ಸಾಹಸಸಿಂಹ, ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ (Vishuvardhan) ಅವರ 75ನೇ ಜನ್ಮದಿನದ (ಸೆ.18) ಹಿನ್ನೆಲೆ ಅಭಿಮಾನ್ ಸ್ಟುಡಿಯೋ ಬಳಿ 2 ಎಕರೆ ಖಾಸಗಿ ಜಾಗದಲ್ಲಿ ಬರ್ತ್‌ಡೇಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಭಿಮಾನ್ ಸ್ಟುಡಿಯೋಗೆ ಪ್ರವೇಶ ನೀಡದ ಹಿನ್ನೆಲೆ ಪರ್ಯಾಯ ಜಾಗದಲ್ಲಿ ವಿಷ್ಣು ಜನ್ಮದಿನಾಚರಣೆಗೆ ವ್ಯವಸ್ಥೆ ಮಾಡಲಾಗಿದೆ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಬರ್ತ್‌ಡೇ ಸೆಲಬ್ರೇಷನ್‌ಗೆ ಸಿದ್ಧತೆ ನಡೆದಿದೆ. ಇದನ್ನೂ ಓದಿ: ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೆಲುವು – ಸಮಾಧಿ ಸಮೀಪ ಬರ್ತ್‌ಡೇಗೆ ಸಿಕ್ತು ಅನುಮತಿ
ಮಂಟಪ ತಯಾರಿಸಿ ಪೂಜೆ ಮಾಡಿ ಅಮೃತ ಮಹೋತ್ಸವ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ದಾದಾ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ, ರಕ್ತದಾನ ಸಮಾಜಮುಖಿ ಕಾರ್ಯಗಳು ನಡೆಯಲಿವೆ.
ರಾಜ್ಯದ ವಿವಿಧ ಮೂಲೆಗಳಿಂದ ಅಭಿಮಾನಿಗಳು ಆಗಮಿಸಲಿದ್ದು, ಮೈಸೂರಿನ ಸ್ಮಾರಕದಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬದ ಆಚರಣೆ ನಡೆಯಲಿದೆ. ಕುಟುಂಬಸ್ಥರು ಮೈಸೂರಿಗೆ ತೆರಳಿ ಪೂಜೆ ಸಲ್ಲಿಸಿ ಅಮೃತ ಮಹೋತ್ಸವ ಆಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಹುಟ್ಟುಹಬ್ಬದಂದು ಅಭಿಮಾನ್ ಸ್ಟುಡಿಯೋದಲ್ಲಿ ಸಂಭ್ರಮಾಚರಣೆಗೆ ಹೈಕೋರ್ಟ್ ಬ್ರೇಕ್
ಪುಣ್ಯಭೂಮಿಯಲ್ಲಿ ವಿಷ್ಣು ಸಮಾಧಿ ತೆರವು ಹಿನ್ನೆಲೆ ಅಭಿಮಾನಿಗಳಲ್ಲಿ ಬೇಸರ ಮೂಡಿದೆ. 75ನೇ ವರ್ಷದ ಹುಟ್ಟುಹಬ್ಬ ಹಾಗೂ ಕರ್ನಾಟಕ ರತ್ನ ಘೋಷಣೆ ಹಿನ್ನೆಲೆ ಅದ್ಧೂರಿ ಸಂಭ್ರಮಾಚರಣೆಯ ಸಿದ್ಧತೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.