ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ

Public TV
2 Min Read
Karisma Kapoor Sunjay Kapur

– ವಿಮಾನ ದುರಂತದ ಬಗ್ಗೆ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವು

ಬಾಲಿವುಡ್‌ ನಟಿ ಕರಿಷ್ಮಾ ಕಪೂರ್ (Karisma Kapoor) ಅವರ ಮಾಜಿ ಪತಿ, ಕೈಗಾರಿಕೋದ್ಯಮಿ ಸಂಜಯ್ ಕಪೂರ್ (Sunjay Kapur) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಂಜಯ್‌ ಕಪೂರ್‌ ಯುಕೆಯಲ್ಲಿದ್ದರು. ಸೋನಾ ಕಾಮ್‌ಸ್ಟಾರ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದರು. ಕೈಗಾರಿಕೋದ್ಯಮಿ ಪೋಲೊ ಆಡುತ್ತಿದ್ದಾಗ ತೀವ್ರ ಹೃದಯಾಘಾತವಾಯಿತು. ಸಾವಿಗೂ ಮುನ್ನ ಸಂಜಯ್ ಅವರು ಅಹಮದಾಬಾದ್-ಲಂಡನ್ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಿ ಪೋಸ್ಟ್‌ ಹಾಕಿದ್ದರು.‌ ಇದನ್ನೂ ಓದಿ: Ahmedabad | ವಿಮಾನ ದುರಂತ ನಡೆದ ಸ್ಥಳಕ್ಕೆ ಇಂದು ಮೋದಿ ಭೇಟಿ

ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ದುರಂತದ ಭಯಾನಕ ಸುದ್ದಿ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಬಾಧಿತ ಎಲ್ಲಾ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ಅವರಿಗೆ ನೋವು ಭರಿಸುವ ಶಕ್ತಿ ಪಡೆಯಲಿ ಎಂಬುದು ಅವರ ಕೊನೆಯ ಟ್ವೀಟ್‌ ಆಗಿತ್ತು.

ಸಂಜಯ್ ಬಾಲಿವುಡ್ ನಟಿ ಕರಿಷ್ಮಾ ಅವರನ್ನು 2003 ರಲ್ಲಿ ವಿವಾಹವಾದರು. 2016 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಮಗಳು ಸಮೈರಾ ಮತ್ತು ಮಗ ಕಿಯಾನ್ ಇದ್ದಾರೆ. ಇಬ್ಬರೂ ಮಕ್ಕಳು ಕರಿಷ್ಮಾ ಅವರ ಜೊತೆಗಿದ್ದಾರೆ. ಸಂಜಯ್ ನ್ಯೂಯಾರ್ಕ್‌ನಲ್ಲಿ ಭೇಟಿಯಾದ ಪ್ರಿಯಾ ಸಚ್‌ದೇವ್ ಅವರನ್ನು ಪ್ರೀತಿಸುತ್ತಿದ್ದರು. ಐದು ವರ್ಷಗಳ ಡೇಟಿಂಗ್ ನಂತರ, ಅವರು ದೆಹಲಿಯಲ್ಲಿ ವಿವಾಹವಾದರು. ದಂಪತಿಗೆ ಅಜಾರಿಯಾಸ್ ಕಪೂರ್ ಎಂಬ ಮಗನಿದ್ದಾನೆ.

ಹಿಂದೆ ಸಂದರ್ಶನವೊಂದರಲ್ಲಿ ಪ್ರಿಯಾ, ಸಂಜಯ್ ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದರು. ‘ಸಂಜಯ್ ಒಬ್ಬ ಅದ್ಭುತ ಮನುಷ್ಯ. ತನ್ನ ಮಕ್ಕಳಿಗೆ ತುಂಬಾ ಒಳ್ಳೆಯ ತಂದೆ. ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ನಾವು ಮಾಜಿ ಸಂಗಾತಿಗಳ ಬಗ್ಗೆ ನಮ್ಮ ಮಕ್ಕಳಲ್ಲಿ ಯಾವುದೇ ನಕಾರಾತ್ಮಕ ಭಾವನೆ ಮೂಡಿಸಲು ಎಂದಿಗೂ ಪ್ರಯತ್ನಿಸಿಲ್ಲ’ ಎಂದು ತಿಳಿಸಿದ್ದರು. ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

Share This Article