– ಇಸ್ರೇಲ್, ಹಮಾಸ್ ನಡುವೆ ಕದನ ವಿರಾಮ
– ಇಸ್ರೇಲ್ ಸಂಸತ್ತಿನಲ್ಲಿ ಟ್ರಂಪ್ ಭಾಷಣ
ಜೆರುಸಲೆಮ್: ಯುದ್ಧದ ಅಂತ್ಯ ಮಾತ್ರವಲ್ಲ. ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬಣ್ಣಿಸಿದ್ದಾರೆ.
ಇಸ್ರೇಲ್(Isreal) ಮತ್ತು ಗಾಜಾದ ಹಮಾಸ್ (Hamas) ಬಂಡುಕೋರರ ನಡುವಿನ ಸುದೀರ್ಘ 2 ವರ್ಷಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳ ನಿರಂತರ ಯುದ್ಧದ ನಂತರ ಇಂದು ಆಕಾಶವು ಶಾಂತವಾಗಿದೆ. ಬಂದೂಕುಗಳು ಮೌನವಾಗಿವೆ. ಸೈರನ್‌ಗಳು ಶಬ್ಧ ಮಾಡುವುದನ್ನು ನಿಲ್ಲಿಸಿವೆ. ಶಾಂತಿಯಿಂದ ಇರುವ ಪವಿತ್ರ ಭೂಮಿಯ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ ಎಂದು ಹೇಳಿದರು. ಇದನ್ನೂ ಓದಿ: ಗಾಜಾ ಯುದ್ಧ ಅಂತ್ಯ | ಇಸ್ರೇಲ್‌ನ 7 ಒತ್ತೆಯಾಳುಗಳನ್ನ ಬಿಡುಗಡೆ ಮಾಡಿದ ಹಮಾಸ್
President Donald J. Trump delivers remarks to Israel’s Knesset in Jerusalem. 🇺🇸
“After two harrowing years in darkness & captivity, 20 courageous hostages are returning to the glorious embrace of their families… Today, the sun rises on a Holy Land that is finally at PEACE.” pic.twitter.com/edHG5ndSM5
— The White House (@WhiteHouse) October 13, 2025
ಒತ್ತೆಯಾಳುಗಳು ಹಿಂತಿರುಗಿದ್ದಾರೆ, ಅದನ್ನು ಹೇಳಲು ತುಂಬಾ ಸಂತೋಷವಾಗುತ್ತಿದೆ. ನಾನು ಕ್ರೂರಿಯಾಗಿ ವರ್ತಿಸುತ್ತೇನೆ ಎಂದು ಎಲ್ಲರೂ ಭಾವಿಸಿದ್ದರು. ನಾನು ಎಲ್ಲರೊಂದಿಗೆ ಯುದ್ಧಕ್ಕೆ ಹೋಗುತ್ತೇನೆ ಎಂದು ಹಿಲರಿ ಕ್ಲಿಂಟನ್ ಹೇಳಿದ್ದು ನನಗೆ ನೆನಪಿದೆ. ಆದರೆ ನಾನು ಯುದ್ಧ ಬಯಸುವ ವ್ಯಕ್ತಿಯಲ್ಲ. ನನ್ನದು ಯುದ್ಧ ನಿಲ್ಲಿಸುವ ವ್ಯಕ್ತಿತ್ವ ಎಂದರು. ಇದನ್ನೂ ಓದಿ: ಯುದ್ಧಗಳನ್ನ ಪರಿಹರಿಸೋದ್ರಲ್ಲಿ ನಾನು ನಿಪುಣ; ಭಾರತ-ಪಾಕ್ ಕದನ ವಿರಾಮ ಬಗ್ಗೆ ಮತ್ತೆ ಬೆನ್ನುತಟ್ಟಿಕೊಂಡ ಟ್ರಂಪ್
ಟ್ರಂಪ್ ರಾಜಧಾನಿ ಟೆಲ್ ಅವೀವ್‌ಗೆ ಬಂದಿಳಿದಾಗ ಅದ್ಧೂರಿ ಸ್ವಾಗತ ನೀಡಲಾಯಿತು. ಯುದ್ಧ ನಿಲ್ಲಿಸಲು ಮಧ್ಯಸ್ಥಿತಿಕೆ ವಹಿಸಿದ್ದಕ್ಕೆ ಇಸ್ರೇಲ್ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು.
.@POTUS: “The God who once dwelled among His people in this city still calls us, in the words of Scripture, to turn from evil and do good, to seek peace and pursue it.” pic.twitter.com/eje68UKUDM
— Rapid Response 47 (@RapidResponse47) October 13, 2025