ಮಳೆಗಾಲಕ್ಕೆ ಮಲೆನಾಡು ಸ್ಪೆಷಲ್‌ – ಟೇಸ್ಟಿ ಪತ್ರೊಡೆ ರೆಸಿಪಿ!

Public TV
1 Min Read
pathrode

ಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಕೆಸುವಿನ ಪತ್ರೊಡೆ ಮಾಡುವ ಸಂಪ್ರದಾಯವಿದೆ. ಕೆಸುವಿನ ಎಲೆಯ ಪತ್ರೊಡೆ (Pathrode) ಅಂದ್ರೆ ಈ ಭಾಗದ ಜನರಿಗೆ ಬಲು ಇಷ್ಟ. ಅದನ್ನ ಮಾಡೋದು ಅಷ್ಟೇ ಸವಾಲಿನ ಕೆಲಸ! ಕೆಸುವಿನ ಪತ್ರೊಡೆ ತಯಾರಿಸುವುದು ಹೇಗೆ ಅನ್ನೋದನ್ನ ತಿಳಿಯೋಣ.

ಪತ್ರೊಡೆ ಮಾಡೋದು ಹೇಗೆ?
ಮೊದಲಿಗೆ ಕೊತ್ತಂಬರಿ, ಜೀರಿಗೆ,ಮೆಂತ್ಯೆ, ಉಪ್ಪು, ಹುಣಸೆ, ಬೆಲ್ಲ, ಒಣಮೆಣಸು, ಅರಿಶಿನ, ಖಾರ, ಮಸಾಲೆ ಎಲ್ಲಾ ಸೇರಿಸಿ ರುಬ್ಬಿಕೊಂಡು ಮಸಾಲೆ ತಯಾರಿಸಬೇಕು. ನಂತರದಲ್ಲಿ ಒಂದು ತಾಸು ನೆನೆಸಿಟ್ಟುಕೊಂಡ ಅಕ್ಕಿಯನ್ನು ನುಣ್ಣಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಆ ಎರಡನ್ನು ಸೇರಿಸಿಕೊಳ್ಳಬೇಕು. ಜಿನುಗು ರವೆಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇರಿಸಬೇಕು.

ಬಳಿಕ ಕೆಸುವಿನ ಎಲೆಯಿಂದ ದಂಟನ್ನು ಬೇರೆ ಮಾಡಿಕೊಳ್ಳಬೇಕು. ಬಳಿಕ, ಒಂದು ಅಗಲವಾದ ಬಟ್ಟಲಿನಲ್ಲಿ ಈ ಕೆಸುವಿನ ಎಲೆಗೆ ಮಸಾಲೆಯನ್ನ ಪೂರ್ತಿ ಸವರಿಕೊಳ್ಳಬೇಕು. ನಂತರ ಚಿಕ್ಕ ಪುಟ್ಟ ಕೆಸುವನ್ನೂ ಮಸಾಲೆಯಲ್ಲಿ ಸೇರಿಸಿ ಅದನ್ನು ಅಗಲ ಕೆಸುವಿನ ಮೇಲೆ ಒಂದರ ಮೇಲೊಂದರಂತೆ ಹರವಿಕೊಳ್ಳಬೇಕು.

ಕೊನೆಗೆ ಕೆಸುವನ್ನು ಚೆನ್ನಾಗಿ ಮಡಿಚಿಕೊಂಡು ರೋಲ್ ಮಾಡಿ, ಅದನ್ನು ಇಡ್ಲಿ ಪಾತ್ರೆಯಲ್ಲಿ ಬೇಯಿಸಬೇಕು. ಅರ್ಧಗಂಟೆ ಬೇಯಿಸಿದರೆ ರುಚಿ ರುಚಿಯಾದ ಪತ್ರೊಡೆ ರೆಡಿ!

Share This Article