ಬೆಂಗಳೂರು: ದೇಶದ ಆತ್ಮವನ್ನು ಅರಿತುಕೊಂಡ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಬೇಸರ ವ್ಯಕ್ತಪಡಿಸಿದ್ದಾರೆ.
ಎಸ್.ಎಲ್ ಭೈರಪ್ಪ (SL Bhyrappa) ಅವರ ನಿಧನದ ಬಗ್ಗೆ ಸಂತಾಪ ಸೂಚಿಸುತ್ತ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಭೈರಪ್ಪ ಅವರ ದೇಹತ್ಯಾಗದ ಪರಿಸ್ಥಿತಿಯಿದೆ ಎಂದು ಗೊತ್ತಿತ್ತು. ನಾನು ಎರಡು ವರ್ಷದ ಹಿಂದೆ ಸಾವರ್ಕರ್ ಪುರಸ್ಕಾರವನ್ನು ಪಡೆಯುತ್ತಿದ್ದಾಗ ಅವರಿಗೆ ನೆನಪಿನ ಶಕ್ತಿ ಕಡಿಮೆ ಆಗಿರೋದು ಎಲ್ಲವೂ ಗೊತ್ತಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಭೈರಪ್ಪರ ಸಾಹಿತ್ಯದಲ್ಲಿ ಬೇರೆ ಸಾಹಿತಿಗಳಂತೆ ಕಾಲ್ಪನಿಕತೆ ಇರಲಿಲ್ಲ, ವಸ್ತುನಿಷ್ಠತೆ ಇತ್ತು: ಪ್ರತಾಪ್ ಸಿಂಹ
ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಾಗ ಉಂಟಾಗುವ ನಿರ್ವಾತವು ಇಂದು ಭೈರಪ್ಪ ಅವರನ್ನು ಕಳೆದುಕೊಂಡಾಗ ಆಗಿದೆ. ದೇಶವನ್ನು ಪರಿಪೂರ್ಣವನ್ನು ಅರಿತುಕೊಂಡು ಬದುಕಬೇಕು ಅಂದುಕೊಂಡ ವ್ಯಕ್ತಿಗಳಲ್ಲಿ ಭೈರಪ್ಪ ಅವರು ಒಬ್ಬರಾಗಿದ್ದರು. ಅವರನ್ನು ಕಳೆದುಕೊಂಡು ಎಲ್ಲಿಂದ ಮಾತು ಶುರು ಮಾಡ್ಬೇಕು, ಎಲ್ಲಿಂದ ಅಂತ್ಯ ಮಾಡ್ಬೇಕು ಅಂತ ಗೊತ್ತಾಗದಿರುವಂತ ಪರಿಸ್ಥಿತಿ ಎದುರಾಗಿದೆ ಶೋಕ ವ್ಯಕ್ತಪಡಿಸಿದರು. ಇದನ್ನೂ ಓದಿ: ತಿಂಗಳಿಗೆ 5 ರೂ. ಸಂಬಳಕ್ಕೆ ಸಿನಿಮಾ ಟಾಕೀಸ್‌ನಲ್ಲಿ ಗೇಟ್ ಕೀಪರ್ ಆಗಿದ್ರು ಭೈರಪ್ಪ
ಕಡು ಬಡತನದಲ್ಲಿ ಬಂದತಹ ವ್ಯಕ್ತಿ, ತನ್ನ ಊರಿಗೆ ಹೋಗಿ ಸರಸ್ವತಿ ಸಮ್ಮಾನ್ ಪುರಸ್ಕಾರ ಸ್ವೀಕರಿಸಿ, ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿದ ದಿನ ಅವರ ಭಾವ ಹೇಗಿದ್ದಿರಬಹುದು. ಒಬ್ಬ ವ್ಯಕ್ತಿಗೆ ನೊಬೆಲ್ ಪ್ರಶಸ್ತಿಯೂ ಅತ್ಯಂತ ಶ್ರೇಷ್ಠವಾದ ಗೌರವ ಅಲ್ಲ. ತನ್ನ ಊರಿನ ಜನ ಕರೆದು ಸನ್ಮಾನ ಮಾಡಿದ್ದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ. ಅದು ಭೈರಪ್ಪ ಅವರಿಗೆ ಸಿಕ್ಕಿದೆ ಎಂದು ಹೇಳಿದ್ದಾರೆ.
ಕನ್ನಡದ ಸಾಹಿತಿ ಒಬ್ಬರಿಗೆ 100ನೇ ಕೃತಿಗೆ ಅಕಾಡೆಮಿ ಪ್ರಶಸ್ತಿ ಬಂತು ಎಂದು ಹೇಳಿದಾಗ ಭೈರಪ್ಪ ಅವರು 1 ಪ್ರಶಸ್ತಿಗೆ 100 ಪುಸ್ತಕ ಬರೆಯಬೇಕಾಯಿತ ಅಂತಾ ಕೇಳಿದ್ರಂತೆ. ಭೈರಪ್ಪ ಅವರ ಪ್ರತಿಯೊಂದು ಪುಸ್ತಕವೂ ಕೂಡಾ ಅಂಬಾರಿಯಲ್ಲಿ ಮೆರವಣಿಗೆ ಮಾಡುವಂತಹ ಅದ್ಭುತವಾದ ಸಾಹತ್ಯವನ್ನು ಸೃಜಿಸಿದ್ದಾರೆ ಎಂದಿದ್ದಾರೆ
ಅವರ ಭಾಷೆ, ಒಂದು ವಸ್ತುವಿನ ಬಗ್ಗೆಗಿನ ಅಧ್ಯಯನ, ಇಂದಿನ ಯುಗಕ್ಕೆ ಕಟ್ಟಿಕೊಳ್ಳುವ ರೀತಿ ಎಲ್ಲವೂ ಬಹಳ ವಿಶಿಷ್ಟವಾದ್ದದ್ದು. ಅವರನ್ನು ಇತರ ಲೇಖಕರಿಗೆ ಹೋಲಿಸಲೂ ಸಾಧ್ಯವಾಗದ ಲೇಖಕರಾಗಿದ್ದಾರೆ ಎಂದು ಭೈರಪ್ಪ ಅವರು ಅಕ್ಷರ ಲೋಕಕ್ಕೆ ನೀಡಿದ ಕೊಡುಗೆಯನ್ನು ಬಣ್ಣಿಸಿದ್ದಾರೆ.
ಬರಹಗಾರರ ಹೃದಯವು ಇಂದಿನ ದಿನಗಳನ್ನು ನೋಡುವುದಿಲ್ಲ. ಮುಂದಿನ 50 ವರ್ಷದ ಬಗ್ಗೆ ಆಲೋಚನೆಯನ್ನು ಮಾಡುತ್ತದೆ. ಕೆಲವೊಬ್ಬರು ಇಂದಿನ ದಿನಕ್ಕೆ ಬೇಕಾಗುವ ಸಾಹಿತ್ಯವನ್ನು ನೀಡುತ್ತಾರೆ. ಅದೇನೂ ಅಷ್ಟು ಕ್ಲಿಷ್ಟದ ವಿಷಯಗಳಲ್ಲ. ಆದರೆ ಕೆಲವೊಬ್ಬರು ಮುಂದಿನ ಹತ್ತಾರು ವರ್ಷದ ನಂತರ ಈ ಸಮಸ್ಯೆ ಜ್ವಲಂತವಾಗಿರುತ್ತದೆ. ಆ ಸಂದರ್ಭದಲ್ಲೂ ಅದಕ್ಕೆ ಇದೇ ಉತ್ತರವಾಗಿರುತ್ತದೆ ಎಂದು ಆಲೋಚನೆ ಮಾಡುವುದು ಅಸಮಾನ್ಯ ಸಾಮರ್ಥ್ಯ. ಭೈರಪ್ಪ ಅವರ ಪರ್ವ ಹೀಗೆ ಅವರ ಎಲ್ಲಾ ಪುಸ್ತಕದಲ್ಲಿ ಕೂಡಾ ಕಾಳಜಿಯುಕ್ತ ಸಮಾಜದ ನಿರ್ಮಾಣದ ಕಡೆ ಗಮನ ಕೊಡೋದು ಬಹಳ ವಿಶಿಷ್ಟವಾಗಿರುವ ಸಂಗತಿ ಎಂದು ಹೇಳಿದ್ದಾರೆ.
ನಾನು ಭೈರಪ್ಪ ಅವರ ಕೃತಿಗಳ ಮೇಲಾದ ಸೆಮಿನಾರ್‌ಗಳನ್ನು ಬೇರೆಯಾವುದೇ ಸಾಹಿತಿಗಳ ಕೃತಿಗಳದ್ದೂ ಆಗಿಲ್ಲ. ಒಬ್ಬ ವ್ಯಕ್ತಿಯ ವಿಚಾರ ಬಂದಾಗ ಅವರ ಸಮಗ್ರ ಸಾಹಿತ್ಯದ ಮೇಲೆ ಸೆಮಿನಾರ್ ಆಗುತ್ತದೆ. ಆದರೆ ಭೈರಪ್ಪ ಅವರ ಪ್ರತಿಯೊಂದು ಕೃತಿಯ ಬಗ್ಗೆ ಸೆಮಿನಾರ್ ಆಗಿದೆ. ಎಸ್.ಆರ್ ಲೀಲಾ, ಶತಾವಧಾನಿ ಗಣೇಶ್ ಅವರು ಭೈರಪ್ಪ ಅವರ ಕೃತಿಯ ಮೇಲೂ ಭಿನ್ನ ಭಿನ್ನವಾಗಿ ಆಯಾಮಗಳಲ್ಲಿ ಚೆಲ್ಲುತ್ತಿದ್ದ ಬೆಳಕು ಅದು ಸಾಮಾನ್ಯವಾದ್ದುದ್ದಾಗಿರಲಿಲ್ಲ. ಅವರ ಕೃತಿಗಳ ವಿಮರ್ಶಕರಾಗಿಯೇ ಸಮಾಜದಲ್ಲಿ ದೊಡ್ಡವರಾಗಿ ಬೆಳೆದರು ಎಂದಿದ್ದಾರೆ.
ಭೈರಪ್ಪ ಅವರ ಕಾದಂಬರಿಯನ್ನು ಓದುವುದೇ ಒಂದು ರಸಸ್ವಾದವಾದ್ರೆ, ಅದನ್ನು ಓದಿದವರ ದೃಷ್ಟಿಕೋನದಲ್ಲಿ ಕೇಳೋದೇ ಒಂದು ಚೆಂದ. ಇದು ಭೈರಪ್ಪನವರಿಗೆ ಮಾತ್ರ ಸಿಗುವ ಅಪರೂಪದ ಗೌರವ ಎಂದು ನುಡಿದಿದ್ದಾರೆ.
ಅನಂತ್‌ನಾಗ್ ಅವ್ರು ಸಾಹಿತ್ಯ ಒಂದರ ದೃಷ್ಟ್ರಿಯಿಂದ ಹಿಮಾಲಯ ಅಂತಾ ಹೇಳಿದ್ರೋ ಗೊತ್ತಿಲ್ಲ. ಸಾಹಿತ್ಯ ಒಂದರಲ್ಲಿ ಭೈರಪ್ಪ ಅವ್ರು ಹಿಮಾಲಯ ಅಂತ ಅಂದ್ರೆ ಅದು ಅಲ್ಲ. ಅವರು ಶ್ರೇಷ್ಠ ಕಾದಂಬರಿ ನೀಡುವುದರ ಜೊತೆಗೆ ರಾಷ್ಟ್ರೀಯ ಹಿತಾಸಕ್ತಿಯ ವಿಚಾರ ಬಂದಾಗ ಭೈರಪ್ಪ ಅವರ ಉತ್ತರವೇ ಬೇರೆಯಾಗಿತ್ತು. ಟಿಪ್ಪು ವಿಚಾರವಾಗಿ ಭಾರೀ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ಶಿಕ್ಷಣ ಸಚಿವರಾಗಿ ಡಿ.ಹೆಚ್ ಶಂಕರ್‌ಮೂರ್ತಿ ಅವರ ಹೇಳಿಕೆ ಕೊಟ್ಟರು ಎಂದು ಸೈಧಾಂತಿಕರರೆಲ್ಲ ಮುಗಿಬಿದ್ದಿದ್ದರು. ಆ ವಿಚಾರವಾಗಿ ಎಲ್ಲರ ಒಂದೊಂದು ಲೇಖನವನ್ನು ಬರೆಯುತ್ತಿದ್ದರು. ಆಗ ಸಂದರ್ಭ ಪತ್ರಿಕೆಯೊಂದರಲ್ಲಿ ಭೈರಪ್ಪ ಅವರು ಬರೆದ ಒಂದು ಲೇಖನ ಬಂದ ಮೇಲೆ ಎಲ್ಲರೂ ಸುಮ್ಮನಾದರು. ಆಗ ಪತ್ರಿಕೆಯವರೇ ಹೇಳಿದರೂ ಇನ್ನೇನೂ ಹೇಳಲು ಉಳಿದಿಲ್ಲ. ಇನ್ನೇನು ಈ ವಿಚಾರವನ್ನೂ ಇಲ್ಲಿಗೆ ನಿಲ್ಲಿಸಬಹುದಾ ಎಂದು ಕೇಳಿದ್ರು. ಇದು ಭೈರಪ್ಪ ಅವರ ಸಾಧನೆಯಾಗಿದೆ ಎಂದರು.
ಭೈರಪ್ಪ ಅವರು ಯಾವುದಾದರೂ ವಿಚಾರವೊಂದು ಬಿಟ್ಟು, ಬೇರೆ ವಿಚಾರವನ್ನು ಬಿಟ್ಟು ಕೆದಕಿ ಕೇಳುತ್ತಿದ್ದರು. ಆ ವಿಚಾರದ ಬಗ್ಗೆ ಇನ್ನಷ್ಟು ವಿಚಾರಗಳು ಹುಡುಕಿಕೊಡಬಹುದಾ ಎಂದು ಕೇಳುತ್ತಿದ್ದರು. ನಂತರ ಮಾಹಿತಿಯನ್ನು ಪಡೆದುಕೊಂಡು ಬಳಿಕ ಅವರ ಭಾಷಣದಲ್ಲಿ ಈ ವಿಷಯಗಳನ್ನು ಅಳವಡಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು.