ಬೆಂಗಳೂರು: ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ ಪಾಪಟಪಲ್ಲಿ-ಡೋರ್ನಕಲ್ ಬೈಪಾಸ್ ನಿಲ್ದಾಣಗಳಲ್ಲಿ ಮೂರನೇ ಮಾರ್ಗದ (ಪ್ಯಾಚ್ ಟ್ರಿಪ್ಲಿಂಗ್) ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದಾಗಿ ಬೆಂಗಳೂರಿನಿಂದ ವಿವಿಧ ಮಾರ್ಗಗಳಲ್ಲಿ ಹೊರಡುವ ಈ ಕೆಳಗಿನ ರೈಲು ಸೇವೆಗಳನ್ನು (Train Service) ರದ್ದುಗೊಳಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಯಾವ್ಯಾವ ರೈಲುಗಳ ಸಂಚಾರ ರದ್ದು?
* ದಾನಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06509) ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಇದೇ ಅಕ್ಟೋಬರ್ 13ರಂದು ಸೇವೆ ಆರಂಭಿಸಬೇಕಿತ್ತು. ಅದರ ಸೇವೆ ಶುರುವಾಗುವ ಮೊಲದೇ ರೈಲು ಸಂಚಾರ ರದ್ದುಗೊಳಿಸಲಾಗಿದೆ.
* ಅಕ್ಟೊಬರ್ 15 ರಂದು ಪ್ರಾರಂಭವಾಗಬೇಕಿದ್ದ ದಾನಾಪುರ ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06510) ರದ್ದುಗೊಳಿಸಲಾಗಿದೆ.
* ಯಶವಂತಪುರ ತುಘಲಕಾಬಾದ್ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು (00629) ಅ.12 ಮತ್ತು ಅ.15 ರಂದು ಪ್ರಾರಂಭವಾಗುವುದಿತ್ತು, ಅದ್ರೆ ರದ್ದುಗೊಳಿಸಲಾಗಿದೆ.
* ಅಕ್ಟೊಬರ್ 12 ಮತ್ತು 16 ರಂದು ಪ್ರಾರಂಭವಾಗಲಿದ್ದ ತುಘಲಕಾಬಾದ್ -ಯಶವಂತಪುರ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 00630) ಪ್ರಯಾಣಗಳನ್ನು ರದ್ದುಗೊಳಿಸಲಾಗುತ್ತಿದೆ.
* ರೈಲು ಸಂಖ್ಯೆ 03251 ದಾನಾಪುರ SMVT ಬೆಂಗಳೂರು ದ್ವೈವಾರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ಅಕ್ಟೋಬರ್ 12 ಮತ್ತು 13 ರಂದು ಸಂಚರಿಸಬೇಕಿತ್ತು ಕಾಮಗಾರಿ ಹಿನ್ನೆಲೆ ಇದರ ಸಂಚಾರ ಕೂಡ ಸ್ಥಗಿತಗೊಳ್ಳಲಿದೆ.
* SMVT ಬೆಂಗಳೂರು ದಾನಾಪುರ ದ್ವೈವಾರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರ (03252) ಅಕ್ಟೋಬರ್ 14 ಮತ್ತು 15 ರಂದು ರದ್ದಾಗಿದೆ.
* ದಾನಾಪುರ SMVT ಬೆಂಗಳೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 03259) ಸಂಚಾರ ಅಕ್ಟೋಬರ್ 14 ರಂದು ಸಂಚರಿಸುತ್ತಿಲ್ಲ. ಪ್ರಯಾಣಿಕರು ಗಮನಿಸಿ ಪ್ರಯಾಣವನ್ನು ಪ್ಲಾನ್ ಮಾಡಿಕೊಳ್ಳಬೇಕು.
* ಕೊನೆಯದಾಗಿ SMVT ಬೆಂಗಳೂರು ದಾನಾಪುರ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 03260) ಅಕ್ಟೋಬರ್ 16 ರಂದು ಸೇವೆ ನೀಡದೇ ಸಂಚಾರ ಸ್ಥಗಿತಗೊಳಿಸಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.