Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜಣ್ಣ ಮಾಡಿದ ಘೋರ ಅಪರಾಧವೇನು? ಸಿಎಂ ಸದನದಲ್ಲಿ ಉತ್ತರಿಸಲಿ: ವಿಜಯೇಂದ್ರ ಆಗ್ರಹ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜಣ್ಣ ಮಾಡಿದ ಘೋರ ಅಪರಾಧವೇನು? ಸಿಎಂ ಸದನದಲ್ಲಿ ಉತ್ತರಿಸಲಿ: ವಿಜಯೇಂದ್ರ ಆಗ್ರಹ

Bengaluru City

ರಾಜಣ್ಣ ಮಾಡಿದ ಘೋರ ಅಪರಾಧವೇನು? ಸಿಎಂ ಸದನದಲ್ಲಿ ಉತ್ತರಿಸಲಿ: ವಿಜಯೇಂದ್ರ ಆಗ್ರಹ

Public TV
Last updated: August 12, 2025 1:49 pm
Public TV
Share
2 Min Read
BY Vijayendra
SHARE

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರು, ಅವರ ಸಂಪುಟದ ಹಿರಿಯ ಸಹೋದ್ಯೋಗಿ ರಾಜಣ್ಣ ಅವರು ವಜಾ ಮಾಡುವಂತಹ ಯಾವ ಘೋರ ಅಪರಾಧ ಮಾಡಿದ್ದಾರೆ ಎಂದು ರಾಜ್ಯದ ಜನತೆ ಕೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಣ್ಣ ಅವರ ಮಹಾತಪ್ಪಾದರೂ ಏನು? ರಾಜಣ್ಣ ಅವರನ್ನು ವಜಾಗೊಳಿಸುವಿಕೆ ಕೇವಲ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಲ್ಲ. ಇದರ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿದೆ. ಯಾವ ಕಾರಣಕ್ಕಾಗಿ ಅವರನ್ನು ಸಂಪುಟದಿಂದ ಕಿತ್ತು ಬಿಸಾಕಿದ್ದಾರೆ? ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ಪಂಗಡದವರ ಬಗ್ಗೆ ಇಷ್ಟೇನಾ ಪ್ರೀತಿ-ವಿಶ್ವಾಸ ಇರುವುದು ಎಂದು ಪ್ರಶ್ನಿಸಿದರು.ಇದನ್ನೂ ಓದಿ: `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

ರಾಹುಲ್ ಗಾಂಧಿಯವರು ಕಳೆದ ವಾರ ಬೆಂಗಳೂರಿಗೆ ಬಂದು ಚುನಾವಣಾ ಆಯೋಗದ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಬಿಜೆಪಿ ಕೇಂದ್ರದಲ್ಲಿ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ ಎಂಬಂತೆ ದೇಶದ ಜನರ ಮುಂದೆ ಬಿಂಬಿಸಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಕೊಡದೇ ಪಲಾಯನ ಮಾಡಿದ್ದಾರೆ. ಮತ್ತೊಂದು ಕಡೆ ರಾಜಣ್ಣನವರು ಸತ್ಯವನ್ನು ಬಹಿರಂಗ ಪಡಿಸಿದಾಗ ಅವರನ್ನು ಸಂಪುಟದಿಂದ ವಜಾ ಮಾಡಿದ್ದು ಖಂಡಿತ ಸರಿಯಲ್ಲ ಎಂದರು.

ಇವತ್ತು ಎರಡೂ ಸದನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಂದ ನಾವು ಉತ್ತರ ಬಯಸುತ್ತೇವೆ. ಯಾವ, ಯಾವ ಕಾರಣಕ್ಕೆ ನೀವು ಹಿರಿಯ ಸಚಿವ ರಾಜಣ್ಣರಿಂದ ರಾಜೀನಾಮೆ ಪಡೆದುಕೊಂಡಿದ್ದೀರಿ? ಈ ಕುರಿತು ಸದನಕ್ಕೆ ತಿಳಿಸುವ ಕರ್ತವ್ಯ ಮುಖ್ಯಮಂತ್ರಿಗಳದ್ದು. ಎರಡೂ ಸದನಗಳಲ್ಲಿ ಈ ವಿಚಾರ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಷಡ್ಯಂತ್ರ, ಪಿತೂರಿ ಕುರಿತು ಸಂದರ್ಭ ಬಂದಾಗ ತಿಳಿಸುವುದಾಗಿ ರಾಜಣ್ಣ ತಿಳಿಸಿದ್ದಾರೆ. ಅವರ ಹೇಳಿಕೆ ಗಮನಿಸಿದ್ದೇನೆ. ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ದೇಶಾದ್ಯಂತ ತಿರುಗುವ ರಾಹುಲ್ ಗಾಂಧಿಯವರಿಗೆ ಸತ್ಯವನ್ನು ಅರಗಿಸಿಕೊಳ್ಳುವ, ಸತ್ಯವನ್ನು ಕೇಳಿಸಿಕೊಳ್ಳುವ ಧೈರ್ಯ ಇಲ್ಲವೇ ಎಂದು ಪ್ರಶ್ನಿಸಿದರು.

ಒಬ್ಬ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಚಿವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಳ್ಳುವ ರೀತಿ ಇದುವೇ? ಯಾವ ಬಾಬಾ ಸಾಹೇಬ ಅಂಬೇಡ್ಕರರ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಕಾಂಗ್ರೆಸ್ ಪಕ್ಷದವರು, ರಾಜಣ್ಣನವರ ಬಗ್ಗೆ ನಡೆದುಕೊಂಡಿರುವುದು ಸರಿಯೇ ಎಂದು ರಾಜ್ಯಾದ್ಯಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ನುಡಿದರು.

ಎಸ್.ಐ.ಟಿ ಹಾದಿ ತಪ್ಪುತ್ತಿದೆಯೇ?
ಧರ್ಮಸ್ಥಳದ ವಿಷಯದಲ್ಲಿ ಸೋಮವಾರ ಕೂಡ ನಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುದೀರ್ಘ ಚರ್ಚೆ ಆಗಿದೆ. ಎಸ್.ಡಿ.ಪಿ.ಐ, ಕಮ್ಯುನಿಸ್ಟ್ ಮತ್ತಿತರ ಬೇರೆ ಬೇರೆ ಸಂಘಟನೆಗಳು ಇದರ ಹಿಂದೆ ನಿಂತಿದ್ದಾರೆ. ಇವೆಲ್ಲವೂ ಗುಮಾನಿಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಶ್ರೀ ಮಂಜುನಾಥೇಶ್ವರನ ಭಕ್ತಾದಿಗಳ ಮನಸ್ಸಿಗೆ ಘಾಸಿ ಆಗುವಂಥ ಚಟುವಟಿಕೆಗಳು ನಡೆಯುತ್ತಿದ್ದು, ಇದು ಸರಿಯಲ್ಲ. ಈ ವಿಷಯವನ್ನೂ ಸದನದಲ್ಲಿ ಚರ್ಚಿಸಿ ಸರ್ಕಾರದ ಉತ್ತರ ಬಯಸುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ನಗರಗಳಲ್ಲಿನ ಬೀದಿನಾಯಿ, ಅನಾಥ ಪ್ರಾಣಿಗಳ ತೆರವಿಗೆ ವಿಶೇಷ ಅಭಿಯಾನ – ರಾಜಸ್ಥಾನ ಹೈಕೋರ್ಟ್

TAGGED:bengalurubjpBY VijayendracongresskarnatakaKN RajannaRahul Gandhi
Share This Article
Facebook Whatsapp Whatsapp Telegram

Cinema news

Samantha Ruth Prabhu
ಶಿವಮೊಗ್ಗ | ಹೊಸನಗರದಲ್ಲಿ ಹೋಳಿಯಾಡಿದ ಸಮಂತಾ
Cinema Latest Shivamogga South cinema Top Stories
Rashmika Vijay 4
ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಆರತಕ್ಷತೆಗೆ ʻತುಳಸಿʼ ಮ್ಯಾಜಿಕ್‌
Cinema Latest Main Post
Love Mocktail
Toxic ಪೋಸ್ಟ್‌ಪೋನ್‌ ಬಳಿಕ ಲವ್ ಮಾಕ್ಟೇಲ್-3 ರಿಲೀಸ್ ಡೇಟ್ ಬದಲು
Cinema Latest Sandalwood Top Stories
Rashmika Mandanna Vijay Deverakonda 1
ರಶ್ಮಿಕಾ ರಿಸೆಪ್ಷನ್ ಸೀರೆಯಲ್ಲಿ ಕನ್ನಡದ ಕಂಪು – ಗಂಡಭೇರುಂಡ, ಕೊಡವರ ಒಡಿಕತ್ತಿ ಕಸೂತಿ
Cinema Latest South cinema

You Might Also Like

mangaluru Aadhar Card
Dakshina Kannada

ನೇತ್ರಾವತಿ ನದಿ ತಟದಲ್ಲಿ ರಾಶಿ ರಾಶಿ ಆಧಾರ್‌ಕಾರ್ಡ್ ಪತ್ತೆ

Public TV
By Public TV
16 minutes ago
internal conflict in davanagere bjp
Davanagere

ದಾವಣಗೆರೆ ಬಿಜೆಪಿಯಲ್ಲಿ ನಿಲ್ಲದ ಬಣ ಬಡಿದಾಟ – ಸಂಧಾನ ಸಭೆ ವಿಫಲ

Public TV
By Public TV
39 minutes ago
West Bengal Governor CV Ananda Bose Resigns
Latest

ಆನಂದ ಬೋಸ್ ರಾಜೀನಾಮೆ – ಪಶ್ಚಿಮ ಬಂಗಾಳಕ್ಕೆ ಆರ್.ಎನ್. ರವಿ ನೂತನ ರಾಜ್ಯಪಾಲ

Public TV
By Public TV
44 minutes ago
ಬೆಂಗಳೂರು ವಿಮಾನ ನಿಲ್ದಾಣ
Bengaluru City

ಮತ್ತೆ ಬೆಂಗಳೂರು ಏರ್‌ಪೋರ್ಟ್‌ಗೆ ಜಾಗತಿಕ ಗೌರವ – ಸತತ 4ನೇ ಬಾರಿ ಪ್ರಶಸ್ತಿ

Public TV
By Public TV
1 hour ago
Nancy Grewal
Crime

ಖಲಿಸ್ತಾನಿ ಉಗ್ರರನ್ನು ಟೀಕಿಸುತ್ತಿದ್ದ ಪಂಜಾಬಿ ಯೂಟ್ಯೂಬರ್​ ಕೆನಡಾದಲ್ಲಿ ಹತ್ಯೆ

Public TV
By Public TV
2 hours ago
ಕರ್ನಾಟಕ ರಾಜ್ಯ ಬಜೆಟ್‌- 2025
Bengaluru City

ಶುಕ್ರವಾರ ಬೆಳಗ್ಗೆ 10:15ಕ್ಕೆ ಬಜೆಟ್‌: ಪೆಟ್ರೋಲ್, ಡೀಸೆಲ್‌ ಮೇಲೆ 1 ರೂ. ಸೆಸ್?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?