ಮುಂಬೈ: ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದಲ್ಲಿ ಭಾರತ ತಂಡದ ವನಿತೆಯರು ಚೊಚ್ಚಲ ಏಕದಿನ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಐಸಿಸಿ ಏಕದಿನ ವಿಶ್ವಕಪ್ (ICC Women’s World Cup) ಗೆದ್ದ ಭಾರತದ 3ನೇ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಹರ್ಮನ್‌ಪ್ರೀತ್ ಕೌರ್ ಪಾತ್ರರಾಗಿದ್ದಾರೆ.
ನವಿ ಮುಂಬೈನ ಡಾ.ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತದ ನಾರಿಯರು (Team India) ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಟೂರ್ನಿಯುದ್ದಕ್ಕೂ ಗೆಲುವು-ಸೋಲಿನ ಸಿಹಿ-ಕಹಿ ಅನುಭವಿಸಿದ ಭಾರತದ ವನಿತೆಯರು ತವರಿನಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ಚರಿತ್ರೆ ದಾಖಲಿಸಿದ್ದಾರೆ. 1983ರಲ್ಲಿ ಕಪಿಲ್ ದೇವ್ ಹಾಗೂ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಪುರುಷರ ಏಕದಿನ ವಿಶ್ವಕಪ್ ಗೆದ್ದರೆ, 2025ರಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ಭಾರತ ತಂಡ ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದನ್ನೂ ಓದಿ: ಆಲ್‌ರೌಂಡರ್ ಆಟ – ದೀಪ್ತಿ ಶರ್ಮಾ ವಿಶ್ವದಾಖಲೆ!

2011ರಲ್ಲಿ ಭಾರತ ಪುರುಷರ ತಂಡ ಮುಂಬೈನಲ್ಲಿ ವಿಶ್ವಕಪ್ ಗೆದ್ದಾಗ ತಂಡದ ನಾಯಕ ಎಂಎಸ್ ಧೋನಿ ಪಂದ್ಯಕ್ಕೆ ಪಂದ್ಯಕ್ಕೆ ಫಿನಿಶಿಂಗ್ ಟಚ್ ನೀಡಿದ್ದರು. ಕುಲಶೇಖರ ಎಸೆತವನ್ನು ಸಿಕ್ಸರ್‌ಗಟ್ಟಿ ಪಂದ್ಯ ಮುಗಿಸಿದ್ದರು. 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಡಿ ಕ್ಲೆರ್ಕ್ರ ಕ್ಯಾಚ್ ಹಿಡಿದಾಕ್ಷಣ ಭಾರತ ವಿಶ್ವಚಾಂಪಿಯನ್ ಆಯಿತು. ಕೌರ್ ಹಿಡಿದ ಆಕರ್ಷಕ ಕ್ಯಾಚ್‌ನೊಂದಿಗೆ ಪಂದ್ಯ ಕೊನೆಗೊಂಡಿತು. ಇದನ್ನೂ ಓದಿ: ವೀಲ್ ಚೇರ್‌ನಲ್ಲಿ ಆಗಮಿಸಿ ವಿಜಯೋತ್ಸವದಲ್ಲಿ ಭಾಗಿಯಾದ ಪ್ರತಿಕಾ ರಾವಲ್
ರೋಹಿತ್ ಶರ್ಮಾ ಭಾವುಕ:
ಫೈನಲ್‌ನಲ್ಲಿ ಭಾರತ ತಂಡವನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಕ್ರಿಕೆಟಿಗ ರೋಹಿತ್ ಶರ್ಮಾ, ಭಾರತ ವಿಶ್ವಕಪ್ ಗೆಲ್ಲುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ತಟ್ಟಿ ಭಾವುಕರಾದರು. ಭಾರತ ವಿಶ್ವಚಾಂಪಿಯನ್ ಆದ ಸಂದರ್ಭ ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು. ಇದನ್ನೂ ಓದಿ: ಆಡಿದ್ದು ಎರಡನೇ ಪಂದ್ಯವಾದರೂ ಭಾರತವನ್ನು ಗೆಲ್ಲಿಸಿದ ಶಫಾಲಿ!
ಮೊದಲು ಬ್ಯಾಟ್ ಬೀಸಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. ಕಠಿಣ ಗುರಿಯನ್ನು ಬೆನ್ನೆಟ್ಟಿದ ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ಗಳಿಸಿ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಕೊನೆಗೂ ಕನಸು ನನಸು – ಭಾರತ ಈಗ ವಿಶ್ವ ಮಹಿಳಾ ಕ್ರಿಕೆಟಿಗೆ ಬಾಸ್

