ರಾಯಚೂರು: ಗುರುಪೂರ್ಣಿಮೆ ಹಿನ್ನೆಲೆ ರಾಯರ ಸನ್ನಿಧಿ ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮೃತ್ತಿಕಾ ಸಂಗ್ರಹ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು.
ಮೆರವಣಿಗೆ ಮೂಲಕ ತುಳಸಿ ವನಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆಗಳನ್ನ ಸಲ್ಲಿಸಿ ಮೃತ್ತಿಕಾ ಸಂಗ್ರಹಿಸಿದರು. ಬಳಿಕ ಸುವರ್ಣ ಪಲ್ಲಕ್ಕಿಯಲ್ಲಿ ಮೃತ್ತಿಕಾವನ್ನು ಮೆರವಣಿಗೆ ಮೂಲಕ ತಂದು ರಾಯರ ವೃಂದಾವನದ ಮುಂದೆ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಸಿಎಂ ಬದಲಾವಣೆ – ನನಗೆ ಡ್ರಾಮಾ ಕಂಪನಿ ಓಪನ್ ಮಾಡೋಕೆ ಇಷ್ಟವಿಲ್ಲ ಎಂದ ಪರಮೇಶ್ವರ್
ಗುರುವಾರವೇ ಗುರುಪೂರ್ಣಿಮೆ ಬಂದಿರುವ ಹಿನ್ನೆಲೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ರಾಯರ ದರ್ಶನಕ್ಕೆ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿ ದೇಶದ ವಿವಿಧ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ಇದನ್ನೂ ಓದಿ: ಡಿಕೆಶಿ ಪರ ಕೆಲ ಶಾಸಕರ ಬೆಂಬಲ ಮಾತ್ರ ಇದೆ, 5 ವರ್ಷವೂ ನಾನೇ ಸಿಎಂ – ಡೆಲ್ಲಿಯಲ್ಲಿ ಸಿಎಂ ಗೂಗ್ಲಿ