ಹೈದರಾಬಾದ್: ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಸಂಬಂಧ ನಟ ಪ್ರಕಾಶ್ ರಾಜ್ (Prakash Raj) ಬುಧವಾರ ಇಡಿ (Enforcement Directorate) ವಿಚಾರಣೆಗೆ ಹಾಜರಾಗಿದ್ದಾರೆ.
ಹೈದರಾಬಾದ್‌ನ (Hyderabad) ಬಶೀರ್‌ಬಾಗ್‌ನಲ್ಲಿರುವ ಇಡಿ ಕಚೇರಿಗೆ ಹಾಜರಾದ ನಟ ಪ್ರಕಾಶ್ ರಾಜ್‌ಗೆ ಇಡಿ ಫುಲ್ ಗ್ರಿಲ್ ನಡೆಸಿತು ಎಂದು ಮೂಲಗಳು ತಿಳಿಸಿವೆ. ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ್ದಾರೆಂದು ಪ್ರಕಾಶ್ ರಾಜ್‌ಗೆ ಇಡಿ ಸಮನ್ಸ್ ನೀಡಿತ್ತು. ಇದನ್ನೂ ಓದಿ:ಮತಾಂತರ ಕೇಸ್; ಬಂಧಿತ ಕೇರಳ ಸನ್ಯಾಸಿನಿಯರಿಗೆ ಜಾಮೀನು ನೀಡಲ್ಲ ಎಂದ ಕೋರ್ಟ್
ಪ್ರಕಾಶ್ ರಾಜ್ ಜೊತೆಗೆ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ ಮತ್ತು ಲಕ್ಷ್ಮಿ ಮಂಚು ಅವರಿಗೂ ಇ.ಡಿ ವಿಚಾರಣೆಗೆ ಸಮನ್ಸ್ ನೀಡಿತ್ತು. ಆಗಸ್ಟ್ 6 ರಂದು ವಿಜಯ್ ದೇವರಕೊಂಡ, ಆಗಸ್ಟ್ 13 ರಂದು ಲಕ್ಷ್ಮಿ ಮಂಚು ವಿಚಾರಣೆಗೆ ಹಾಜರಾಗುವಂತೆ ಇಡಿ ತಿಳಿಸಿದೆ. ಇದನ್ನೂ ಓದಿ:ಅಭಿಮಾನಿಗಳಿಗೆ ಬುದ್ಧಿ ಹೇಳಲು ದರ್ಶನ್‌ಗೆ ಹೇಳ್ತೀನಿ: ದರ್ಶನ್ ಪುಟ್ಟಣ್ಣಯ್ಯ
ಏನಿದು ಪ್ರಕರಣ?
ಬೆಟ್ಟಿಂಗ್ ಆ್ಯಪ್ ಹಗರಣ (Betting App Scam) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟಿ ಪ್ರಣೀತಾ ಸುಭಾಷ್, ಬಹುಭಾಷಾ ನಟ ಪ್ರಕಾಶ್ ರಾಜ್, ತೆಲುಗು ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.