ನಟಿ ಹಾಗೂ ನಿರೂಪಕಿ ಅನುಶ್ರೀ (Anchor Anushree) ಕಳೆದ ತಿಂಗಳು ರೋಷನ್ ಜೊತೆ ಹಸೆಮಣೆ ಏರಿದ್ದರು. ಮದುವೆಯಾದ ಬಳಿಕ ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಅನುಶ್ರೀ ಈ ವೀಕೆಂಡ್ ನಲ್ಲಿ ಮಸ್ತ್ ಮಜಾ ಮಾಡಿದ್ದಾರೆ. ರೋಷನ್ ಜೊತೆ ಜಾಲಿ ಟ್ರಿಪ್ ಮಾಡಿರುವ ಕ್ಷಣಗಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ರೋಷನ್ ಜೊತೆ ಮಳೆಯಲಿ ಜೊತೆಯಲಿ ಅಂತಾ ಸಖತ್ ಎಂಜಾಯ್ ಮಾಡಿದ್ದಾರೆ. ಜೊತೆಗೆ ಕೆದರಿದ ಕೂದಲು, ಕೆಸರಿನಲ್ಲಿ ಪ್ರಯೋಗಳು ಪ್ರೀತಿಯ ಕ್ಷಣಗಳಲ್ಲಿ ಸೆರೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಅನುಶ್ರೀ ಹಾಕಿರುವ ಪೋಸ್ಟ್ ಗೆ ಜಾಲತಾಣದಲ್ಲಿ ಸಖತ್ ಮೆಚ್ಚುಗೆ ಬರುತ್ತಿದೆ. ಮಾತಿನ ಮಲ್ಲಿ ಅನುಶ್ರೀ ಕೊಂಚ ಬ್ರೇಕ್ ತೆಗೆದುಕೊಂಡು ಸುತ್ತಾಟ ನಡೆಸಿದ್ದಾರೆ.
ಅನುಶ್ರೀ-ರೋಷನ್ ಜೋಡಿ ಪ್ರೀತಿಸಿ ಮದುವೆಯಾಗಿದ್ದಾರೆ. ಐಟಿ ಉದ್ಯೋಗಿಯಾಗಿರುವ ರೋಷನ್ ಹಾಗೂ ಅನುಶ್ರೀ ಇಬ್ಬರೂ ಅಪ್ಪು ಅಭಿಮಾನಿಗಳು. ಸರಳವಾಗಿ ಮದುವೆಯಾದ ಅನುಶ್ರೀ ಇದೀಗ ಜಾಲಿ ಟ್ರಿಪ್ ನಡೆಸಿದ್ದಾರೆ. ಈ ಫೋಟೋ ಈಗ ಜಾಲತಾಣದಲ್ಲಿ ವೈರಲ್ ಆಗ್ತಿವೆ.