ಚಾಟ್ಸ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಚಾಟ್ಸ್ ತಿನ್ನುವಾಗ ಮಾತ್ರ ಯಾರು ಆರೋಗ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ, ಮೊದಲು ಚಾಟ್ಸ್ ಮತ್ತೆ ಆರೋಗ್ಯ ಎನ್ನುತ್ತಾರೆ. ಆದರೆ ಈ ಒಂದು ಚಾಟ್ಸ್ ಆರೋಗ್ಯಕ್ಕೂ ಒಳ್ಳೆಯದು, ತಿನ್ನೋಕು ಒಳ್ಳೆಯದು.
ಹೌದು, ಸುಲಭವಾಗಿ ಮನೆಯಲ್ಲೇ ಮಾಡಬಹುದು ಡ್ರೈ ಫ್ರೂಟ್ಸ್ ಚಾಟ್ಸ್
ಬೇಕಾಗುವ ಸಾಮಗ್ರಿಗಳು
ಗೋಡಂಬಿ
ಬಾದಾಮಿ
ಒಣದ್ರಾಕ್ಷಿ
ವಾಲ್ ನಟ್ಸ್
ಪಿಸ್ತಾ
ತುಪ್ಪ
ಚಾಟ್ ಮಸಾಲ
ಈರುಳ್ಳಿ ಸೊಪ್ಪು
ಕ್ಯಾಬೇಜ್
ಉಪ್ಪು
ಮಾಡುವ ವಿಧಾನ
ಮೊದಲಿಗೆ ಎಲ್ಲಾ ಡ್ರೈ ಫ್ರೂಟ್ಸ್ ಗಳನ್ನು ಕುದಿಯುವ ನೀರಿನಲ್ಲಿ ಹಾಕಿ, ಐದು ನಿಮಿಷ ಬಿಡಬೇಕು. ಬಳಿಕ ಎಲ್ಲವನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಪಿಸ್ತಾವನ್ನು ಸಿಪ್ಪೆ ಸುಲಿದು ಹುರಿದುಕೊಳ್ಳಬೇಕು. ಬಳಿಕ ಅದೇ ಬಾಣಲಿಗೆ ಸ್ವಲ್ಪ ತುಪ್ಪ ಹಾಕಿ, ಅದಕ್ಕೆ ಹೆಚ್ಚಿದ ಈರುಳ್ಳಿ ಸೊಪ್ಪು, ಸಣ್ಣದಾಗಿ ಕತ್ತರಿಸಿದ ಕ್ಯಾಬೇಜ್ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು.
ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಹುರಿದ ಡ್ರೈ ಫ್ರೂಟ್ಸ್ ಗಳನ್ನು ಸೇರಿಸಿಕೊಳ್ಳಬೇಕು. ಸ್ವಲ್ಪ ಹುರಿದುಕೊಂಡು ಕೊನೆಗೆ ಚಾಟ್ ಮಸಾಲ ಹಾಕಬೇಕು. ಅಗತ್ಯವಿದ್ದರೆ ಖಾರವನ್ನು ಸೇರಿಸಿಕೊಳ್ಳಬಹುದು. ಕೊನೆಗೆ ಚೆನ್ನಾಗಿ ಹುರಿದುಕೊಂಡರೆ ಡ್ರೈ ಫ್ರೂಟ್ಸ್ ಚಾಟ್ಸ್ ತಯಾರಾಗುತ್ತದೆ.


