ನವದೆಹಲಿ: ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ವಿಜಯದಶಮಿಯ (Vijaya Dashami) ಶುಭಾಶಯ ಕೋರಿದ್ದಾರೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ವಿಜಯದಶಮಿಯು ದುಷ್ಟ ಮತ್ತು ಸುಳ್ಳಿನ ಮೇಲೆ ಒಳ್ಳೆಯದು ಮತ್ತು ಸದಾಚಾರದ ವಿಜಯವನ್ನು ಆಚರಿಸುತ್ತದೆ. ಧೈರ್ಯ, ಬುದ್ಧಿವಂತಿಕೆ ಮತ್ತು ಭಕ್ತಿ ಯಾವಾಗಲೂ ನಮ್ಮ ಮಾರ್ಗಗಳಿಗೆ ಮಾರ್ಗದರ್ಶನ ನೀಡಲಿ ಎಂದು ಆಶಿಸಿದ್ದಾರೆ. ಇದನ್ನೂ ಓದಿ: ಕೇಸರಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ
Vijaya Dashami celebrates the triumph of good and righteousness over evil and falsehood. May courage, wisdom and devotion always guide our paths.
Wishing my fellow Indians a happy Vijaya Dashami.
— Narendra Modi (@narendramodi) October 2, 2025
ಸಮಸ್ತ ಭಾರತೀಯರಿಗೆ ವಿಜಯ ದಶಮಿಯ ಶುಭಾಶಯಗಳು ಎಂದು ಮೋದಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುಜರಾತ್‌ನ ಭುಜ್‌ಗೆ ಆಗಮಿಸಿ, ಸೇನಾ ನೆಲೆಯಲ್ಲಿ ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ದಸರಾ ಸಂಭ್ರಮಾಚರಣೆ ಮಾಡಿದ್ದಾರೆ. ಇದನ್ನೂ ಓದಿ: ಅರಮನೆ ನಗರಿಯಲ್ಲಿ ದಸರಾ ವೈಭವ – ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ