ಏರ್‌ ಇಂಡಿಯಾ ದುರಂತಕ್ಕೆ ಪೈಲಟ್ ಕಾರಣನಾ? – ಅಮೆರಿಕ ವರದಿಯಿಂದ ಗೊಂದಲ; ಪ್ರತಿಕ್ರಿಯೆಗೆ ಕೇಂದ್ರ ನಕಾರ

Public TV
3 Min Read
Air India Ahmedabad Plane Crash Black box found on hostel rooftop

ಅಹ್ಮದಾಬಾದ್: ಇಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ (Air India Plane Crash) ಹೇಗಾಯ್ತು ಅನ್ನೋ ಗೊಂದಲ ಮುಂದುವರಿದಿದೆ. ಈ ಮಧ್ಯೆ ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್, 260 ಜನರ ಸಾವಿಗೆ ಕಾರಣವಾದ ಅಂಶ ವರದಿ ಮಾಡಿದೆ.

ಟೇಕಾಫ್ ಆಗಿದ್ದ ವಿಮಾನದ ಇಂಧನ ಕಟ್ ಆಗಿದ್ದೇ ದುರಂತಕ್ಕೆ ಕಾರಣ ಎಂದು ವರದಿ ಮಾಡಿದೆ. ಕ್ಯಾಪ್ಟನ್ ಸುಮೀತ್ ಸಬರ್‌ವಾಲ್ ಯಡವಟ್ಟಿನಿಂದಲೇ ಈ ದುರಂತ ನಡೆದೋಗಿದೆ. 15,000 ಗಂಟೆಗಳಷ್ಟು ಹಾರಾಟದ ಅನುಭವ ಹೊಂದಿದ್ದ ಸುಮಿತ್ ಸಬರ್‌ವಾಲ್, ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಇಂಧನ ಪೂರೈಕೆ ಕಟ್ ಆಫ್ ಮಾಡಿದ್ದರು. ಇದನ್ನು ಗಮನಿಸಿದ ಕೋ ಪೈಲಟ್ ಕ್ಲೈವ್‌ ಕುಂದರ್, ಗಾಬರಿಯಿಂದಲೇ ಕ್ಯಾಪ್ಟನ್‌ಗೆ ಕೇಳಿದ್ದಾರೆ. ಇಂಧನ ಯಾಕೆ ಸ್ವಿಚ್ ಆಫ್ ಮಾಡಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕ್ಯಾಪ್ಟನ್ ಸುಮೀತ್, ನಾನೇನು ಮಾಡಿಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ಕಾಕ್‌ಪಿಟ್‌ನ ಸಂಭಾಷಣೆ ಬ್ಲಾಕ್‌ ಬಾಕ್ಸ್‌ನಲ್ಲಿ ರೆಕಾರ್ಡ್ ಆಗಿದೆ ಎನ್ನುತ್ತಿದೆ ವಾಲ್‌ಸ್ಟ್ರೀಟ್‌ ಜರ್ನಲ್‌ನ ವರದಿ. ಇದನ್ನೂ ಓದಿ:  ಇಂಧನಕ್ಕೆ ಪ್ರಮುಖ ಆದ್ಯತೆ – ನ್ಯಾಟೋ ಮುಖ್ಯಸ್ಥನ ನಿರ್ಬಂಧಗಳ ಬೆದರಿಕೆಗೆ ಭಾರತ ತಿರುಗೇಟು

Air India Bird Hit Ahmedabad Plane Crash

ಅಮೆರಿಕದ ಜರ್ನಲ್ ಮಾಡಿರೋ ವರದಿ ಬಗ್ಗೆ ವಿದೇಶಾಂಗ ಇಲಾಖೆ ಪ್ರತಿಕ್ರಿಯೆಗೆ ನಿರಾಕರಿಸಿದೆ. ವರದಿ ನೋಡಿ ಪ್ರತಿಕ್ರಿಯಿಸೋದಾಗಿ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಇನ್ನೂ ವೈಮಾನಿಕ ತಜ್ಞರು, ಏರ್ ಇಂಡಿಯಾ ಪೈಲಟ್‌ಗಳನ್ನ ಟಾರ್ಗೆಟ್ ಮಾಡಿ ವರದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಯೋಗಿ ಆದಿತ್ಯನಾಥ್‌ ಸಿಎಂ ಆದ ನಂತರ 15,000 ಎನ್‌ಕೌಂಟರ್‌ – 238 ಮಂದಿ ಹತ್ಯೆ

AAIB ಪ್ರಾಥಮಿಕ ವರದಿಯಲ್ಲಿ ಏನಿದೆ?
ಇದಕ್ಕೂ ಮುನ್ನ ಬಹಿರಂಗವಾಗಿದ್ದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿ, ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನದಲ್ಲಿ ಏನೆಲ್ಲಾ ಆಯ್ತು ಅನ್ನೋದನ್ನ ತಿಳಿಸಿತ್ತು. ವಿಮಾನ ಅಪಘಾತ ತನಿಖಾ ಬ್ಯೂರೋ ವರದಿಯಲ್ಲಿ ಪೈಲಟ್‌ಗಳ ಕಾಕ್‌ಪಿಟ್‌ (Cockpit) ಧ್ವನಿ ರೆಕಾರ್ಡಿಂಗ್‌ ಡೇಟಾವನ್ನ ಉಲ್ಲೇಖಿಸಲಾಗಿದೆ. ಇದರಲ್ಲಿ ವಿಮಾನವು ವಾಯುಪ್ರದೇಶಕ್ಕೆ ತಲುಪಿದ ಕೆಲವೇ ಸೆಕೆಂಡುಗಳಲ್ಲಿ ಡ್ಯುಯಲ್-ಎಂಜಿನ್ ಸ್ಥಗಿತಗೊಂಡಿರುವುದು ಅಪಘಾತಕ್ಕೆ ಕಾರಣ ಎಂದು ಸೂಚಿಸಲಾಗಿದೆ. ಅಪಘಾತಕ್ಕೆ ಕೆಲ ಸೆಕೆಂಡುಗಳಿಗೂ ಮುನ್ನ ನಡೆದ ಸಂಭಾಷಣೆಯ ಒಂದು ಭಾಗದಲ್ಲಿ ಇದು ತಿಳಿದಿದೆ. ಜೊತೆಗೆ ವಿಮಾನವು 8 ಡಿಗ್ರಿ ಮೂಗು ಮೇಲಕ್ಕೆತ್ತಿದ ಸ್ಥಿತಿಯಲ್ಲಿತ್ತು. ಆದರೆ ಇಂಜಿನ್‌ಗಳು ಆಫ್ ಆಗಿದ್ದವು. ಇದರಿಂದ ವಿಮಾನವು ಏರಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ.

ಟೇಕ್ ಆಫ್ ಆದ 3 ಸೆಕೆಂಡ್‌ಗಳ ನಂತರ, ಎರಡೂ ಇಂಜಿನ್‌ಗಳ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳು ರನ್‌ ನಿಂದ ಕಟ್‌ಆಫ್‌ಗೆ ಬದಲಾದವು. ಇದರಿಂದಾಗಿ ಥ್ರಸ್ಟ್ ಇದ್ದಕ್ಕಿದ್ದಂತೆ ಕಡಿಮೆಯಾಯಿತು. ಅಲ್ಲದೇ ಒಂದು ಪೈಲಟ್ ʻನೀವು ಏಕೆ ಕಟ್ ಆಫ್ ಮಾಡಿದ್ರಿ?ʼ ಎಂದು ಕೇಳುವುದು ಕೇಳಿಸುತ್ತದೆ. ಅದಕ್ಕೆ ಇನ್ನೊಬ್ಬ ಪೈಲಟ್ ʻನಾನು ಮಾಡಿಲ್ಲʼ ಎಂದು ಉತ್ತರಿಸುತ್ತಾರೆ. ಇದರಿಂದ ತಾಂತ್ರಿಕ ದೋಷ ಅಥವಾ ಆಕಸ್ಮಿಕವಾಗಿ ಸ್ವಿಚ್ ಆಫ್ ಆಗಿರಬಹುದು ಎಂದು ಶಂಕಿಸಲಾಗಿದೆ. ʻWhy did you cutoff?ʼ ಮತ್ತು ʻI did not do so,ʼ ಎಂಬ ಮಾತುಗಳು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸಿಎಂ ನಿತೀಶ್ ಕುಮಾರ್ ಪಕ್ಷದ ನಾಯಕನ ಬರ್ಬರ ಹತ್ಯೆ – ನಾಲ್ಕೇ ದಿನಗಳಲ್ಲಿ 2ನೇ ರಾಜಕೀಯ ಹತ್ಯೆ

ಇನ್ನೂ ಫ್ಲೈಟ್ ಡೇಟಾ ರೆಕಾರ್ಡರ್‌ ಪ್ರಕಾರ, ಇಂಜಿನ್-1 ಅನ್ನು ಸ್ವಯಂಚಾಲಿತವಾಗಿ ಮರುಪ್ರಾರಂಭಿಸಲು ಪ್ರಯತ್ನಿಸಿ, ಅದು ಯಶಸ್ವಿಯಾಯಿತು. ಆದ್ರೆ ಇಂಜಿನ್ 2 ಅನ್ನು ಮರುಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ರಾಮ್ ಏರ್ ಟರ್ಬೈನ್ (RAT) ಅನ್ನು ತುರ್ತು ವಿದ್ಯುತ್ ಮೂಲವಾಗಿ ಬಳಸಲಾಗಿತ್ತು. ಇದು ಟೇಕ್ ಆಫ್ ಆದ ತಕ್ಷಣವೇ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಇದರಿಂದ ಅಗತ್ಯ ಸಿಸ್ಟಮ್‌ಗಳಿಗೆ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು ಎಂದು ವರದಿ ತಿಳಿಸಿದೆ. RAT ಅಂದರೆ ವಿಮಾನದಲ್ಲಿನ ಎಲೆಕ್ಟ್ರಿಕಲ್ ವ್ಯವಸ್ಥೆ ಕೈಕೊಟ್ಟಾಗ ಉಪಯೋಗಿಸುವ ಒಂದು ಸಾಧನ.

Share This Article