ಆರ್‌ಎಕ್ಸ್ ಸೂರಿ (RX Soori) ಹಾಗೂ ಭೈರಾದೇವಿ ಸಿನಿಮಾದ ನಿರ್ದೇಶಕ ಶ್ರೀಜೈ (Srijai) ನಿರ್ದೇಶನದ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ವಿಜಯದಶಮಿಯ ವಿಶೇಷವಾಗಿ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಸರಳವಾಗಿ ಮಾಡಿದೆ ಚಿತ್ರತಂಡ. ಪ್ರೊಡಕ್ಷನ್ ನಂ.1 ವರ್ಕಿಂಗ್ ಟೈಟಲ್‌ನಲ್ಲಿ ಸಿನಿಮಾ ಅನೌನ್ಸ್ ಮಾಡಿದ್ದು, ಸದ್ಯದಲ್ಲಿಯೇ ಮುಹೂರ್ತ ನೆರವೇರಿಸಲು ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ.
ಈ ಸಿನಿಮಾದ ನಾಯಕನಾಗಿ ಸಂದೀಪ್ ನಾಗರಾಜ್ (Sandeep Nagaraj) ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಸಂದೀಪ್ ನಾಗರಾಜ್ ಗೂಗ್ಲಿ (Googly) ಹಾಗೂ ಗೋವಿಂದಾಯ ನಮಃ ಚಿತ್ರದಲ್ಲಿ ಸಹಕಲಾವಿದನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಮಾಸ್ ಹೀರೋ ಆಗಿ ಈ ಚಿತ್ರದ ಮೂಲಕ ಎಂಟ್ರಿಕೊಡಲಿದ್ದಾರೆ ಸಂದೀಪ್. ಭೈರಾದೇವಿ ಸಿನಿಮಾ ನಂತರ ಮಾಸ್ ಎಲಿಮೆಂಟ್ ಚಿತ್ರ ಮಾಡಲು ನಿರ್ದೇಶಕ ಶ್ರೀಜೈ ಮುಂದಾಗಿದ್ದಾರೆ. ಇದನ್ನೂ ಓದಿ: ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಟೀಮ್‌ನಿಂದ ಗಿಫ್ಟ್
ಡ್ರೀಮ್ ವರ್ಲ್ಡ್ ಸಿನಿಮಾಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಸೋಲೋಮನ್ ಚಿತ್ರದ ಕ್ಯಾಮೆರಾ ನಿರ್ವಹಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾ ಖ್ಯಾತಿಯ ಸಂಕಲನಕಾರ ಶ್ರೀಕಾಂತ್ ಈ ಸಿನಿಮಾಗೆ ಸಂಕಲನ ಮಾಡಲಿದ್ದಾರೆ. ಭೈರಾದೇವಿ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದ, ಸೆಂಥಿಲ್ ಪ್ರಶಾಂತ್ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇನ್ನುಳಿದ ಕಲಾವಿದರನ್ನ ಸಿನಿಮಾ ಮುಹೂರ್ತದ ವೇಳೆಗೆ ಪರಿಚಯಿಸಲಿದೆ ಚಿತ್ರತಂಡ. ಮುಹೂರ್ತದ ಬಳಿಕ ಶೀಘ್ರವೇ ಸಿನಿಮಾದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.