– ಐಸಿಸಿಯಿಂದ ಚಾಂಪಿಯನ್ ತಂಡಕ್ಕೆ 37 ಕೋಟಿ ರೂ. ಗಿಫ್ಟ್
ಮುಂಬೈ: 7 ಬಾರಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ (Australia) ತಂಡವನ್ನ ಮಣಿಸಿ ಭಾರತ ಮಹಿಳಾ ಕ್ರಿಕೆಟ್ ತಂಡ 2025ನೇ ಸಾಲಿನ ವಿಶ್ವಕಪ್ ಫೈನಲ್ (Women’s World Cup Final) ತಲುಪಿದೆ. ನವೆಂಬರ್ 2ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ನಲ್ಲಿ ಭಾರತ ತಂಡ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಲಿದೆ. ಐಸಿಸಿಯಿಂದ ಚಾಂಪಿಯನ್ ತಂಡಕ್ಕೆ 37.3 ಕೋಟಿ ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 20 ಕೋಟಿ ರೂ. ಬಹುಮಾನ ಸಿಗಲಿದೆ.

ಇದಲ್ಲದೇ ಭಾರತ ಪ್ರಶಸ್ತಿ ಗೆದ್ದರೆ ನಗದು ಬಹುಮಾನ ನೀಡಲು ಬಿಸಿಸಿಐ (BCCI) ಬದ್ಧವಾಗಿದೆ ಎಂದು ವರದಿಗಳು ತಿಳಿಸಿವೆ. ಹೌದು. ಬಿಸಿಸಿಐ ಮಾಜಿ ಕಾರ್ಯದರ್ಶಿ ಹಾಗೂ ಹಾಲಿ ಐಸಿಸಿ ಅಧ್ಯಕ್ಷ ಜಯ್ ಶಾ ಪ್ರತಿಪಾದಿಸಿದ ʻಸಮಾನ ವೇತನʼ ನೀತಿ ಅಡಿಯಲ್ಲಿ ಮಹಿಳಾ ತಂಡ (India Women’s Team) ಪ್ರಶಸ್ತಿ ಗೆದ್ದರೆ ಅವರಿಗೆ ನಗದು ಬಹುಮಾನ ನೀಡಲು ಬಿಸಿಸಿಐ ಸಂಪೂರ್ಣ ಸಿದ್ಧವಾಗಿದೆ. ಇದನ್ನೂ ಓದಿ: ವೈಯಕ್ತಿಕ ಹಗೆತನಕ್ಕೆ ಬಲಿಯಾಗ್ತಿದೆಯೇ ಟೀಂ ಇಂಡಿಯಾ – ಇನ್ನೂ ಮುಗಿದಿಲ್ವಾ ಕೊಹ್ಲಿ-ಗಂಭೀರ್ ಮುನಿಸು?
ಕಳೆದ ವರ್ಷ ಅಮೆರಿಕಾದಲ್ಲಿ ನಡೆದ ಟೂರ್ನಿಯ ಫೈನಲ್ನಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಟಿ20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಆಗ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ಬಹುಮಾನ ನೀಡಿತ್ತು. ಅದೇ ರೀತಿ ಮಹಿಳಾ ತಂಡ ವಿಶ್ವಕಪ್ ಗೆದ್ದರೂ ಅಷ್ಟೇ ಮೊತ್ತವನ್ನ ಬಹುಮಾನವಾಗಿ ನೀಡಲು ಉನ್ನತ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದ್ರೆ ಕೆಲ ಕ್ರಿಕೆಟ್ ತಜ್ಞರು ಹಾಗೂ ಬಿಸಿಸಿಐ ಮಂಡಳಿಯ ಕೆಲ ಅಧಿಕಾರಿಗಳು ಟ್ರೋಫಿ ಗೆಲ್ಲುವ ಮೊದಲೇ ಬಹುಮಾನ ಘೋಷಣೆ ಮಾಡುವುದು ಸರಿಯಲ್ಲ ಅಂತ ಹೇಳಿದ್ದಾರೆಂಬುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಡಿಸ್ಚಾರ್ಜ್: ಇನ್ನೂ ಕೆಲವು ದಿನ ಸಿಡ್ನಿಯಲ್ಲೇ ವಾಸ
3ನೇ ಬಾರಿಗೆ ಫೈನಲ್
2008ರಲ್ಲಿ ಭಾರತ ಮೊದಲ ಬಾರಿ ಫೈನಲ್ ಪ್ರವೇಶಿಸಿದಾಗ ಆಸೀಸ್ ವಿರುದ್ಧವೇ 98 ರನ್ಗಳಿಂದ ಸೋತಿತ್ತು. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ 9 ರನ್ಗಳ ವಿರೋಚಿತ ಸೋಲು ಕಂಡಿತ್ತು. ಲಾರ್ಡ್ಸ್ನಲ್ಲಿ ಮಹಿಳಾ ತಂಡ ಸೋತಾಗ ಪ್ರತಿಯೊಬ್ಬರಿಗೂ ತಲಾ 50 ಲಕ್ಷ ಬಹುಮಾನ ಘೋಷಿಸಿತ್ತು. ಸದ್ಯ 8 ವರ್ಷಗಳ ಬಳಿಕ ಭಾರತ 3ನೇ ಬಾರಿಗೆ ಫೈನಲ್ ತಲುಪಿದ್ದು, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಇದನ್ನೂ ಓದಿ: ಜೆಮಿಮಾ ಶತಕದ ಮಿಂಚು – ಭಾರತಕ್ಕೆ ವಿಶ್ವದಾಖಲೆಯ ಜಯ; 3ನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್ಗೆ ಲಗ್ಗೆ!
