Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಲಬುರಗಿ ಜ್ಯುವೆಲರಿ ಶಾಪ್‌ ದರೋಡೆ – ಅಂತರರಾಜ್ಯ ಕಳ್ಳರು ಭಾಗಿ ಶಂಕೆ, ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಕಲಬುರಗಿ ಜ್ಯುವೆಲರಿ ಶಾಪ್‌ ದರೋಡೆ – ಅಂತರರಾಜ್ಯ ಕಳ್ಳರು ಭಾಗಿ ಶಂಕೆ, ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ

Crime

ಕಲಬುರಗಿ ಜ್ಯುವೆಲರಿ ಶಾಪ್‌ ದರೋಡೆ – ಅಂತರರಾಜ್ಯ ಕಳ್ಳರು ಭಾಗಿ ಶಂಕೆ, ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ

Public TV
Last updated: July 12, 2025 9:41 pm
Public TV
Share
2 Min Read
https publictv.in gang robs 3 kg of gold from jewelry shop at gunpoint in kalaburagi
SHARE

ಕಲಬುರಗಿ: ನಗರದ (Kalaburagi) ಹೃದಯ ಭಾಗದಲ್ಲಿರುವ ಸೂಪರ್ ಮಾರ್ಕೆಟ್‌ನ ಸರಾಫ್ ಬಜಾರ್‌ನಲ್ಲಿ ಚಿನ್ನದ ಅಂಗಡಿ ( Jewelry Shop) ದರೋಡೆ ಪ್ರಕರಣದಲ್ಲಿ ಅಂತರರಾಜ್ಯ ದರೋಡೆಕೋರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ದರೋಡೆಕೋರರ ಚಲನವಲನಗಳ ಹಲವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶನಿವಾರ ಹಾಡಹಗಲೇ ದರೋಡೆಕೋರರು ಅಂಗಡಿ ಮಾಲೀಕನಿಗೆ ಗನ್ ಪಾಯಿಂಟ್‌ನಲ್ಲಿ ಇಟ್ಟು ಬಂಗಾರ ದೋಚಿದ್ದರು. ಆದರೆ, ಈ ಖತರ್ನಾಕ್ ಗ್ಯಾಂಗ್ ಯಾವುದೇ ರೀತಿಯ ಮೊಬೈಲ್, ಕಾರು ಹಾಗೂ ಬೈಕ್ ಸಹ ಬಳಸದೇ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ದರೋಡೆ – ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್

ದರೋಡೆಗೂ ಮೊದಲು ನಾಲ್ಕು ಜನರ ಗ್ಯಾಂಗ್ ಆಟೋ‌ ಮೂಲಕ ಸರಾಫ್ ಬಜಾರ್‌ ತನಕ ಬಂದಿದೆ. ದರೋಡೆ ಬಳಿಕ ಬ್ರಹ್ಮಪೂರ್ ಪೊಲೀಸ್ ಠಾಣೆವರೆಗೂ ಬಿಂದಾಸಾಗಿ ನಡೆದುಕೊಂಡೆ ಹೋಗಿದ್ದಾರೆ. ಬಳಿಕ ಅಲ್ಲಿಂದ ಆಟೋದಲ್ಲಿ ಕುಳಿತು ಕೇಂದ್ರೀಯ ಬಸ್ ನಿಲ್ದಾಣದ ಹಿಂಬದಿ ಗೇಟ್ ಬಳಿ ಇಳಿದುಕೊಂಡಿದ್ದಾರೆ. ಅಂಗಡಿ ಮಾಲೀಕನ ಮೊಬೈಲನ್ನು ಅಲ್ಲೇ ಬಿಸಾಡಿ ಕೇಂದ್ರ ಬಸ್ ನಿಲ್ದಾಣದ ಒಳಗೆ ನಾಲ್ಕು ಜನ ದರೋಡೆಕೊರರು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಅಂತರರಾಜ್ಯ ದರೋಡೆಕೋರರು ಈ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಮಾಹಿತಿ‌ ಕಲೆ ಹಾಕಿದ್ದು, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಪೊಲೀಸರಿಗೆ ದರೋಡೆಕೊರರ ಭಾವಚಿತ್ರಗಳನ್ನು ರವಾನಿಸಲಾಗಿದೆ.

ಪೊಲೀಸರ ದಾರಿ ತಪ್ಪಿಸಲು ಮೊಬೈಲ್ ಬಳಕೆ
ದರೋಡೆ ಸಮಯದಲ್ಲಿ ನಾಲ್ಕು ಜನ ದರೋಡೆಕೊರರು ಮೊಬೈಲ್ ಬಳಕೆ ಮಾಡದೆ ಕೈಯಲ್ಲಿ ಸುಮ್ಮನೆ ಮೊಬೈಲ್ ಹಿಡಿದು ಪೊಲೀಸರ ತನಿಖಾ ದಾರಿ ತಪ್ಪಿಸಲು ಪ್ಲ್ಯಾನ್ ಸಹ ಮಾಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ, ದರೊಡೆಕೋರರ ಪತ್ತೆಗೆ ಅಷ್ಟ ದಿಕ್ಕುಗಳಲ್ಲಿ ಪೊಲೀಸರು ಐದು ತಂಡಗಳಿಂದ ದರೋಡೆಕೊರರ ಚಲನವಲನಗಳ ಇಂಚಿಂಚು ಹೆಜ್ಜೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಒಬ್ಬೊಬ್ಬರಿಗೆ ಒಂದು ಜವಾಬ್ದಾರಿ
ಗ್ರಾಮೀಣ ಎಸಿಪಿ ನೈತೃತ್ವದ ತಂಡದಿಂದ ಟವರ್ ಲೋಕೆಷನ್, ಸಿಡಿಆರ್ ಸಂಗ್ರಹ, ಉತ್ತರ ವಿಭಾಗದ ಎಸಿಪಿಯಿಂದ ನಗರದ ಸಿಸಿಟಿವಿ ಪರೀಶಿಲನೆ, ದಕ್ಷಿಣ ಎಸಿಪಿ ನೈತೃತ್ವದ ತಂಡದಿಂದ ಅಂಗಡಿ‌ ಮಾಲೀಕ ಹಾಗೂ ಗ್ರಾಹಕರ ಬಗ್ಗೆ ಮಾಹಿತಿ ಸಂಗ್ರಹ, ಅಶೋಕ ನಗರ ಠಾಣೆ ಇನ್ಸಪೆಕ್ಟರ್‌ಗೆ ಬಸ್‌ಗಳ ಬಗ್ಗೆ ಮಾಹಿತಿ ಹಾಗೂ ಸ್ಟೇಷನ್ ಬಜಾರ್ ಇನ್ಸಪೆಕ್ಟರ್‌ ರೈಲು ಪ್ರಯಾಣದ ಬಗ್ಗೆ ಪರೀಶಿಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಿಯತಮೆ ಕುಟುಂಬಸ್ಥರಿಂದ ಕೊಲೆ ಬೆದರಿಕೆ ಆರೋಪ – ಹೆದರಿ ಯುವಕ ಆತ್ಮಹತ್ಯೆ

 

TAGGED:crimeJewelryKalaburagi
Share This Article
Facebook Whatsapp Whatsapp Telegram

Cinema news

KD Vulgar Song Controversy I will write and release a new song Director Prem apologizes 1
ಹೊಸ ಹಾಡನ್ನು ಬರೆದು ಬಿಡುಗಡೆ ಮಾಡುತ್ತೇನೆ: ಕ್ಷಮೆ ಕೇಳಿದ ಪ್ರೇಮ್‌
Bengaluru City Cinema Districts Latest Main Post
KD The Devil Thanks for opposing the song Nora Fatehi Reacts To Vulgar Song Controversy
ಸಾಂಗ್‌ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್‌ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ
Bollywood Cinema Latest Sandalwood
darshan vijayalakshmi
ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಒಳ ಸಂದರ್ಶನಕ್ಕಿಲ್ಲ ಅವಕಾಶ – ಹೆಂಡ್ತಿ, ಮಗನ ಭೇಟಿ ಇಲ್ಲ
Cinema Latest Sandalwood Top Stories
Sarse Ninna Seraga Sarse song jogi prem
ಜೋಗಿ ಪ್ರೇಮ್‌ಗೆ ಬಿಗ್‌ ಶಾಕ್‌ – ‘ಸರ್ಸೆ ಸೆರಗ ಸರ್ಸೆ’ ವಿವಾದಿತ ಹಾಡು ಬ್ಯಾನ್
Cinema Latest Main Post Sandalwood

You Might Also Like

tulsi gabbard
Latest

ಅಮೆರಿಕಕ್ಕೆ ಪಾಕಿಸ್ತಾನದಿಂದ ಪರಮಾಣು ಬೆದರಿಕೆಯಿದೆ: ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್

Public TV
By Public TV
8 hours ago
Parappana agrahara 1
Bengaluru City

ಜೈಲಿನಲ್ಲಿ ಮಹಿಳಾ ಖೈದಿಗಳ ಡ್ರಗ್ಸ್ ಟೆಸ್ಟ್ ಪಾಸಿಟಿವ್ ರಿಪೋರ್ಟ್ – ಅಧಿಕಾರಿಗಳೇ ಶಾಕ್

Public TV
By Public TV
8 hours ago
Bagalkote by election CM Siddaramaiah meeting with HY Meti Family
Bagalkot

ಉಪಚುನಾವಣೆ| ಸಿಎಂ ಕಚೇರಿಯಲ್ಲಿ ಸಂಧಾನ ಸಭೆಗೆ ವ್ಯಾಪಕ ಟೀಕೆ

Public TV
By Public TV
9 hours ago
Kalaburagi Dharwad Benches of the High Court
Districts

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್ – ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ

Public TV
By Public TV
9 hours ago
HD Devegowda Mallikarjun Kharge
Bengaluru City

ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ: ಹೆಚ್‌ಡಿಡಿ ತಿರುಗೇಟು

Public TV
By Public TV
9 hours ago
ಸಾಂದರ್ಭಿಕ ಚಿತ್ರ
Bengaluru City

ಯುಗಾದಿಗೆ `ಗೃಹಲಕ್ಷ್ಮಿ’ಯರಿಗೆ ಗುಡ್‌ನ್ಯೂಸ್ – 27ನೇ ಕಂತಿನ ಹಣ ಬಿಡುಗಡೆ

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?