ಕರ್ನಾಟಕದಲ್ಲಿ ಮತ್ತೆ ಜಾತಿ ಗಣತಿ ಸಮೀಕ್ಷೆ – ಪ್ರಬಲ ಸಮುದಾಯದ ಒತ್ತಡಕ್ಕೆ ಮಣಿದ ʼಕೈʼಕಮಾಂಡ್

Public TV
2 Min Read
rahul gandhi siddaramaiah dk shivakumar

– ಹಳೆ ಗಣತಿ, ಹೊಸ ನಂಬರ್ ಫಾರ್ಮುಲಾ

ನವದೆಹಲಿ/ ಬೆಂಗಳೂರು: ರಾಜ್ಯದಲ್ಲಿ ಜಾತಿ ಗಣತಿ (Caste Census) ಗೊಂದಲ ಮುಗಿಯುವ ಲಕ್ಷಣ ಕಾಣುತ್ತಿಲ್ಲ. 10 ವರ್ಷಗಳ ಹಳೆಯ ಜಾತಿಗಣತಿ ವರದಿಗೆ ಮರು ಸರ್ವೆಯ ಅಂಕಿ ಅಂಶ ಸೇರ್ಪಡೆಗೆ ಕಾಂಗ್ರೆಸ್ ಹೈಕಮಾಂಡ್ (Congress High Command) ಸೂಚನೆ ಕೊಟ್ಟಿದೆ.

ಪ್ರಬಲ ಜಾತಿಗಳು, ನಾಯಕರು, ಮಠಾಧೀಶರ ವಿರೋಧಕ್ಕೆ ಹೈಕಮಾಂಡ್ ಮಣಿದಿದ್ದು, 90 ದಿನಗಳೊಳಗೆ ಹೊಸ ಗಣತಿಯ ಸರ್ವೆ ಮುಗಿಯಲಿದೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಕೆ ಶಿವಕುಮಾರ್‌ (DK Shivakumar) ಅವರ ಜೊತೆ ಹೈಕಮಾಂಡ್‌ ಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ. ಇದನ್ನೂ ಓದಿ: ರಸ್ತೆಯಲ್ಲೇ ಮಹಿಳೆಯರನ್ನ ತಬ್ಬಿಕೊಂಡು ತುಟಿಗೆ ಚುಂಬಿಸ್ತಿದ್ದ – ಬೆಂಗಳೂರಿನ ಬೀದಿ ಕಾಮಣ್ಣ ಪೊಲೀಸ್‌ ವಶಕ್ಕೆ

ಹಳೆ ಗಣತಿ; ಹೊಸ ನಂಬರ್ ಎಂಬ ಫಾರ್ಮುಲಾದಡಿ ಈ ಸರ್ವೇ ನಡೆಯಲಿದ್ದು, ಮ್ಯಾನ್ಯೂವಲ್ ಹಾಗೂ ಆನ್‌ಲೈನ್ ಎರಡರಲ್ಲೂ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಗ್ರಾಮ ಪಂಚಾಯತಿ ಹಾಗೂ ತಾಲೂಕುಗಳಲ್ಲಿ ತಹಶಿಲ್ದಾರ್ ಮಟ್ಟದಲ್ಲಿ ಸೇರ್ಪಡೆ ಹಾಗೂ ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ.

ಈ ಹಿಂದೆ ತೆಲಂಗಾಣದಲ್ಲೂ ಹಳೆಯ ಗಣತಿಗೆ ಹೊಸ ಸರ್ವೆಯ ಅಂಕಿ ಅಂಶಗಳನ್ನು ಸೇರ್ಪಡೆ ಮಾಡಿ ಜಾರಿ ಮಾಡಲಾಗಿತ್ತು. ಈಗ ಅದೇ ಮಾದರಿಯ ಫಾರ್ಮುಲಾ ಅನುಸರಿಸಲಾಗುತ್ತಿದೆ.

ಹೈಕಮಾಂಡ್‌ ಸಭೆಯ ಬಳಿಕ ಸಿದ್ದರಾಮಯ್ಯ ಮಾತನಾಡಿ, ಜಾತಿ ಗಣತಿ ಬಗ್ಗೆ ಚರ್ಚೆ ನಡೆದಿದೆ. ಜಾತಿ ಗಣತಿ ಬಗ್ಗೆ ಕೆಲವರು ಅಪಸ್ವರ ಎತ್ತಿದ್ದ ಬಗ್ಗೆ ಚರ್ಚೆ ನಡೆಯಿತು. ಜಾತಿ ಸರ್ವೆ 9-10 ವರ್ಷ ಹಳೆಯದಾಗಿರುವ ಕಾರಣ ಹೊಸದಾಗಿ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಅಡ್ಡವಾಗಿ ಕಾಲುಗಳು, ಮೂಲೆಯಲ್ಲಿ ತಲೆ – ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ

ಡಿಕೆ ಶಿವಕುಮಾರ್‌ ಮಾತನಾಡಿ, ಕೆಲವರಿಂದ ಅಪಸ್ವರ ಬಂದ ಕಾರಣ ಮನೆ ಮನೆಗೆ ಭೇಟಿ ನೀಡಿ ಸರ್ವೆ ಮಾಡಲು ನಮ್ಮ ತಕರಾರು ಇಲ್ಲ. ಸಾಮಾಜಿಕ ಕಳಕಳಿಯನ್ನ ನಾವು ಒಪ್ಪಿದ್ದೇವೆ. ಆದರೆ ನಂಬರ್ ಬಗ್ಗೆ ಕೆಲವರು ಆಕ್ಷೇಪ ಇದೆ ಎಂದಿದ್ದರು. ಹೀಗಾಗಿ ಹೊಸದಾಗಿ ಅಧ್ಯಯನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

Share This Article