ಬೆಂಗಳೂರು: ಪೊಲೀಸ್ ಮುಖ್ಯಪೇದೆ ತನ್ನ ಹೆತ್ತ ತಾಯಿಯನ್ನೇ ಬೀದಿಗಟ್ಟಿದ ಘಟನೆ ಬೆಂಗಳೂರಿನ ಚಂದ್ರಾಲೇಔಟ್‍ನ ಬಿಸಿಸಿ ಬಡಾವಣೆಯಲ್ಲಿ ನಡೆದಿದೆ.
ಬ್ಯಾಟರಾಯನಪುರ ಠಾಣೆಯಲ್ಲಿ ಮುಖ್ಯಪೇದೆಯಾಗಿರೋ ಜಗದೀಶ್ ಕಳೆದ ರಾತ್ರಿ ವೃದ್ಧ ತಾಯಿ ಪದ್ಮಾವತಮ್ಮರನ್ನ ಮನೆಯಿಂದ ನಿರ್ದಯವಾಗಿ ಹೊರಗಟ್ಟಿದ್ದಾನೆ. ಐವರು ಉದ್ಯೋಗಸ್ಥ ಮಕ್ಕಳನ್ನ ಹೊಂದಿರುವ ಪದ್ಮಾವತಮ್ಮ ಬಿಸಿಸಿ ಬಡಾವಣೆಯಲ್ಲಿರುವ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸವಿದ್ದರು. ಜಗದೀಶ್ ಮತ್ತು ಅವರ ಪತ್ನಿಯ ನಿತ್ಯ ಕಿರುಕುಳದಿಂದ ಸ್ವಂತ ಮನೆಯಿದ್ದೂ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಆದ್ರೆ ಬಾಡಿಗೆ ಕಟ್ಟಲಾಗದೆ ಸೋಮವಾರ ತನ್ನ ಸ್ವಂತ ಮನೆಗೆ ಬಂದ್ರೆ ಪುತ್ರ ಜಗದೀಶ್ ನಿರ್ದಾಕ್ಷಿಣ್ಯವಾಗಿ ಹೆತ್ತ ತಾಯಿಯನ್ನು ಮನೆಯಿಂದ ಹೊರಗಟ್ಟಿ ಅಮಾನವೀಯತೆ ಮೆರೆದಿದ್ದಾನೆ. ತನ್ನ ಉಳಿದ ಸಹೋದರರ ಮೇಲೂ ಖಾಕಿ ದರ್ಪ ತೋರಿಸಿರೋ ಜಗದೀಶ್ ವಿರುದ್ಧ ಸಹೋದರರೇ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.