ರೀಲ್ಸ್ ಮಾಡುತ್ತ ಸದಾ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ನಿವೇದಿತಾ ಗೌಡ (Niveditha Gowda), ಬಿಗ್‍ಬಾಸ್ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಜನತೆಗೆ ಚಿರಪರಿಚಿತವಾಗಿದ್ದಾರೆ. ರೀಲ್ಸ್ ಸುಂದರಿ ವೈಯಕ್ತಿಕ ಜೀವನದಲ್ಲಿಯೂ ಹಲವು ಏರಿತಗಳನ್ನು ಕಂಡಿದ್ದಾರೆ. ಸಿನಿಮಾದಲ್ಲಿ ಕೆರಿಯರ್ ಆರಂಭವಾಗುತ್ತಿರುವಾಗಲೇ ಸಂಸಾರ, ಮಕ್ಕಳು ಬೇಡವೆಂದು ಗಂಡನಿಗೆ ಡಿವೋರ್ಸ್ ಕೊಟ್ಟ ನಿವೇದಿತಾ ಇದೀಗ ಜಗತ್ತನ್ನು ಸುತ್ತಾಡುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ ಹಾಗೂ ಕಿರುತೆರಯ ರಿಯಾಲಿಟಿ ಶೋಗಳಲ್ಲಿ ಬ್ಯೂಸಿ ಆಗಿರುವ ಅವರು ಗ್ಯಾಪ್ ಇದ್ದಾಗಲೆಲ್ಲಾ ದೇಶ-ವಿದೇಶ ಸುತ್ತಾಟ ನಡೆಸುತ್ತಾರೆ.
View this post on Instagram
ನಿವೇದಿತಾ ಗೌಡ ಇತ್ತೀಚೆಗೆ ಅಮೆರಿಕದ ಟ್ರಿಪ್ ಮುಗಿಸಿಕೊಂಡು ಬಂದಿದ್ದರು. ಬಳಿಕ ಇದೀಗ ವಿಯೆಟ್ನಾಂ (Vietnam) ಪ್ರವಾಸಕ್ಕೆ ತೆರಳಿದ್ದಾರೆ. ಜೊತೆಗೆ ಸ್ನೇಹಿತೆಯನ್ನೂ ಕರೆದುಕೊಂಡು ಹೋಗಿದ್ದಾರೆ. ವಿಯೆಟ್ನಾಂ ಬೀದಿಯಲ್ಲಿ ರಾತ್ರಿ ಹೊತ್ತಲ್ಲಿ ನಿಂತು ನಿವೇದಿತಾ ಕಣ್ಣೀರು ಹಾಕಿದ್ದಾರೆ. ನಿವೇದಿತಾ ಕಣ್ಣೀರಾಕುತ್ತಿದ್ದರೆ, ಜೊತೆಗಿದ್ದ ಸ್ನೇಹಿತೆ ಸಹಾಯಕ್ಕೆ ಬಂದಿಲ್ಲ. ಆದ್ರೆ ಅವರು ಕಣ್ಣೀರು ಹಾಕಿದ್ದು ಯಾಕೆ ಅನ್ನೋದು ಮಾತ್ರ ಗೊತ್ತಾಗಿಲ್ಲ.
ನಿವೇದಿತಾ ಕಣ್ಣೀರು ಹಾಕಿದ ವಿಡಿಯೋ ಮಾತ್ರ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸೀರಿಯಲ್, ಸಿನಿಮಾ ಹಾಗೂ ರಿಯಾಲಿಟಿ ಶೋ ನಡುವೆ ಆಗಾಗ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಾ ಮನರಂಜನೆ ನೀಡುವ ಹಾಟ್ ಬೆಡಗಿ ಕಣ್ಣೀರಿಟ್ಟಿದ್ದು ಯಾಕೆ ಎಂದು ಫ್ಯಾನ್ಸ್ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.