ಬೆಂಗಳೂರು: ಇಂದು ಸಂಜೆಯೊಳಗೆ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarod) ಅವರನ್ನು ಬಂಧಿಸುವಂತೆ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳು 24 ಕೊಲೆ ಮಾಡಿದ್ದಾರೆಂದು ತಿಮರೋಡಿ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಸೂಚನೆ ನೀಡಿದರು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಪರಮೇಶ್ವರ್ ಸಂಜೆಯೊಳಗೆ ಅರೆಸ್ಟ್ ಮಾಡುವಂತೆ ಸೂಚನೆ ನೀಡಿದರು. ಸಿಎಂ ವಿರುದ್ಧವೇ ಮಾತನಾಡಿದವನನ್ನಾ ಸುಮ್ನೆ ಬಿಡಬೇಕಾ ಅಂತಲೂ ಪ್ರಶ್ನೆ ಮಾಡಿದರು. ಈ ವೇಳೆ ಅಧಿಕಾರಿಗಳು ಅದು 2023ರ ಮೇನಲ್ಲಿ ಮಾತನಾಡಿದ್ದ ವಿಡಿಯೋ ಅಂತ ಗೃಹ ಸಚಿವರ ಗಮನಕ್ಕೆ ತಂದರು. ಇದನ್ನೂ ಓದಿ: 2026ರ ಡಿಸೆಂಬರ್ ಒಳಗೆ 1,80,253 ಮನೆ ಪೂರ್ಣ – ಜಮೀರ್ ಗ್ಯಾರಂಟಿ
ಸದನದಲ್ಲೂ ಜೋರು ಚರ್ಚೆ
ಇನ್ನೂ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ವಿಧಾನ ಸಭೆಯಲ್ಲೂ ಆಗ್ರಹ ಕೇಳಿಬಂದಿತು. ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡುತ್ತಾ, ಸಿಎಂ 24 ಕೊಲೆ ಮಾಡಿದ್ದಾರೆಂಬ ಆರೋಪ ಬಗ್ಗೆ ಪ್ರಸ್ತಾಪ ಮಾಡಿದರು. ಏನ್ ನಡೀತಿದೆ ರಾಜ್ಯದಲ್ಲಿ, ಸಿಎಂ ಮೇಲೆಯೇ ಆಪಾದನೆ ಮಾಡಿದ್ದಾರೆ. ಹಾಗಾದರೆ ಸಿಎಂ ಕೊಲೆಗಾರರಾ? ಆರೋಪ ಮಾಡಿದವರ ಮೇಲೆ ಕ್ರಮ ಏನು? ನೀವು ಮೌನವಾಗಿದ್ರೆ ಏನ್ ತಿಳ್ಕೊಳ್ಳೋದು ನಾವು? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ತುಂಗಭದ್ರಾ ಡ್ಯಾಮ್‌ನ 33 ಕ್ರಸ್ಟ್ ಗೇಟನ್ನೂ ತಕ್ಷಣ ಬದಲಿಸಿ: ವಿಜಯೇಂದ್ರ ಆಗ್ರಹ
ಇದಕ್ಕೆ ದನಿಗೂಡಿಸಿದ ಶಾಸಕ ಸುರೇಶ್ ಕುಮಾರ್, ಸಿಎಂ ಮೇಲೆ ಧೈರ್ಯವಾಗಿ ಆರೋಪ ಮಾಡಿದ್ದಾನೆ ಆವ್ಯಕ್ತಿ, ಸರ್ಕಾರ ಇದನ್ನು ಹೇಗೆ ಸಹಿಸಿಕೊಳ್ಳುತ್ತೆ? ಸರ್ಕಾರ ಯಾಕೆ ಸುಮ್ಮನಿದೆ? ಅಂತ ಪ್ರಶ್ನಿಸಿದರು.
ಇದಕ್ಕೆ ಉತ್ತರ ಕೊಟ್ಟ ಪರಮೇಶ್ವರ್ ಸರ್ಕಾರ ಅಷ್ಟೊಂದು ಹೆಲ್ಪ್ ಲೆಸ್ ಆಗಿದೆ ಅನ್ಕೊಂಡಿದ್ದೀರಾ? ಅಂತ ತಿರುಗೇಟು ಕೊಟ್ಟರು. ಈ ವೇಳೆ ಸುನೀಲ್ ಕುಮಾರ್ ದೇಶದ ನಂ.1 ಗೃಹ ಸಚಿವರು ಕ್ರಮ ತಗೊಳ್ಳಿ ಅಂತ ಕಾಲೆಳೆದರು. ನಂತ್ರ ಮಾತು ಮುಂದುವರಿಸಿದ ಪರಂ, ಆ ವ್ಯಕ್ತಿ ವಿರುದ್ಧ ಹಲವು ಕೇಸ್ ಇವೆ, ಆ ವ್ಯಕ್ತಿ ಹೆಸರು ಹೇಳಲ್ಲ. ಇಂಥ ವ್ಯಕ್ತಿಯನ್ನು ಸಮಾಜದಲ್ಲಿ ಹೀಗೇ ಸುಮ್ಮನೆ ಬಿಡಲ್ಲ. ಕಾನೂನು ಚಲಾಯಿಸಿ ಕ್ರಮ ತಗೋತೀವಿ. ಏನು ಕ್ರಮ ತಗೋಬೇಕೋ ತಗೋತೀವಿ. ಈಗಾಗಲೇ ಕ್ರಮ ತಗೊಳ್ಳೋಕ್ಕೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಅಪಪ್ರಚಾರಕರ ವಿರುದ್ಧ ಸ್ವಯಂಪ್ರೇರಿತ ಕೇಸ್ ಹಾಕಿ: ಅಶ್ವಥ್ ನಾರಾಯಣ್ ಆಗ್ರಹ