ಲಕ್ನೋ: ಮದುವೆಯ ಮಂಟಪದಲ್ಲಿ ಚಿಕನ್ ಫ್ರೈಗಾಗಿ ಗಂಡು, ಹೆಣ್ಣಿನ ಮನೆಯವರ ಮಧ್ಯೆ ಗಲಾಟೆಯಾಗಿ, ಪರಸ್ಪರ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ (Uttara Pradesh) ಬಿಜ್ನೋರ್ (Bijnor) ಎಂಬಲ್ಲಿ ನಡೆದಿದೆ.
ಮದುವೆ ಮಂಟಪದ ಊಟದ ಕೌಂಟರ್‌ನಲ್ಲಿ ಚಿಕನ್ ಫ್ರೈಗಾಗಿ ಗಲಾಟೆ ಶುರುವಾಗಿದೆ. ಜಗಳ ತಾರಕಕ್ಕೇರಿ ಹಲ್ಲೆ ನಡೆದು, ಪರಸ್ಥಿತಿ ಕೈಮೀರಿ ಹೋಯಿತು. ಈ ವೇಳೆ ಗಲಾಟೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಿಲುಕಿಕೊಳ್ಳುವಂತಾಯಿತು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು.ಇದನ್ನೂ ಓದಿ:ಸದ್ಯಕ್ಕೆ ದೆಹಲಿ ಪ್ರವಾಸವಿಲ್ಲ, ಅವಶ್ಯಕತೆ ಬಂದಾಗ ಹೋಗುತ್ತೇನೆ : ಸತೀಶ್ ಜಾರಕಿಹೊಳಿ
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ನಾವು ಮದುವೆಗೆ ಬಂದಿದ್ದೆವು. ಆಗ ಇಲ್ಲಿ ಚಿಕನ್ ಫ್ರೈ ವಿಷಯಕ್ಕಾಗಿ ಜಗಳ ಶುರುವಾಯಿತು. ಕಾಲ್ತುಳಿತ ಸಂಭವಿಸಿತು. ಪರಿಣಾಮ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದೆಂದು ಪೊಲೀಸರು ಮದುವೆ ಮುಗಿಯುವವರೆಗೂ ಮಂಟಪದಲ್ಲಿಯೇ ಬೀಡುಬಿಟ್ಟಿದ್ದರು.ಇದನ್ನೂ ಓದಿ: 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆನ್ನ ಓಬಳಯ್ಯ (105) ನಿಧನ

