ಚೆನ್ನೈ: ‘ನನ್ನನ್ನು ಗರ್ಭಿಣಿಯನ್ನಾಗಿ ಮಾಡುವ ವ್ಯಕ್ತಿಗಾಗಿ ಹುಡುಕುತ್ತಿದ್ದೇನೆ’ ಎಂಬ ಆನ್‌ಲೈನ್ ಜಾಹೀರಾತಿಗೆ ಪ್ರತಿಕ್ರಿಯಿಸಿ ವ್ಯಕ್ತಿಯೊಬ್ಬ 11 ಲಕ್ಷ ಕಳೆದುಕೊಂಡಿರುವ ಘಟನೆ ಪುಣೆಯಲ್ಲಿ (Pune) ನಡೆದಿದೆ.
ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ, ಆರಂಭಿಕ ಶುಲ್ಕಗಳು, ಸದಸ್ಯತ್ವ ಶುಲ್ಕಗಳು, ಗೌಪ್ಯತೆ ಶುಲ್ಕಗಳನ್ನು ಪಾವತಿಸಬೇಕು ಎಂದು ಆ ವ್ಯಕ್ತಿಗೆ ಸೂಚನೆ ನೀಡಲಾಯಿತು. ಪಾವತಿಗಳನ್ನು ಮಾಡದ ಹೊರತು ಕೆಲಸ ಅಪೂರ್ಣವಾಗಿ ಉಳಿಯುತ್ತದೆ ಎಂದು ಆತನಿಗೆ ತಿಳಿಸಲಾಗಿತ್ತು. ಆತ ಆನ್‌ಲೈನ್ ಮೋಸದ ಜಾಲಕ್ಕೆ ಬಿದ್ದಿದ್ದಾನೆ. ಇದನ್ನೂ ಓದಿ: ಪೊಲೀಸರಿಂದ ಟಾರ್ಚರ್ ಆರೋಪ – ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ
ಹಲವು ಆನ್‌ಲೈನ್ ಹಣ ವರ್ಗಾವಣೆಗಳ ನಂತರ, ಆ ವ್ಯಕ್ತಿಗೆ ಜಾಹೀರಾತುದಾರರಿಂದ ಯಾವುದೇ ಸಂಪರ್ಕ ಸಿಕ್ಕಿಲ್ಲ. ಆಗ ತಾನು ಮೋಸ ಹೋಗಿರುವುದು ಆತನಿಗೆ ಅರಿವಾಗಿದೆ. ಈ ವಂಚನೆಯ ಹಿಂದಿನ ವ್ಯಕ್ತಿಯನ್ನು ಗುರುತಿಸಲು ತನಿಖೆ ನಡೆಯುತ್ತಿದ್ದು, ಅಂತಹ ಜಾಹೀರಾತುಗಳಿಗೆ ಪ್ರತಿಕ್ರಿಯಿಸದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ನಾಗರಿಕರು ಅನುಮಾನಾಸ್ಪದ ಆನ್‌ಲೈನ್ ಜಾಹೀರಾತುಗಳು ಅಥವಾ ಆಫರ್‌ಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕು. ಯಾರಾದರೂ ವೈಯಕ್ತಿಕ ಕೆಲಸಕ್ಕಾಗಿ ಆನ್‌ಲೈನ್‌ನಲ್ಲಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟರೆ, ಅವರು ತಕ್ಷಣವೇ ಪೊಲೀಸರಿಗೆ ವರದಿ ಮಾಡಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರಂಭದಲ್ಲಿ ಆನ್‌ಲೈನ್ ಜಾಹೀರಾತಿಗೆ ಆ ವ್ಯಕ್ತಿ ಪ್ರತಿಕ್ರಿಯಿಸಿದ ನಂತರ, ತನ್ನನ್ನು ಗರ್ಭಿಣಿ ಮಾಡು ಎಂದು ಮಹಿಳೆಯೊಬ್ಬಳು ಕೇಳಿಕೊಂಡಿರುವ ವೀಡಿಯೋ ಸಂದೇಶವಾಗಿ ರವಾನೆಯಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಕೇಸ್; 11 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್
ಬಿಹಾರದಲ್ಲೂ ಇದೇ ಮಾದರಿಯ ಸೈಬರ್ ವಂಚನೆಯ ಪ್ರಕರಣವೊಂದು ದಾಖಲಾಗಿತ್ತು. ಇದರಲ್ಲಿ ಸೈಬರ್ ವಂಚಕರು, ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯಾಗಿಸಲು ಲಕ್ಷಗಟ್ಟಲೆ ಹಣ ನೀಡುವುದಾಗಿ ಭರವಸೆ ನೀಡುವ ಮೂಲಕ ಪುರುಷರನ್ನು ವಂಚಿಸಿದ್ದಾರೆ.
ಜನವರಿಯಲ್ಲಿ ಬಿಹಾರದ ನವಾಡಾ ಜಿಲ್ಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದರು. ಆರೋಪಿಗಳು ಪುರುಷರಿಂದ ಹಣ ಸುಲಿಗೆ ಮಾಡುವ ದೊಡ್ಡ ಗ್ಯಾಂಗ್‌ನ ಭಾಗವಾಗಿರಬಹುದು ಎಂದು ಶಂಕಿಸಲಾಗಿದೆ. ‘ಅಖಿಲ ಭಾರತ ಗರ್ಭಿಣಿ ಉದ್ಯೋಗ ಸೇವೆ’ ವೆಬ್‌ಸೈಟ್ ಅನ್ನು ಬಳಸಿಕೊಂಡು ಪುರುಷರನ್ನು ಬಲೆಗೆ ಬೀಳಿಸಲಾಗುತ್ತಿತ್ತು. ಮಹಿಳೆಯನ್ನು ಗರ್ಭಿಣಿಯಾಗಿಸಲು 10 ಲಕ್ಷದವರೆಗೆ ಮತ್ತು ಅವರು ವಿಫಲವಾದರೂ 50,000 ಹಣವನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು.

