ಮಂಗಳೂರು: ಧರ್ಮಸ್ಥಳ (Dharmasthala) ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಸ್ಥಳ ಮಹಜರು ಮಾಡಲಾಗಿದೆ.
ವಿಶೇಷ ತನಿಖಾ ತಂಡದ ಪೊಲೀಸರು ಸೌಜನ್ಯಳ (Soujanya) ಮಾವ ವಿಠಲ ಗೌಡ (Vital Gowda) ಅವರನ್ನು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿ ಇರುವ ಬಂಗ್ಲೆಗುಡ್ಡಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಸ್ಥಳ ಮಹಜರು ಮಾಡಿದ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ಬೆಳ್ತಂಗಡಿ ಠಾಣೆಗೆ ಮರಳಿದ್ದಾರೆ. ಇದನ್ನೂ ಓದಿ: ಹೆಗ್ಗಡೆ ವಿರುದ್ಧ ಅಪಪ್ರಚಾರಕ್ಕೆ ಕೊಡಗಿನಲ್ಲೂ ನಡೆದಿತ್ತು ಹುನ್ನಾರ – ರೆಡಿಮೇಡ್ ದೂರಿನ ಪ್ರತಿ ನೀಡಿದ್ದ ಬುರುಡೆ ಗ್ಯಾಂಗ್
ವಿಠಲ ಗೌಡ ಮತ್ತು ಜಯಂತ್ ಅವರು ಬುರುಡೆಯನ್ನು ಈ ಜಾಗದಿಂದ ತೆಗೆದು ಚಿನ್ನಯ್ಯನಿಗೆ ನೀಡಿದ ಹಿನ್ನೆಲೆಯಲ್ಲಿ ಸಂಜೆ ಸ್ಥಳ ಮಹಜರು ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಧರ್ಮಸ್ಥಳ ಕೇಸ್; ಕೇರಳ ಕಮ್ಯುನಿಸ್ಟ್ ಪಕ್ಷದ ಸಂಸದನ ಮುಂದೆ ಬುರುಡೆ ಇಟ್ಟಿದ್ದ ಗ್ಯಾಂಗ್
ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್ ಜೊತೆ ವಿಠಲ ಗೌಡ ನಿಕಟ ಸಂಪರ್ಕದಲ್ಲಿದ್ದ ಕಾರಣ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು. ಹೀಗಾಗಿ ಶುಕ್ರವಾರ ವಿಠಲ್ ಗೌಡ ಎಸ್‌ಐಟಿ ಕಚೇರಿಗೆ ಹಾಜರಾಗಿದರು.
