Bengaluru | ಮಗುವನ್ನು ನೋಡಿಕೊಳ್ಳಲು ಬಂದ ಯುವತಿ 30 ನಿಮಿಷದಲ್ಲಿ 32,000 ರೂ. ಪಡೆದು ಎಸ್ಕೇಪ್

Public TV
1 Min Read
CRIME

ಬೆಂಗಳೂರು: ಮಗುವನ್ನು ನೋಡಿಕೊಳ್ಳಲು ಬಂದ ಯುವತಿಯೊಬ್ಬಳು ಕೇವಲ 30 ನಿಮಿಷದಲ್ಲಿ 32,000 ಪಡೆದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ (Bengaluru) ಕುಂಬಳಗೋಡಿನಲ್ಲಿ (Kumbalagodu) ನಡೆದಿದೆ.

ಇಲ್ಲಿನ ನಿವಾಸಿಯಾದ ರಶ್ಮಿ ಸೇಲ್ಸ್ ಮ್ಯಾನೇಜರ್ ಆಗಿದ್ದು, ಪತಿ ಅನೂಪ್ ಖಾಸಗಿ ಕಾಲೇಜಿನಲ್ಲಿ ಪ್ರೋಫೆಸರ್ ಆಗಿದ್ದಾರೆ. ಈ ದಂಪತಿಗೆ ಒಂದೂವರೆ ವರ್ಷದ ಮಗುವಿದೆ. ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ ಎಂದು ‘ಸುಲೇಖಾ’ ಆಪ್ ಮೂಲಕ ಸಮೀಕ್ಷ ಮೇಡ್ ಸರ್ವಿಸ್‌ನಲ್ಲಿ ಮನೆ ಕೆಲಸದವರನ್ನು ಹುಡುಕಿದ್ದರು. ಈ ವೇಳೆ ಆಪ್‌ನಲ್ಲಿ ಸಚಿನ್ ಎಂಬಾತ ಸಂಪರ್ಕಕ್ಕೆ ಬಂದು ಬಿಮಲಾ ಎಂಬ ಯುವತಿಯನ್ನು ಕೆಲಸಕ್ಕೆ ಕಳುಹಿಸಿ ಕೊಡೋದಾಗಿ ಹೇಳಿದ್ದರು. ಅದರಂತೆ ಯುವತಿ ಬಿಮಲಾ, ಆ ದಂಪತಿಗಳ ಮನೆಗೆ ಬಂದು ಅರ್ಧ ಗಂಟೆ ಮನೆಯೆಲ್ಲಾ ಸಂಪೂರ್ಣವಾಗಿ ನೋಡಿಕೊಂಡು ಎರಡು ತಿಂಗಳ ಸಂಬಳ ಅಡ್ವಾನ್ಸ್ ಎಂದು 32,000 ಪಡೆದು ಫೋನ್‌ನಲ್ಲಿ ಮಾತಾಡುವಂತೆ ನಟಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

ಯುವತಿ ವಾಪಸ್ ಬರದೇ ಇದ್ದಾಗ ಅನುಮಾನಗೊಂಡು ಪರಿಶೀಲನೆ ನಡೆಸಿದ ವೇಳೆ ಮೋಸ ಹೋಗಿರುವುದು ಗೊತ್ತಾಗಿದೆ. ಒಂದು ವೇಳೆ ಮಗುವನ್ನು ಆರೈಕೆಗೆ ಆಕೆಯ ಕೈಗೆ ಕೊಟ್ಟು ಹೋಗಿದ್ದರೆ ಏನಾಗುತ್ತಿತ್ತು? ಮನೆಯಲ್ಲಿದ್ದ ಹಣ, ಚಿನ್ನಾಭರಣದ ಗತಿಯೇನು ಎಂದು ರಶ್ಮಿ ದಂಪತಿಗಳು ನಿಟ್ಟಿಸಿರು ಬಿಟ್ಟಿದ್ದಾರೆ. ಈ ಬಗ್ಗೆ ಕುಂಬಳಗೂಡು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆನ್‌ಲೈನ್ ಮೂಲಕ ಅಪರಿಚಿತ ವ್ಯಕ್ತಿಗಳನ್ನು ಕೆಲಸಕ್ಕೆ ಕರೆದುಕೊಳ್ಳುವ ಮುನ್ನ ಎಚ್ಚರವಹಿಸಿ ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಚಿತ್ರ ಬಿಡುಗಡೆಯಾದರಷ್ಟೇ ಪ್ರದರ್ಶನ: ವಿಕ್ಟರಿ ಥಿಯೇಟರ್ ಯೂ ಟರ್ನ್

Share This Article