ಪದವಿ ಪಡೆದಿದ್ದರು. ವರುಣ್ ಮುಮ್ಮಡಿ ಅವರಿಗೆ ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿರುವ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಮತ್ತು ಕಂಪನಿಯೊಂದು 525,000 ಡಾಲರ್ ಸಂಬಳದ ಆಫರ್ ನೀಡಿದರೆ ಈಶಾ ಮಣಿದೀಪ್ ಅವರಿಗೆ 150,000 ಡಾಲರ್ ಸಂಬಳದ ಆಫರ್ ಸಿಕಿತ್ತು. ಇದನ್ನೂ ಓದಿ: ಶೀಘ್ರದಲ್ಲೇ 18 ಸಾವಿರ ಶಿಕ್ಷಕರ ನೇಮಕಾತಿ – ಮಧು ಬಂಗಾರಪ್ಪ
ಇಬ್ಬರಿಗೂ ದೊಡ್ಡ ಮೊತ್ತದ ಆಫರ್ ಸಿಕ್ಕಿದರೂ ವರುಣ್ ಮುಮ್ಮಡಿ ಮತ್ತು ಈಶಾ ಮಣಿದೀಪ್ ಅವರು ನಾವು ಏನಾದರೂ ಮಾಡಬೇಕೆಂಬ ತುಡಿತ ಇತ್ತು. ಈ ಕಾರಣಕ್ಕೆ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್ Giga ವನ್ನು ಸ್ಥಾಪನೆ ಮಾಡಿದರು. ಈ ಎಐ ಕಂಪನಿ ಗಿಗಾ ಅಟೋಮೆಷನ್ ಸ್ಟಾರ್ಟಪ್ ಅನ್ನು ಬೆಂಬಲಿಸುತ್ತದೆ.
ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಈ ಕಂಪನಿಗೆ ಹಲವು ಮಂದಿ ಹಣ ಹೂಡಿಕೆ ಮಾಡಲು ಬಂದಿದ್ದು ಕಳೆದ ಎರಡು ವರ್ಷಗಳಲ್ಲಿ 61 ಮಿಲಿಯನ್ ಡಾಲರ್ (540 ಕೋಟಿ ರೂ.,) ಮೌಲ್ಯದ ಕಂಪನಿಯಾಗಿ ಗಿಗಾ ಈಗ ಹೊರಹೊಮ್ಮಿದೆ.
ಮುಂದೆ ಎಐ ಹಲವು ಕ್ಷೇತ್ರಗಳಲ್ಲಿ ಪ್ರಭಾವ ಬೀರುವುದರಿಂದ ನಾವು ಈ ಕಂಪನಿಯನ್ನು ಸ್ಥಾಪಿಸಿದ್ದೇವೆ. ಮುಂದೆ ಟ್ರಿಲಿಯನ್ ಡಾಲರ್ ಕಂಪನಿಯನ್ನಾಗಿ ನಿರ್ಮಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.


