ಹೈದರಾಬಾದ್: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಅವರು Vizag ನಲ್ಲಿರುವ ‘G’ ಅಂದರೆ ಅದು ಗೂಗಲ್ ಎಂದು ಬಣ್ಣಿಸಿದ್ದಾರೆ.
ವಿಶಾಖಪಟ್ಟಣದಲ್ಲಿ(ವೈಜಾಗ್) ಎಐ ಡೇಟಾ ಹಬ್ ಮಾಡಲು ಗೂಗಲ್ ಆಂಧ್ರ ಸರ್ಕಾರದ ಜೊತೆ ಸಹಿ ಹಾಕಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಬಂದರು ನಗರಿಯಾಗಿರುವ ವೈಜಾಗ್‌ನ ಫೋಟೋವನ್ನು ಹಾಕಿ #YoungestStateHighestInvestment ಎಂದು ಹ್ಯಾಶ್‌ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ.
The G in #Vizag now stands for @Google!#YoungestStateHighestInvestment pic.twitter.com/l7OwckLTOL
— N Chandrababu Naidu (@ncbn) October 15, 2025
ಡೇಟಾ ಹಬ್ ನಿರ್ಮಾಣಕ್ಕೆ ಗೂಗಲ್ ಸುಮಾರು 1.33 ಲಕ್ಷ ಕೋಟಿ ರೂ. ಹೂಡಿಕೆ ಮಾಡುತ್ತಿದ್ದು ಮುಂದಿನ 5 ವರ್ಷಗಳಲ್ಲಿ ತಲೆ ಎತ್ತಲಿದೆ. ಅಮೆರಿಕದ ಹೊರಗೆ ಗೂಗಲ್ ನಿರ್ಮಿಸುತ್ತಿರುವ ಅತಿ ದೊಡ್ಡ ಹೂಡಿಕೆ ಇದಾಗಿದೆ.
AI ಮೂಲಸೌಕರ್ಯ, ಡೇಟಾ ಕೇಂದ್ರಗಳು, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಹೊಸ ಸಬ್‌ಸೀ ಗೇಟ್‌ವೇ ಅನ್ನು ಸಂಯೋಜಿಸುತ್ತದೆ. ಇದು ದೇಶದ ಮೊದಲ ಗಿಗಾವ್ಯಾಟ್-ಪ್ರಮಾಣದ ಡೇಟಾ ಸೆಂಟರ್ ಕ್ಯಾಂಪಸ್ ಆಗಿರಲಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ, ಪವರ್ ಕಟ್ ಸಮಸ್ಯೆಯಿದೆ: ಆಂಧ್ರ ಐಟಿ ಸಚಿವ
Okay Google, sync for Viksit Bharat…
#GoogleComesToAP @AshwiniVaishnaw@nsitharaman@naralokesh @bikashkoley73@ThomasOrTK @Google pic.twitter.com/WtQNAQ8Gjg
— N Chandrababu Naidu (@ncbn) October 14, 2025
ಐದು ವರ್ಷಗಳ ಯೋಜನೆಯು (2026–2030) 1 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ ಸಚಿವ ಎನ್ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ. ಇದನ್ನೂ ಓದಿ: ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ: ನಾರಾ ಲೋಕೇಶ್‌ಗೆ ಡಿಕೆಶಿ ತಿರುಗೇಟು
ಈ ಕೇಂದ್ರವನ್ನು ಅಡಾನಿಕಾನೆಕ್ಸ್ (AdaniConneX) ಮತ್ತು ಏರ್‌ಟೆಲ್‌ನ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಉಪಕ್ರಮದ ಭಾಗವಾಗಿ, ಗೂಗಲ್ ವಿಶಾಖಪಟ್ಟಣದಲ್ಲಿ ಹೊಸ ಅಂತರರಾಷ್ಟ್ರೀಯ ಸಬ್‌ಸೀ ಕೇಬಲ್‌ಗಳನ್ನು ನಿರ್ಮಿಸಲಿದೆ. ಇದು ಭಾರತದ ಇಂಟರ್ನೆಟ್ ಸಾಮರ್ಥ್ಯವನ್ನು ಸುಧಾರಿಸಲಿದೆ.