ಡೆಹ್ರಾಡೂನ್: ಉತ್ತರಕಾಶಿಯಲ್ಲಿ (Uttarakashi) ಮೇಘಸ್ಫೋಟ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕದ 6 ಮಂದಿ ಪ್ರವಾಸಿಗರನ್ನು ರಕ್ಷಿಸಲಾಗಿದೆ.
ಮೇಘಸ್ಫೋಟ ಉಂಟಾಗಿದ್ದ ಹರ್ಷಿಲ್ ಗ್ರಾಮದಿಂದ ಪ್ರವಾಸಿಗರನ್ನು ಮಟ್ಲಿ, ಜ್ಯೋಲಿಗ್ರಾಂಟ್‌ಗೆ ಏರ್ ಲಿಫ್ಟ್ ಮಾಡಲಾಗಿದೆ. ಅವರನ್ನು ಭಾರತೀಯ ಸೇನಾ ವಿಮಾನದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: ಹೇಗಿತ್ತು.. ಹೇಗಾಯ್ತು!?- ಉತ್ತರಾಖಂಡದಲ್ಲಿ ಭೀಕರ ಪ್ರವಾಹದ ಸ್ಯಾಟಲೈಟ್ ದೃಶ್ಯ ಹಂಚಿಕೊಂಡ ಇಸ್ರೋ
ಶುಕ್ರವಾರ ಬೆಳಗ್ಗೆಯಿಂದ ಈವರೆಗೆ 136 ಪ್ರವಾಸಿಗರ ರಕ್ಷಣೆಯಾಗಿದೆ. ನಾಲ್ಕನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಕ್ಷಿಸಲಾದ ವ್ಯಕ್ತಿಗಳನ್ನು ಅವರವರ ಸ್ಥಳಗಳಿಗೆ ಕಳುಹಿಸುವುದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ನಂತರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಾಲ್ಕನೇ ದಿನವೂ ಮುಂದುವರೆದಿದೆ. ಹರ್ಸಿಲ್ ಮತ್ತು ನೆಲೋಂಗ್‌ನಲ್ಲಿರುವ ಮಿಲಿಟರಿ ಹೆಲಿಪ್ಯಾಡ್ ಕಾರ್ಯನಿರ್ವಹಿಸುತ್ತಿದ್ದು, ಗಂಗೋತ್ರಿಯೊಂದಿಗೆ ರಸ್ತೆ ಮೂಲಕ ಸಂಪರ್ಕ ಹೊಂದಿದೆ. ಎಂಜಿನಿಯರ್‌ಗಳು, ವೈದ್ಯಕೀಯ ತಂಡಗಳು ಮತ್ತು ರಕ್ಷಣಾ ಸಿಬ್ಬಂದಿ ಸೇರಿದಂತೆ 225 ಸೈನಿಕರು ಸ್ಥಳದಲ್ಲಿದ್ದಾರೆ ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು