ಕಾನೂನು ಪ್ರಕ್ರಿಯೆ ನಡೆಸದೆ ಬಾಲಕಿಯ ಮೃತದೇಹ ದಫನ್ ಆರೋಪ – ಎಸ್‍ಐಟಿ ಕಚೇರಿಗೆ ಬಂದ ಮತ್ತೊಬ್ಬ ದೂರುದಾರ

Public TV
1 Min Read
JAYANTH T

ಮಂಗಳೂರು: ಧರ್ಮಸ್ಥಳದಲ್ಲಿ  ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಎಸ್‍ಐಟಿ (SIT) ಕಚೇರಿಗೆ ಮತ್ತೊಬ್ಬ ದೂರುದಾರರು ಎಂಟ್ರಿ ಕೊಟ್ಟಿದ್ದಾರೆ.

15 ವರ್ಷಗಳ ಹಿಂದೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಮೃತದೇಹವನ್ನು ನಾನು ನೋಡಿದ್ದೇನೆ. ಕಾನೂನು ಪ್ರಕ್ರಿಯೆ ನಡೆಸದೆ ದಫನ್ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಜಯಂತ್.ಟಿ ಆರೋಪಿಸಿದ್ದಾರೆ. ಆ ಘಟನೆ ಪದೇ ಪದೇ ಕಾಡುತ್ತಿತ್ತು. ಈಗ ಎಸ್ಐಟಿ ರಚನೆಯಾಗಿರುವುದರಿಂದ ಪ್ರೇರಿತನಾಗಿ ಆ ಘಟನೆಯ ಬಗ್ಗೆ ದೂರು ಕೊಡುತ್ತಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಧಾರಾಕಾರ ಮಳೆ ನಡುವೆ ನಂ.10 ರಲ್ಲಿ ಶೋಧ – ದೂರುದಾರ ವ್ಯಕ್ತಿಗೆ ಮತ್ತೆ ನಿರಾಸೆ

`ಬಾಲಕಿ ಹೂತಿಟ್ಟ ಜಾಗ ನನಗೆ ಗೊತ್ತಿದೆ.ʼಎಸ್‍ಐಟಿಗೆ ತೋರಿಸಲು ಸಿದ್ಧನಿದ್ದೇನೆ. `ಕೊಲೆಯೋ..? ಏನೋ ನಂಗೆ ಗೊತ್ತಿಲ್ಲ.ʼ ಬಾಲಕಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮುಂದುವರಿದ ಅಸ್ಥಿಪಂಜರದ ಶೋಧ – 7, 8ನೇ ಪಾಯಿಂಟ್‌ಗಳಲ್ಲೂ ಸಿಕ್ಕಿಲ್ಲ ಕುರುಹು

Share This Article