ಸ್ಯಾಂಡಲ್‌ವುಡ್ ನಟಿ ಧನ್ಯ ರಾಮ್‌ಕುಮಾರ್ (Dhanya Ramkumar) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸುವ ಫೋಟೊ ಪೋಸ್ಟ್ ಮಾಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಸಮುದ್ರದ ಮಧ್ಯೆ ನಿಂತು ಸಖತ್ ಹಾಟ್ ಪೋಸ್ ಕೊಟ್ಟಿದ್ದಾರೆ.
ಮಲ್ಡೀವ್ಸ್ ಪ್ರವಾಸದ ಫೋಟೋ ಡಂಪ್ ಮಾಡಿರುವ ಧನ್ಯ ರಾಮ್‌ಕುಮಾರ್ ನೀಲಿ ಬಣ್ಣದ ಧಿರಿಸಿನಲ್ಲಿ ಮನಮೋಹಕ ಲುಕ್‌ನೊಂದಿಗೆ ಕಂಗೊಳಿಸಿದ್ದಾರೆ. ಧನ್ಯ ಪೋಸ್ಟ್ ಮಾಡಿರುವ ಫೋಟೊಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಬೆಂಕಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿ ಧನ್ಯ ಕಾಣಿಸ್ಕೊಂಡಿದ್ದಾರೆ. ಇದನ್ನೂ ಓದಿ: ಯಶ್ `ಟಾಕ್ಸಿಕ್’ ಕುರಿತು ನಟಿಯ ಮೊದಲ ಮಾತು
ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಧನ್ಯ ಆಗಾಗ ತಾಯಿ ಜೊತೆ ಹೆಚ್ಚೆಚ್ಚು ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಇತ್ತೀಚೆಗಷ್ಟೇ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದ ಧನ್ಯ ಅಲ್ಲಿ ಕ್ಯಾಪ್ಚರ್ ಮಾಡಿರುವ ಫೋಟೋಗಳನ್ನ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.


