ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ. ಎಟಿಸಿಯಲ್ಲಿ (ATC) ಸಂಭವಿಸಿದ ಪ್ರಮುಖ ತಾಂತ್ರಿಕ ದೋಷದ ನಂತರ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಅಧಿಕಾರಿಗಳ ಪ್ರಕಾರ ಸುಮಾರು 1,200ಕ್ಕೂ ಅಧಿಕ ವಿಮಾನಗಳ ಹಾರಾಟ ವಿಳಂಬವಾಗಿದ್ದವು.
ಗುರುವಾರ ಸಂಜೆ ದೆಹಲಿ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂತು. ವಿಮಾನ ಯೋಜನೆಯ ನಿರ್ಣಾಯಕ ಅಂಶವಾದ ಸ್ವಯಂಚಾಲಿತ ಸಂದೇಶ ಸ್ವಿಚಿಂಗ್ ಸಿಸ್ಟಮ್‌ನಲ್ಲಿ (AMSS) ಸಮಸ್ಯೆಯಾಗಿತ್ತು. ಈ ವ್ಯವಸ್ಥೆಯ ವೈಫಲ್ಯದಿಂದಾಗಿ, ವಿಮಾನ ಸಂದೇಶಗಳು ಮತ್ತು ಡೇಟಾವನ್ನು ನಿಯಂತ್ರಣ ಗೋಪುರಕ್ಕೆ ಸ್ವಯಂಚಾಲಿತವಾಗಿ ರವಾನಿಸಲಾಗಿಲ್ಲ. ಪರಿಣಾಮವಾಗಿ, ವಿಮಾನಯಾನ ಸಂಸ್ಥೆಗಳು ಹಸ್ತಚಾಲಿತವಾಗಿ ವಿಮಾನ ಯೋಜನೆಗಳನ್ನು ರಚಿಸಬೇಕಾಯಿತು. ಇದನ್ನೂ ಓದಿ: ಆಳಂದದಲ್ಲಿ ಮತಗಳ್ಳತನಕ್ಕೆ ಬಿಹಾರ, ಜಾರ್ಖಂಡ್, ದೆಹಲಿ ರಾಜ್ಯಗಳ ಫೋನ್ ನಂಬರ್ ಬಳಕೆ: ಡಿಕೆಶಿ ಬಾಂಬ್
ಈ ಸಮಸ್ಯೆಯಿಂದ ಗುರುವಾರ ರಾತ್ರಿ ಸುಮಾರು 500 ವಿಮಾನಗಳು ಮತ್ತು ಶುಕ್ರವಾರ 800 ವಿಮಾನಗಳು ವಿಳಂಬವಾದವು. ಅನೇಕ ವಿಮಾನಗಳಲ್ಲಿನ ಪ್ರಯಾಣಿಕರು ದೀರ್ಘಾವಧಿಯವರೆಗೆ ವಿಮಾನದಲ್ಲಿ ಕಾಯಬೇಕಾಯಿತು. ವಿಮಾನಗಳು ಸರಾಸರಿ 45 ನಿಮಿಷದಿಂದ ಒಂದು ಗಂಟೆಯವರೆಗೆ ವಿಳಂಬವಾದವು. ಆದರೆ ಸೀಮಿತ ಪಾರ್ಕಿಂಗ್ ಬೇಗಳು ಮತ್ತು ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ದಟ್ಟಣೆಯಿಂದಾಗಿ ಆಗಮನದ ವಿಮಾನಗಳ ಮೇಲೂ ಪರಿಣಾಮ ಬೀರಿತು. ಇದನ್ನೂ ಓದಿ: ಕಬ್ಬು ಬೆಳೆಗಾರರ ದಿಕ್ಕು ತಪ್ಪಿಸೋ ಕ್ರಮ – ಸಿಎಂಗೆ ಪ್ರಹ್ಲಾದ್ ಜೋಶಿ ಖಡಕ್ ಪತ್ರ
ಎಟಿಸಿ ವ್ಯವಸ್ಥೆಯಲ್ಲಿನ ತಾತ್ಕಾಲಿಕ ತಾಂತ್ರಿಕ ದೋಷವನ್ನು ಈಗ ಪರಿಹರಿಸಲಾಗಿದೆ ಮತ್ತು ಕಾರ್ಯಾಚರಣೆಗಳು ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿವೆ. ಮುಂದಿನ ಕೆಲವು ಗಂಟೆಗಳಲ್ಲಿ ಪರಿಸ್ಥಿತಿ ಮತ್ತಷ್ಟು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಅಲ್ಲಿಯವರೆಗೆ, ವಿಮಾನ ಸಮಯಗಳಲ್ಲಿ ಕೆಲವು ಬದಲಾವಣೆಗಳು ಆಗಬಹುದು ಎಂದು ಇಂಡಿಗೋ ಏರ್‌ಲೈನ್ಸ್ ಹೇಳಿದೆ. ಇದನ್ನೂ ಓದಿ: ನಾಚಿಕೆಗೇಡು… ಪಾಕ್‌ನ ಪರಮಾಣು ಕೇಂದ್ರದ ಮೇಲೆ ದಾಳಿ ನಡೆಸಲು ಇಂದಿರಾ ಗಾಂಧಿ ಅನುಮತಿ ಕೊಡಲಿಲ್ಲ: ಮಾಜಿ ಸಿಐಎ ಅಧಿಕಾರಿ

