ಮಂಗಳೂರು: ನನ್ನನ್ನು ಕಾರಲ್ಲಿ ಕೂಡಿ ಹಾಕಿ ಹೇಳಿಕೆ ಪಡೆದ್ರು ಎಂದು ಸುಜಾತ ಭಟ್ ಹೊಸ ಕಥೆ ಕಟ್ಟಿದ್ದಾಳೆ. ಇಂತವರ ಹೆಸರು ಹೇಳಿ ಅಂತ ಲಾಯರ್ ಒಬ್ಬರು ಒತ್ತಾಯ ಮಾಡಿದ್ರೂ ಎಂದಿದ್ದಾಳೆ.
ತಿಮರೋಡಿ, ಮಟ್ಟಣ್ಣನವರ್ ಹೆಸರು ಹೇಳೋಕೆ ಹೇಳಿದ್ರು. ನಾವು ಬಚಾವ್ ಮಾಡ್ತಿವಿ ಅಂತ ಹೇಳಿದ್ರು. ಆದ್ರೆ, ಅನನ್ಯ ಭಟ್ ನನ್ನ ಮಗಳೇ, ನಾನು ಎಲ್ಲಾವನ್ನೂ ಎಸ್‌ಐಟಿ ಮುಂದೆ ಹೇಳ್ತೇನೆ. ಆಸ್ತಿ ವಿವಾದ ಇದೆ, ಹಾಗಾಂತ ಇದಕ್ಕೆ ನಾನು ಅದನ್ನ ತರಲ್ಲ. ಸಹಾಯ ಮಾಡ್ತೇನೆ ಅಂತ ಹೇಳಿದ್ರು, ಅದಕ್ಕೆ ಹಾಗಂದೆ ಎಂದಿದ್ದಾಳೆ. ಇದನ್ನೂ ಓದಿ: ನನಗೆ ಅನನ್ಯಾ ಭಟ್ ಅಂತ ಮಗಳಿರೋದು ಸತ್ಯ – ಕ್ಷಣಕ್ಕೊಂದು ದ್ವಂದ್ವ ಹೇಳಿಕೆ ನೀಡ್ತಿರೋ ಸುಜಾತ ಭಟ್
ಸಂದರ್ಶನವೊಂದರಲ್ಲಿ ಆಸ್ತಿಗಾಗಿ ಅನನ್ಯಾ ಭಟ್ ಎಂಬ ಸುಳ್ಳು ಕಥೆ ಕಟ್ಟಿದೆ ಎಂದಿದ್ದಳು. ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟಿದ್ದರು. ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಇನ್ನಿತರರು ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳಿದ್ದೆ. ಅದಕ್ಕೆ ನಾನು ಹೇಳಿಬಿಟ್ಟೆ ಎಂದು ಒಪ್ಪಿಕೊಂಡಿದ್ದಳು.
ನಾನು ಟೆನ್ಷನ್‌ನಲ್ಲಿ ಇರುತ್ತೇನೆ. ನನ್ನ ಮಗಳು ಇದ್ದಳು, ಬಲವಂತ ಮಾಡಿಸಿ ಸುಳ್ಳು ಹೇಳಿಕೆ ಪಡೆದಿದ್ದಾರೆ. ಅದಕ್ಕೆ ನಾನು ಹಾಗಂದೆ ಎಂದಿದ್ದಾಳೆ. ಇದನ್ನೂ ಓದಿ: ಆಸ್ತಿಗೋಸ್ಕರ ಅನನ್ಯಾ ಭಟ್ ಕತೆ ಕಟ್ಟಿದ್ದೇನೆ – ತಪ್ಪೊಪ್ಪಿಕೊಂಡ ಸುಜಾತ ಭಟ್