ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಬೀದಿಗೊಂದು ಬಾರ್ ಇದೆ. ಸ್ವತಃ ಇಲ್ಲಿನ ಶಾಸಕ ಇಕ್ಬಾಲ್ ಅನ್ಸಾರಿ ಲಿಕ್ಕರ್ ಲಾಬಿ ನಡೆಸ್ತಿದ್ದಾರೆ ಅನ್ನೋದನ್ನ ಮೊನ್ನೆಯಷ್ಟೇ ದಾಖಲೆ ಸಮೇತ ಬಹಿರಂಗಪಡಿಸಿದ್ವಿ. ಆದ್ರೆ ಇಷ್ಟೇ ಅಲ್ಲ ಇಲ್ಲಿ ಸಣ್ಣ ಪುಟ್ಟ ಪಾನ್ ಶಾಪ್, ಕಿರಾಣಿ ಅಂಗಡಿ, ಡಾಬಾ, ಹೋಟೆಲ್‍ಗಳಲ್ಲೂ ಮದ್ಯ ಪೂರೈಕೆ ಆಗ್ತಿದೆ. ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಈ ಅಕ್ರಮ ದಂಧೆ ಬಯಲಾಗಿದೆ.
ಈ ಕ್ಷೇತ್ರದ ಜನರು ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಿ ನೀರು ಪೂರೈಕೆ ಬಗ್ಗೆ ಚಿಂತಿಸಬೇಕಾದ ಇಲ್ಲಿನ ಶಾಸಕರು ಬೀದಿಗೊಂದು ಬಾರ್ ಅಂಗಡಿ ತೆರೆದು ಲಾಭಿ ನಡೆಸ್ತಿದ್ದಾರೆ. ಈ ಕೆಲಸಕ್ಕೆ ಬೇರೆ ಬೇರೆ ಪಕ್ಷದವರ ಕೂಡ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಬಕಾರಿ ಅಧಿಕಾರಿಯನ್ನ ಕೇಳಿದ್ರೆ ಮೇಲಾಧಿಕಾರಿಗಳನ್ನ ಕೇಳಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಇನ್ನು ಈ ಕ್ಷೇತ್ರದ ಜನತೆ ಹನಿ ಹನಿ ನೀರಿಗೆ ಪರದಾಡ್ತಿದ್ದಾರೆ. ಕಿಲೋಮೀಟರ್‍ಗಟ್ಟಲೇ ಸೈಕಲ್‍ನಲ್ಲಿ ಹೋಗಿ ನೀರು ತರೋ ಪರಿಸ್ಥಿತಿ ಇದೆ. ಮದ್ಯವನ್ನ ಸಲೀಸಾಗಿ ಒದಗಿಸೋ ನಮ್ಮ ಶಾಸಕರಿಗೆ ನೀರು ಪೂರೈಸೋದು ಮಾತ್ರ ತಿಳೀತಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ