ಮಂಡ್ಯ: ಕೆಆರ್‌ಎಸ್ ಜಲಾಶಯದಲ್ಲಿ (KRS Dam) ರೈತರ ವಿರೋಧದ ನಡುವೆಯೂ ಇಂದಿನಿಂದ 5 ದಿನಗಳ ಕಾಲ ನಡೆಯಲಿರುವ ಕಾವೇರಿ ಆರತಿಗೆ (Cauvery Aarti) ಚಾಲನೆ ಸಿಕ್ಕಿದೆ. ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಗಂಗಾರತಿ ಮಾದರಿಯಲ್ಲಿ ತರಬೇತಿ ಪಡೆದ ಸ್ಥಳೀಯ ಪುರೋಹಿತರು ಕಾವೇರಿ ಆರತಿ ನೆರವೇರಿಸಿದರು. ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರದಿಂದಲೂ ಕನ್ನಂಬಾಡಿ ಕಟ್ಟೆ ಮಿಂಚುತ್ತಿದ್ದು, ದಸರಾ ನೋಡಲು ಬರುವ ರಾಜ್ಯ, ಹೊರರಾಜ್ಯಗಳ ಜನರಿಗೆ ಕಾವೇರಿ ಆರತಿಯೂ ಈ ಬಾರಿ ಆಕರ್ಷಣೆಯಾಗಿದೆ. ಇದನ್ನೂ ಓದಿ: ಇಂದಿನಿಂದ 5 ದಿನ ಕಾವೇರಿ ಆರತಿ – ಮದುವಣಗಿತ್ತಿಯಂತೆ ಸಿಂಗಾರಗೊಂಡ ಕೆಆರ್‌ಎಸ್
ಕೆಆರ್‌ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ 5 ದಿನ ಉಚಿತ ಪ್ರವೇಶ ಇದ್ದು, ಟೋಲ್ ಕೂಡ ಇರುವುದಿಲ್ಲ.

