ನಟ ಕಿಚ್ಚ ಸುದೀಪ್ (Sudeep) ಮಹತ್ವದ ಹೆಜ್ಜೆ ಇಟ್ಟಿದ್ದು ಇಂಡಿಯನ್ ಕಾರ್ ರೇಸ್ ಫೆಸ್ಟಿವಲ್‌ನಲ್ಲಿ (Indian Car Race Festival) ಬೆಂಗಳೂರು ತಂಡವನ್ನು (Bengaluru Team) ಖರೀದಿಸಿದ್ದಾರೆ.
ಸುದೀಪ್ ಖರೀದಿಸಿದ ತಂಡಕ್ಕೆ ಕಿಚ್ಚಾಸ್ ಕಿಂಗ್ಸ್ (Kicchas Kings) ಎಂಬ ಹೆಸರನ್ನು ಇಡಲಾಗಿದೆ. ಬೆಂಗಳೂರು ಟೀಮ್ ಓನರ್ ಆಗಿರುವ ಕಿಚ್ಚ ತಂಡಕ್ಕೆ ಬೆಂಗಳೂರು ಟೀಮ್ ಎಂದೇ ಹೆಸರಿಡುತ್ತಾರೆ ಎಂದು ಸುದೀಪ್ ಭಾವಿಸಿದ್ದರು. ಆದರೆ ಕಿಚ್ಚಾಸ್ ಕಿಂಗ್ಸ್ ಎಂದು ಹೆಸರಿಟ್ಟಿದ್ದಕ್ಕೆ ಸುದೀಪ್ ಖುಷಿಯಾಗಿದ್ದಾರೆ. ಈ ಮೂಲಕ ಸಿನಿಮಾದಾಚೆಯೂ ಕಿಚ್ಚ ಹೆಜ್ಜೆ ಇಟ್ಟಿದ್ದಾರೆ. ಇದನ್ನೂ ಓದಿ: ಗಾಳಿಯಲ್ಲಿ ಬಟ್ಟೆ ಹಾರಿಸುವ ರೀಲ್ಸ್‌ಗೆ ನಿವಿ ಅಂಬಾಸಿಡರ್
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಓನರ್‌ಶಿಪ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಮಾಡಲಾಗುವ ಆಟಕ್ಕೆ ಈ ರೇಸ್ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಈ ರೇಸ್ ಸುಲಭದ್ದಲ್ಲ ಎಂದಿದ್ದಾರೆ.
ರೇಸ್‌ಕಾರ್‌ನಲ್ಲಿ ಕೂರುವ ಆಸೆ ಎಲ್ಲರಿಗೂ ಇರುತ್ತೆ, ಆದರೆ ಓನರ್ ಆಗಿದ್ದರೂ ಸುದೀಪ್‌ಗೆ ಕಾರ್‌ನೊಳಗೆ ಕೂರುವ ಅವಕಾಶ ಇಲ್ಲ ಲೈಸೆನ್ಸ್ ಇದ್ದವರು ಮಾತ್ರ ಕೂರಬೇಕಾಗುತ್ತೆ ಕರಾರುವಕ್ಕಾಗಿ ಹೇಳಿದ್ದಾರೆ.
ಅಂದಹಾಗೆ ಇಂಡಿಯನ್ ರೇಸ್ ಫೆಸ್ಟಿವಲ್‌ಗೆ ಓನರ್‌ಶಿಪ್ ಆಯ್ಕೆಯನ್ನ ಬಿಡ್ಡಿಂಗ್ ಮೂಲಕವೇ ಆಯ್ಕೆ ಮಾಡಲಾಗುತ್ತದೆ. ಕಾರ್ ರೇಸ್ ಸ್ಪರ್ಧೆಗೆ ಕಿಚ್ಚ ಓನರ್ ಆಗಿರುವ ಕಾರಣ ನಿಮ್ಮ ಇಷ್ಟದ ಕಾರು ಯಾವುದು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಸುದೀಪ್ ನನ್ನ ಮೊದಲ ಕಾರ್ ಮಾರುತಿ 800. ಅದೇ ನನ್ನ ಸೂಪರ್ ಕಾರ್ ಎಂದಿದ್ದಾರೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ
ಆಗಸ್ಟ್ ತಿಂಗಳಲ್ಲಿ ರೇಸ್ ಆರಂಭವಾಗಲಿದ್ದು ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಫ್ರಾಂಚೈಸಿಗಳ ಮಧ್ಯೆ ಸ್ಪರ್ಧೆ ನಡೆಯಲಿದೆ.