ಬೆಂಗಳೂರು: ಮತಗಳ್ಳತನ ವಿರೋಧಿ ಅಭಿಯಾನವನ್ನು ತೀವ್ರಗೊಳಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಇಂದು (ಸೆ.18-ಗುರುವಾರ) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಆಳಂದದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಕುರಿತ ದಾಖಲೆಗಳನ್ನು ಬಿಡಗಡೆ ಮಾಡಿದ್ದಾರೆ. ಜೊತೆಗೆ ಸಾಕ್ಷಿಯಿಂದಲೂ ಮಾತನಾಡಿಸಿದ್ದಾರೆ. ಆದ್ರೆ ಈ ಬಗ್ಗೆ ಕರ್ನಾಟಕ ಚುನಾವಣಾ ಆಯೋಗ (Karnataka Election Commission ) ಸ್ಪಷ್ಟನೆ ನೀಡಿದೆ.
2023ರ ಆಳಂದ ಕೇಸ್ ವಿಚಾರದಲ್ಲಿ ಈಗಾಗಲೇ FIR ದಾಖಲಾಗಿದೆ. ಫಾರ್ಮ್ – 7 ಮೂಲಕ ಆನ್‌ಲೈನ್‌ನಲ್ಲಿ 6,018 ಅಪ್ಲಿಕೇಶನ್ ಬಂದಿತ್ತು. 20222ರ ಡಿಸೆಂಬರ್‌ನಲ್ಲಿ ಗರುಡಾ, VHA ಆ್ಯಪ್ ಮೂಲಕ ಬಂದಿತ್ತು. ದೊಡ್ಡ ಸಂಖ್ಯೆಯಲ್ಲಿ ಅಪ್ಲಿಕೇಶನ್ ಬಂದಾಗ ಸಹಜವಾಗಿ ಅನುಮಾನ ಬಂದು ERO, AERO, BLO ಗಳು ಪರಿಶೀಲನೆ ಮಾಡಿದ್ದಾರೆ. ಅದ್ರಲ್ಲಿ ಬರೀ 24 ಅಪ್ಲಿಕೇಶನ್ ಮಾತ್ರ ದಾಖಲೆ ಸರಿಯಾಗಿದ್ವು. 5,994 ತಪ್ಪು ಮಾಹಿತಿಯಿಂದ ಕೂಡಿತ್ತು. ಹೀಗಾಗಿ ಇವೆಲ್ಲವನ್ನು ತಿರಸ್ಕರಿಸಲಾಯಿತು. ಡಿಲೀಟ್ ಮಾಡಲಾಗಿಲ್ಲ ಅಂತಾ ಹೇಳಿದೆ.
ಅದಾದ ಬಳಿಕ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಯಿತು. ಎಲ್ಲಾ ರೀತಿಯ ಪರಿಶೀಲನೆ ಮಾಡಿದ ಬಳಿಕ ಮುಖ್ಯ ಚುನಾವಣಾಧಿಕಾರಿ ನೇತೃತ್ವದಲ್ಲಿ ಸಭೆಯೂ ನಡೆಯಿತು. ತನಿಖಾಧಿಕಾರಿ, ಸೈಬರ್ ತಜ್ಞರ ಜೊತೆ ಈ ಬಗ್ಗೆ ವಿಶ್ಲೇಷಣೆ ನಡೆಸಲಾಯಿತು ಅಂತಾ ಸ್ಪಷ್ಟನೆ ನೀಡಿದೆ.