– ಹೇಳಿಕೆಯನ್ನು ತಿರುಚಲಾಗಿದೆ ಎಂದು ವಾದಿಸಿದ ವಕೀಲರು
ಬೆಂಗಳೂರು: ಅಟ್ರಾಸಿಟಿ ಪ್ರಕರಣಕ್ಕೆ (Atrocity Case) ಸಂಬಂಧಿಸಿದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ (Basangouda Patil Yatnal) ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್ (High Court) ಸೂಚನೆ ನೀಡಿದೆ.
ಅಟ್ರಾಸಿಟಿ ಕಾಯ್ದೆಯಡಿ ಕೊಪ್ಪಳದಲ್ಲಿ ಎಫ್ಐಆರ್ ದಾಖಲಾಗಿದ್ದನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಕೊಪ್ಪಳ | ದಲಿತ ಮಹಿಳೆಗೆ ಅವಹೇಳನ ಆರೋಪ – ಯತ್ನಾಳ್ ವಿರುದ್ಧ FIR
ವಿಚಾರಣೆ ಸಮಯದಲ್ಲಿ ಯತ್ನಾಳ್ ಪರ ವಕೀಲ ವೆಂಕಟೇಶ ದಳವಾಯಿ, ಸನಾತನ ಧರ್ಮದ ಹೆಣ್ಣು ಮಕ್ಕಳಿಗೆ ಚಾಮುಂಡಿ ತಾಯಿಯನ್ನು ಪೂಜಿಸುವ ಹಕ್ಕಿದೆ. ದಲಿತ ಹೆಣ್ಣುಮಕ್ಕಳರಲಿ ಯಾವುದೇ ಸಮಾಜದವರಿರಲಿ ಎಲ್ಲರಿಗೂ ಹಕ್ಕಿದೆ ಎಂದು ಹೇಳಿರುವ ಹೇಳಿಕೆಯನ್ನು ತಿರುಚಿ ಕೇಸ್ ದಾಖಲು ಮಾಡಲಾಗಿದೆ ಎಂದು ವಾದಿಸಿದರು. ಅಷ್ಟೇ ಅಲ್ಲದೇ ಯತ್ನಾಳ್ ಅವರು ಹೇಳಿದ ಹೇಳಿಕೆಯನ್ನು ಮೊಬೈಲ್ ಮೂಲಕ ಜಡ್ಜ್ ಅವರಿಗೂ ಕೇಳಿಸಿದರು.
ವಿಡಿಯೋ ನೋಡಿದ ಬಳಿಕ ನ್ಯಾ. ಅರುಣ್ ಅವರಿದ್ದ ಏಕಸದಸ್ಯ ಪೀಠ, ಯಾವುದೇ ಪಕ್ಷದವರಿರಲಿ ಒಂದು ಸಮುದಾಯ ಓಲೈಸಿದರೆ ಹೀಗಾಗುತ್ತದೆ. ಭಾರತೀಯರನ್ನು ಭಾರತೀರಂತೆಯೇ ನೋಡಿದರೆ ಈ ಸಮಸ್ಯೆ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟು ಯತ್ನಾಳ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು. ಪೊಲೀಸರ ತನಿಖೆಗೆ ಸಹಕರಿಸಬೇಕು ಎಂದು ಯತ್ನಾಳ್ ಅವರಿಗೆ ಸೂಚಿಸಿತು.