ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ದಂಧೆ – ಹಣ ಕೊಟ್ರೆ ವೇಟಿಂಗ್ ಲಿಸ್ಟ್ ಇದ್ರೂ ಕನ್ಫರ್ಮ್ ಆಗುತ್ತೆ!

Public TV
2 Min Read
Train Ticket 1

-ಟ್ರಾವೆಲ್ ಏಜೆನ್ಸಿಯ 9 ಸಿಬ್ಬಂದಿಗಳು ಪೊಲೀಸರ ವಶಕ್ಕೆ

ಬೆಂಗಳೂರು: ಮೆಜೆಸ್ಟಿಕ್‌ನ ರೈಲ್ವೆ ಸ್ಟೇಷನ್‌ನಲ್ಲಿ (Majestic Railway Station) ರಿಸರ್ವೇಷನ್ ಟಿಕೆಟ್ ಹೆಸರಲ್ಲಿ ದಂಧೆ ನಡೀತಿದೆ. ವೇಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್‌ಗಳನ್ನು ಕನ್ಫರ್ಮ್ ಮಾಡಿಸಿಕೊಡ್ತೀನಿ ಎಂದು ಹಣ ಪೀಕುತ್ತಿದ್ದ ಟ್ರಾವೆಲ್ ಏಜೆನ್ಸಿಗಳ ಮೇಲೆ ಆರ್‌ಪಿಎಫ್ ಟೀಂ (RPF Team) ದಾಳಿ ನಡೆಸಿದೆ.

Train Ticket 2

ಹೌದು, ವೇಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್‌ನ್ನು ರಿಸರ್ವೇಷನ್ ಮಾಡಿಕೊಡ್ತೀವಿ ಎಂದು ಪ್ರಯಾಣಿಕರ ಬಳಿ ವನ್ ಟು ಡಬಲ್ ಹಣ ಪಡೆಯುತ್ತಿದ್ದರು. ಟಿಕೆಟ್ ಕೌಂಟರ್‌ಗಳ ಬಳಿ ನಿಂತು ವೇಟಿಂಗ್ ಲಿಸ್ಟ್ ಇರುವ ಪ್ರಯಾಣಿಕರನ್ನ ಟಾರ್ಗೆಟ್ ಮಾಡಿ, ತಮ್ಮ ಟ್ರಾವೆಲ್ ಏಜೆನ್ಸಿ ಅಂಗಡಿಗಳಿಗೆ ಕರೆದುಕೊಂಡು ಹೋಗಿ ಟಿಕೆಟ್ ಕನ್ಫರ್ಮ್ ಮಾಡಿಸಿಕೊಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರ್‌ಪಿಎಫ್‌ನ ಕ್ರೈಮ್ ಇನ್ವೆಸ್ಟಿಗೇಷನ್ ಬ್ರ‍್ಯಾಂಚ್ ಹಾಗೂ ಡಿವಿಷನಲ್ ಸ್ಟೆಷಲ್ ಟೀಂ ದಾಳಿ ನಡೆಸಿದ್ದಾರೆ. ಈ ವೇಳೆ ಅನುಮಾನಸ್ಪಾದ ಓಡಾಟ ಹಾಗೂ ಟಿಕೆಟ್ ಕನ್ಫರ್ಮ್ ಮಾಡಿಸಿಕೊಡುತ್ತಿದ್ದ ಟ್ರಾವೆಲ್ ಏಜೆನ್ಸಿಯ 9 ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆ

ಟ್ರಾವೆಲ್ ಏಜೆನ್ಸಿ ಸಿಬ್ಬಂದಿಯೇ ಟಿಕೆಟ್ ಬುಕ್ ಮಾಡಿ, ಕನ್ಫರ್ಮ್ ಮಾಡಿಕೊಡುತ್ತಿದ್ದರು. ಇನ್ನೂ ಕೆಲವರ ಬಳಿ ವೇಟಿಂಗ್ ಇರುವ ಟಿಕೆಟ್ ಪಿಎನ್‌ಆರ್ ನಂಬರ್ ಪಡೆದು, ಟಿಕೆಟ್ ರಿಸರ್ವ್ ಮಾಡಿಕೊಡ್ತಿವಿ ಎಂದು ರಿಸರ್ವೇಷನ್ ಕೌಂಟರ್ ಬಳಿಯೇ ಗ್ರಾಹಕರ ಜೊತೆ ವ್ಯವಹಾರ ನಡೆಸುತ್ತಿದ್ದರು. ಹೀಗೆ ಪ್ರತಿದಿನ ಟಿಕೆಟ್ ಕೌಂಟರ್ ಬಳಿ ಗ್ರಾಹಕರ ಜೊತೆ ನಡೆಸ್ತಿದ್ದ ಮಾತುಕತೆ, ಅನುಮಾನಸ್ಪಾದ ಓಡಾಟ ನೋಡಿ, ರೈಲ್ವೆ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ದಾಳಿ ನಡೆಸಲಾಗಿದೆ.

Train Ticket

ಒಂಬತ್ತು ಜನರನ್ನ ವಶಕ್ಕೆ ಪಡೆದು ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಹಿಂದೆಯೂ ನಕಲಿ ಟಿಕೆಟ್ ಹಾಗೂ ರಿಸರ್ವೇಷನ್ ಟಿಕೆಟ್ ನೆಪದಲ್ಲಿ ಜನರಿಗೆ ವಂಚನೆ ಮಾಡ್ತಿದ್ದ ಗ್ಯಾಂಗ್‌ನ ಬಂಧಿಸಲಾಗಿತ್ತು. ಉತ್ತರ ಭಾರತದ ಪ್ರಯಾಣಿಕರಿಗೂ ವಂಚನೆ ಮಾಡಿದ್ದು, ಇನ್ನೊಮ್ಮೆ ಈ ರೀತಿಯ ಅಕ್ರಮವೆಸಗಿದ್ರೆ ಐಆರ್‌ಸಿಟಿಸಿ ಐಡಿ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಇನ್ನೂ ರೈಲ್ವೆ ಸೀಟು ಚಾರ್ಟ್ ತಯಾರಿಸುವ ಸಿಬ್ಬಂದಿ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.ಇದನ್ನೂ ಓದಿ: ರಾಯಚೂರಿನಲ್ಲಿ ಮಳೆಯಬ್ಬರ – ಪಾಯ ಕುಸಿದು ಪಕ್ಕಕ್ಕೆ ವಾಲಿದ 4 ಅಂತಸ್ತಿನ ಕಟ್ಟಡ

Share This Article