ಲಂಡನ್: ಲಂಡನ್‌ಗೆ (London) ಪ್ರಯಾಣಿಸುತ್ತಿದ್ದ ರೈಲಿನಲ್ಲಿ 10 ಪ್ರಯಾಣಿಕರಿಗೆ ಮನಬಂದಂತೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಇಬ್ಬರು ಆರೋಪಿಗಳನ್ನು ಯುಕೆ ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ 10 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ಒಂಬತ್ತು ಮಂದಿ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಕೇಂಬ್ರಿಡ್ಜ್‌ಶೈರ್‌ನ ಪೂರ್ವ ಗ್ರಾಮೀಣ ಪಟ್ಟಣವಾದ ಹಂಟಿಂಗ್‌ಡನ್‌ನಲ್ಲಿರುವ ರೈಲ್ವೆ ನಿಲ್ದಾಣದಲ್ಲಿ, ಸಾಮೂಹಿಕ ಚಾಕು ಇರಿತ ಸುದ್ದಿ ತಿಳಿಯುತ್ತಿದ್ದಂತೆ ರೈಲು ನಿಂತಿತು. ರೈಲನ್ನು ಪೊಲೀಸರು ಸುತ್ತುವರಿದು, ಇರಿತಕ್ಕೊಳಗಾದವರನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದನ್ನೂ ಓದಿ: ನೀವು ಹೀಗೆ ಮುಂದುವರಿದರೆ ತಕ್ಕ ಬೆಲೆ ತೆರಬೇಕಾಗುತ್ತೆ: ಪಾಕ್‌ಗೆ ಅಫ್ಘಾನಿಸ್ತಾನ ಖಡಕ್ ವಾರ್ನಿಂಗ್
ರೈಲು ಈಶಾನ್ಯದ ಡಾನ್‌ಕಾಸ್ಟರ್‌ನಿಂದ ಲಂಡನ್‌ನ ಕಿಂಗ್ಸ್ ಕ್ರಾಸ್ ನಿಲ್ದಾಣಕ್ಕೆ ಚಲಿಸುತ್ತಿತ್ತು ಎಂದು ಸಾರಿಗೆ ಪೊಲೀಸರು ತಿಳಿಸಿದ್ದಾರೆ. ಈ ಮಾರ್ಗವು ಹೆಚ್ಚಾಗಿ ಪ್ರಯಾಣಿಕರಿಂದ ತುಂಬಿರುತ್ತದೆ. ದೊಡ್ಡ ಚಾಕುವನ್ನು ಹಿಡಿದ ವ್ಯಕ್ತಿಯನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ರೈಲು ನಿಂತ ನಂತರ ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ಚಾಕು ಹಿಡಿದಿದ್ದ ವ್ಯಕ್ತಿಯನ್ನು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಂತರ ಪೊಲೀಸರು ಆ ವ್ಯಕ್ತಿಯನ್ನು ಎಳೆದು ಹಿಡಿದು ತಡೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಕಾರಿನ ಮೇಲೆ ಅಪರಿಚಿತನಿಂದ ಮೂತ್ರ ವಿಸರ್ಜನೆ; ವಿರೋಧಿಸಿದ ಭಾರತೀಯ ಮೂಲದ ಉದ್ಯಮಿ ಹತ್ಯೆ
ಇದು ಭಯಾನಕ ಮತ್ತು ಕಳವಳಕಾರಿ ಘಟನೆ ಎಂದು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಪ್ರತಿಕ್ರಿಯಿಸಿದ್ದಾರೆ. ಗಾಯಗೊಂಡವರಿಗೆ ತುರ್ತು ಸೇವೆಗಳ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು ಎಂದು ಸ್ಟಾರ್ಮರ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

