ಬೆಂಗಳೂರಿಗರಿಗೆ ಮತ್ತೊಂದು ಶಾಕ್ – ಇಂದಿನಿಂದ ಆಟೋ ದರ ಏರಿಕೆ

Public TV
2 Min Read
Auto 3

– 2 ಕಿಮೀಗೆ ಕನಿಷ್ಠ ದರ 36 ರೂಪಾಯಿ ಫಿಕ್ಸ್‌

ಬೆಂಗಳೂರು: ಬಸ್, ಮೆಟ್ರೋ ನಂತರ ಇಂದಿನಿಂದ ಆಟೋ ದರ (Auto Rate) ಏರಿಕೆಯಾಗುತ್ತಿದ್ದು, ಬೆಂಗಳೂರಿಗರ ಜೇಬಿಗೆ ಕತ್ತರಿ ಬೀಳುತ್ತಿದೆ. ಒಂದೆಡೆ ಸರ್ಕಾರ ಆಟೋ ದರ ಏರಿಕೆ ಮಾಡಿದ್ರೆ, ಮತ್ತೊಂದೆಡೆ ಸುಲಿಗೆ ಮಾಡೋ ಆಟೋ ಚಾಲಕರ ಆಪರೇಷನ್‌ಗೆ ಟ್ರಾಫಿಕ್ ಪೋಲಿಸರು ಮುಂದಾಗಿದ್ದಾರೆ.

ಕಳೆದ ತಿಂಗಳ 14ನೇ ತಾರೀಖಿನಂದು ಬೆಂಗಳೂರು (Bengaluru) ಆಟೋ ದರವನ್ನು ಹೆಚ್ಚಿಸಿ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ರು. ಈ ಆದೇಶ ಇಂದಿನಿಂದ ಜಾರಿಗೆ ಬರ್ತಿದ್ದು, ಬೆಂಗಳೂರಿಗರಿಗೆ ದುಬಾರಿ ದುನಿಯಾದಲ್ಲಿ ಆಟೋ ಪ್ರಯಾಣ ದರವೂ ಹೊರೆಯಾಗಲಿದೆ. ಇದನ್ನೂ ಓದಿ: ಲವ್ವರ್‌ ಜೊತೆ ಗಂಡನ ಹತ್ಯೆ – ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿ ಹಬ್ಬ ಮಾಡಿದ್ದ ಪತ್ನಿ ಅಂದರ್‌

Auto 2

2 ಕಿಮೀಗೆ ಕನಿಷ್ಠ ಪ್ರಯಾಣ ದರ 30 ರಿಂದ 36ಕ್ಕೆ ಏರಿಕೆ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಡಿಸಿ ಜಗದೀಶ್ ಆದೇಶ ಹೊರಡಿಸಿದ್ದಾರೆ. ಇದು ರಾಜಧಾನಿ ಜನರ ಜೇಬಿಗೆ ಕತ್ತರಿ ಹಾಕಲಿದೆ. ಇಂದಿನಿಂದ ಆಟೋ ದರ ಎಷ್ಟು ಹೆಚ್ಚಾಗಲಿದೆ ಅನ್ನೋದನ್ನು ನೋಡೋದಾದ್ರೇ… ಇದನ್ನೂ ಓದಿ: 69 ದೇಶಗಳಿಗೆ ಸುಂಕದ ಬರೆ – ಭಾರತಕ್ಕೆ 25%, ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ ಟ್ರಂಪ್‌

ಆಟೋ ಪ್ರಯಾಣ ದುಬಾರಿ?
– ಮೊದಲ 2 ಕಿ.ಮೀಗೆ ಕನಿಷ್ಠ 36 ರೂ.
– ನಂತರ ಪ್ರತಿ ಕಿ.ಮೀಗೆ 18 ರೂ.
– ಮೊದಲ ಐದು ನಿಮಿಷ ಕಾಯುವಿಕೆ ಉಚಿತ
– ಪ್ರತಿ 15 ನಿಮಿಷ ಕಾಯುವಿಕೆ ದರ 10 ರೂ.
– 20 ಕೆಜಿ ಲಗೇಜ್ ಉಚಿತ
– 20 ಕೆಜಿಗಿಂತ ಹೆಚ್ಚಿದ್ರೆ 10 ರೂ. ಲಗೇಜ್ ಶುಲ್ಕ
– ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ಒಂದೂವರೆ ಪಟ್ಟು ದರ
– ಹೊಸ ದರ ಪಟ್ಟಿ ಆಟೋದ ಮೇಲೆ ಕಡ್ಡಾಯ ಹಾಕಬೇಕು
– ಪರಿಷ್ಕೃತ ದರದ ಹೊಸ ಮೀಟರ್ ಅ.31ರ ಒಳಗೆ ಹಾಕಿಸಬೇಕು.

ಈ ದರ ಏರಿಕೆಯ ನಂತರವೂ ಹೆಚ್ಚು ಹಣ ಪಡೆದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಮತ್ತೊಂದೆಡೆ ಆಟೋರಿಕ್ಷಾ ವಾಹನಗಳ ವಿರುದ್ದ ವಿಶೇಷ ಕಾರ್ಯಾಚರಣೆ ಸಂಚಾರಿ ಪೋಲಿಸರು ಕೈಗೆತ್ತಿಕೊಂಡಿದ್ದಾರೆ. ಬೆಂಗಳೂರು ನಗರ ಸಂಚಾರ ಪೋಲಿಸರು ಸಾರ್ವಜನಿಕರಿಂದ ಅತೀ ಹೆಚ್ಚು ಬಾಡಿಗೆ ಸಂಗ್ರಹಿಸುತ್ತಿರೋದು, ಸಾರ್ವಜನಿಕರು ಕರೆದ ಕಡೆಗೆ ಬಾಡಿಗೆ ಹೋಗದೇ ಇದ್ದು ಅಥವಾ ನಿಯಮ ಉಲ್ಲಂಘನೆ ಮಾಡೋ ಆಟೋಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

Share This Article