ಚಿಕ್ಕಬಳ್ಳಾಪುರ: 5 ವರ್ಷವೂ ನಾನೇ ಸಿಎಂ, ನಮ್ಮ ಸರ್ಕಾರ ಬಂಡೆ ತರ ಇರುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಚಿಕ್ಕಬಳ್ಳಾಪುರದಲ್ಲಿಂದು (Chikkaballapura) ಕ್ಯಾಬಿನೆಟ್ ಸಭೆಗೂ ಮುನ್ನ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, 5 ವರ್ಷ ನಾನೇ ಸಿಎಂ ಆಗಿರ್ತೀನಿ. ನಿಮಗ್ಯಾಕೆ ಅನುಮಾನ ಬಂದಿದೆ? ಅಂತ ಪ್ರಶ್ನಿಸಿದ್ರು. ಇದನ್ನೂ ಓದಿ: ಸಿಎಂ ಕಾರ್ಯಕ್ರಮದಲ್ಲಿ ಅಪಮಾನ – ಸ್ವಯಂ ನಿವೃತ್ತಿಗೆ ಮುಂದಾದ ಎಎಸ್‌ಪಿ ಬರಮಣ್ಣಿ
ಬಿಜೆಪಿಯವರು (BJP_ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು, ಸತ್ಯ ಹೇಳೋದು ಅವರಿಗೆ ಗೊತ್ತೇ ಇಲ್ಲ. ನಾವೆಲ್ಲರೂ ಒಟ್ಟಾಗಿದ್ದೇವೆ. 5 ವರ್ಷ ನಾವೇ ಅಧಿಕಾರದಲ್ಲಿ ಇರ್ತೇವೆ. ನಮ್ಮ ಸರ್ಕಾರ (Congress Government) ಬಂಡೆ ತರ ಇರುತ್ತೆ ಎಂದರು.
ಬಿಜೆಪಿಯವರು ಹಗಲು ಕನಸು ಕಾಣ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಡಿಕೆ ಶಿವಕುಮಾರ್ ಹೇಳೋ ಹಾಗೆ ಏನೂ ಸಾಕ್ಷಿ ಗುಡ್ಡೆ ಬಿಟ್ಡು ಹೋಗಿದ್ದಾರೆ. ಕುಮಾರಸ್ವಾಮಿ ಜೊತೆ ಸಮ್ಮಿಶ್ರ ಸರ್ಕಾರದಲ್ಲಿ ಏನು ಮಾಡಿದ್ರು? ಸುಳ್ಳು ಹೇಳಿಕೊಂಡು ಜನರನ್ನ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಬಿಟ್ರೆ, ಬೇರೆನೂ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ಓಲಾ, ಊಬರ್ ಬಳಕೆದಾರರಿಗೆ ಶಾಕ್ – ಪೀಕ್ ಅವರ್‌ನಲ್ಲಿ ದುಪ್ಪಟ್ಟು ದರ ವಿಧಿಸಲು ಕೇಂದ್ರ ಒಪ್ಪಿಗೆ
2ನೇ ವರ್ಷದ ಸಾಧನಾ ಸಮಾವೇಶದಲ್ಲಿ 3 ಲಕ್ಷ ಜನ ಇದ್ರು. ಮಳೆ ಇದ್ದರೂ ಸಹ ಜನ ಬಂದಿದ್ದರು. ಯಾರಾದ್ರೂ ಸುಮ್ಮನೆ ಬರ್ತಾರಾ? ಅಂತ ಪ್ರಶ್ನೆ ಮಾಡಿದ ಸಿಎಂ, ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಕ್ಷದಲ್ಲಿ ಯಾರೇ ಶಿಸ್ತು ಉಲ್ಲಂಘಿಸಿದ್ರು ನೋಟಿಸ್ ಕೊಡ್ತೀನಿ – ಡಿಕೆಶಿ