– ಎಸ್‌ಐಟಿ ದಿಕ್ಕು ತಪ್ಪಿಸಿದ್ನಾ ದೂರುದಾರ? – ಮಫ್ತಿಯಲ್ಲಿ ಫೀಲ್ಡಿಂಗಿಳಿದ ಖಾಕಿ ಟೀಂ
ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದ 10 ಪಾಯಿಂಟ್‌ಗಳಲ್ಲಿ ಶೋಧ ನಡೆಸಿದ್ರೂ ಒಂದೂ ಅಸ್ಥಿಪಂಜರ ಸಿಗದ ಹಿನ್ನೆಲೆ ದೂರುದಾರ ಎಸ್‌ಐಟಿ ಅಧಿಕಾರಿಗಳಿಗೆ ಹೊಸ ಮನವಿಯೊಂದನ್ನ ಮಾಡಿದ್ದಾನೆ. ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (Ground Penetrating Radar) ಬಳಸಿ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾನೆ.
ಪೆನೆಟೇರಿಂಗ್ ರೇಡಾರ್‌ನಲ್ಲಿ ಸರ್ವೆಗೆ ಮನವಿ
ಇನ್ನೂ 6 ದಿನ ಕಳೆದರೂ ಅಸ್ಥಿಪಂಜರ ಸಿಗದೇ ಬೇಸತ್ತ ಹಿನ್ನೆಲೆ ಅನಾಮಿಕ ಎಸ್‌ಐಟಿಯ (SIT) ಮುಂದೆ ಹೊಸದೊಂದು ಮನವಿ ಇಟ್ಟಿದ್ದಾನೆ. ಶವಗಳನ್ನು ಹೂತಿರೋದು 15-20 ವರ್ಷಗಳ ಹಿಂದೆ ಈ ಸಂದರ್ಭದಲ್ಲಿ ಭೌಗೋಳಿಕವಾಗಿ ಸಾಕಷ್ಟು ಬದಲಾವಣೆ ಆಗಿದೆ. ಹೀಗಾಗಿ ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ ಮೂಲಕ ಸರ್ವೆ ಮಾಡುವಂತೆ ಮನವಿ ಮಾಡಿದ್ದಾನೆ. ಈ ರಡಾರ್ ಭೂಮಿಯ ಒಳಗೆ ಏನಿದೆ ಅನ್ನೋದನ್ನ ಪತ್ತೆ ಹಚ್ಚುತ್ತೆ, ಗುಂಡಿ ತೆಗೆಯದೇ ಸ್ಕ್ಯಾನ್ ಮಾಡಬಹುದಾಗಿದೆ. ಹೀಗಾಗಿ ಆ ಯಂತ್ರವನ್ನು ಬಳಸಿ ಅಸ್ಥಿಪಂಜರ ಪತ್ತೆಗೆ ಮನವಿ ಮಾಡಿದ್ದಾನೆ. ದೂರುದಾರನ ಮನವಿಯನ್ನು ಎಸ್‌ಐಟಿ ಮಾನ್ಯ ಮಾಡುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಇನ್ನೂ ಈವರೆಗೆ ಶೋಧ ನಡೆಸಿರುವ 10 ಪಾಯಿಂಟ್‌ಗಳಲ್ಲಿ ಎಷ್ಟು ಅಡಿ ಆಳ, ಎಷ್ಟು ಅಡಿ ಅಗಲ ತೆಗೆಯಲಾಯ್ತು? ಏನೆಲ್ಲಾ ಸಾಕ್ಷ್ಯ ಸಿಕ್ತು ಅನ್ನೋ ಮಾಹಿತಿ ನೋಡೊದಾದ್ರೆ…
* 8ನೇ ಪಾಯಿಂಟ್
ಆಳ: 6 ಅಡಿ
ಅಗಲ: 5 ಅಡಿ
ಕಳೇಬರ ಸಿಕ್ಕಿಲ್ಲ
* 9ನೇ ಪಾಯಿಂಟ್
ಆಳ: 6 ಅಡಿ
ಅಗಲ: 5 ಅಡಿ
ಕಳೇಬರ ಸಿಕ್ಕಿಲ್ಲ
* 10ನೇ ಪಾಯಿಂಟ್
ಆಳ: 6 ಅಡಿ
ಅಗಲ: 5 ಅಡಿ
ಕಳೇಬರ ಸಿಕ್ಕಿಲ್ಲ
ಎಸ್‌ಐಟಿ ದಿಕ್ಕು ತಪ್ಪಿಸಿದ್ನಾ ದೂರುದಾರ?
ಸಮಾಧಿ ಇದೆ ಎಂದು ತೋರಿಸಲಾದ 10 ಸ್ಥಳದಲ್ಲಿ ಈವರೆಗೆ ಯಾವುದೇ ಮಹತ್ವದ ಅಂಶಗಳು ಲಭ್ಯವಾಗಿಲ್ಲ. ಇನ್ನು ಮೂರು ಪಾಯಿಂಟ್‌ಗಳಲ್ಲಿ ಇಂದು ಶೋಧ ನಡೆಯಲಿದೆ. ಈ ನಡುವೆ ಪೊಲೀಸರು ಒಂದು ಹೊಸ ಟಾಸ್ಕ್‌ಗೆ ಇಳಿದಿದ್ದಾರೆ. ಮಾರುವೇಶದಲ್ಲಿ ಧರ್ಮಸ್ಥಳ ಮತ್ತು ಬೆಳ್ತಂಗಡಿ ಗ್ರಾಮವನ್ನು ಸುತ್ತಾಡುತ್ತಿದ್ದಾರೆ. ದೂರುದಾರ ಹೇಳಿದಂತಹ ಮಾಹಿತಿಗಳಿಗೆ ಮ್ಯಾಚ್ ಆಗುವ ಯಾವುದಾದರೂ ಕುರುಹುಗಳು ಇದೆಯಾ ಎಂದು ಮಾಹಿತಿ ಕಲೆಹಾಕುತ್ತಿದ್ದಾರೆ. ದೂರುದಾರನನ್ನ ಹೊರತುಪಡಿಸಿ ಯಾವುದಾದರೂ ಮಹತ್ವದ ದಾಖಲೆಗಳು ಸಿಗುತ್ತಾ ಎಂದು ಎಸ್‌ಐಟಿ ಪೊಲೀಸರು ಟೊಂಕ ಕಟ್ಟಿ ಹುಡುಕಾಟ ನಡೆಸುತ್ತಿದ್ದಾರೆ.
ಮಫ್ತಿಯಲ್ಲಿ ಫೀಲ್ಡಿಂಗಿಳಿದ ಖಾಕಿ
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂಬ ದೂರುದಾರನ ಕಂಪ್ಲೆಂಟ್ ಎಸ್‌ಐಟಿಗೆ ಜಟಿಲವಾಗಿದೆ. ಕಳೆದ ಒಂದು ವಾರದಿಂದ ವಿಚಾರಣೆ ಮತ್ತು ಪರಿಶೀಲನೆ ನಡೆಸುತ್ತಿದ್ದರೂ, ಯಾವುದೇ ಗಟ್ಟಿ ಕುರುಹುಗಳು ಸಿಗುತ್ತಿಲ್ಲ. ಸಿಕ್ಕ ಮೂಳೆ 40 ವರ್ಷ ಹಳೆಯದ್ದು, ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಎಸ್‌ಐಟಿ ಮಾರುವೇಷದಲ್ಲಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಸಾರ್ವಜನಿಕರಿಂದ ಸಿಗುತ್ತಿರುವ ಮಾಹಿತಿ ಅಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ.