– ಟಾಪ್-10ನಲ್ಲಿ ಏಕೈಕ ಭಾರತೀಯ ಜಡ್ಡು
ಹರಾರೆ: ಐಸಿಸಿ (ICC) ಬಿಡುಗಡೆ ಮಾಡಿದ ಏಕದಿನ ಆಲ್‌ರೌಂಡರ್ ರ‍್ಯಾಂಕಿಂಗ್ (ODI Ranking) ಪಟ್ಟಿಯಲ್ಲಿ ಪಾಕ್ ಮೂಲದ ಜಿಂಬಾಬ್ವೆ ಆಟಗಾರ ಸಿಕಂದರ್ ರಜಾ (Sikandar Raza) ಅಗ್ರಸ್ಥಾನಕ್ಕೇರಿದ್ದಾರೆ.
302 ರೇಟಿಂಗ್ಸ್‌ನೊಂದಿಗೆ ಎರಡು ಸ್ಥಾನ ಮೇಲಕ್ಕೇರಿರುವ ರಜಾ ಅಫ್ಘಾನಿಸ್ತಾನದ (Afghanistan) ಅಜ್ಮತುಲ್ಲಾ ಉಮರ್‌ಜೈ, ನಬಿ ಅವರನ್ನ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ. ಆದ್ರೆ ಟಾಪ್ 10ರಲ್ಲಿ ಭಾರತದ ರವೀಂದ್ರ ಜಡೇಜಾ ಒಬ್ಬರೇ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಐತಿಹಾಸಿಕ ಗೆಲುವಿನ ಸಂತೋಷದ ಕ್ಷಣ ದುರಂತವಾಯ್ತು – ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಕೊಹ್ಲಿ ಟ್ವೀಟ್
ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದ 2 ಪಂದ್ಯಗಳ ಏಕದಿನ ಸರಣಿಯಲ್ಲಿ ಜಿಂಬಾಬ್ವೆ 0-2 ಅಂತರದಲ್ಲಿ ಸೋಲು ಕಂಡಿತ್ತು. ಆದ್ರೆ ಈ ಪಂದ್ಯದಲ್ಲಿ ಸಿಕಂದರ್ ರಜಾ ಅವರ ಪ್ರದರ್ಶನ ಉತ್ತಮವಾಗಿತ್ತು. ಮೊದಲ ಪಂದ್ಯದಲ್ಲಿ 92 ರನ್ ಗಳಿಸಿದ್ರೆ, 2ನೇ ಪಂದ್ಯದಲ್ಲಿ ಅಜೇಯ 59 ರನ್ ಬಾರಿಸಿದ್ದರು. ಬೌಲಿಂಗ್‌ನಲ್ಲಿ ಒಂದು ವಿಕೆಟ್ ಕೂಡ ಪಡೆದಿದ್ದರು. ಇದು ರಜಾ ನಂಬರ್ 1 ಪಟ್ಟಕ್ಕೇರುವಲ್ಲಿ ಸಹಕಾತಿಯಾಯಿತು. ಇದನ್ನೂ ಓದಿ: Women’s World Cup 2025 | ದಾಖಲೆಯ 122 ಕೋಟಿ ಬಹುಮಾನ ಘೋಷಿಸಿದ ಐಸಿಸಿ
ಕಾಶ್ಮೀರಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸಿಕಂದರ್ ರಜಾ
ಸಿಕಂದರ್ ರಜಾ ಮೂಲತಃ ಪಾಕಿಸ್ತಾನದವರು. ಪಾಕ್‌ನ ಸಿಯಾಲ್‌ಕೋಟ್‌ನಲ್ಲಿ ಕಾಶ್ಮೀರಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದವರು. ಆದ್ರೆ 2002ರಲ್ಲಿ ಕುಟುಂಬದೊಂದಿಗೆ ಜಿಂಬಾಬ್ವೆಗೆ ವಲಸೆ ಬಂದರು. ಅಲ್ಲೇ ತಮ್ಮ ವಿದ್ಯಾಭ್ಯಾಸ ಮಾಡಿದರು. 2013ರಲ್ಲಿ ಜಿಂಬಾಬ್ವೆ ಪರ ಪದಾರ್ಪಣೆ ಮಾಡಿದರು. ಅಂದಿನಿಂದ ಜಿಂಬಾಬ್ವೆ ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಆಟಗಾರನಾಗಿದ್ದಾರೆ.
ಇನ್ನೂ ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಕೇಶವ್ ಮಹಾರಾಜ್ 690 ಅಂಕಗಳನ್ನ ಪಡೆದು ಅಗ್ರಸ್ಥಾನ ಉಳಿಸಿಕೊಂಡಿದ್ದರೆ, 659 ಅಂಕ ಪಡೆದಿರುವ ಮತೀಶ ಪಥಿರಣ 2ನೇ ಸ್ಥಾನ, 650 ಅಂಕ ಪಡೆದಿರುವ ಕುಲ್‌ದೀಪ್ ಯಾದವ್ 3ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಟಿ20 ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಮಿಚೆಲ್ ಸ್ಟಾರ್ಕ್