ದೆಹಲಿ ಸಿಎಂ ಆಗಿ 100 ದಿನ ಪೂರೈಸಿದ ರೇಖಾ ಗುಪ್ತಾ – ಇನ್ನೂ ಸಿಗದ ಅಧಿಕೃತ ನಿವಾಸ!

Public TV
1 Min Read
Rekha Gupta

ನವದೆಹಲಿ: ದೆಹಲಿ (Delhi) ಸಿಎಂ ರೇಖಾ ಗುಪ್ತಾ  (CM Rekha Gupta) ಅವರು ಅಧಿಕಾರ ವಹಿಸಿಕೊಂಡು 100 ದಿನಗಳನ್ನು ಪೂರೈಸಿದ್ದಾರೆ. ಆದರೂ ಸಹ ಅವರಿಗೆ ಇನ್ನೂ ಅಧಿಕೃತ ನಿವಾಸ ಹಂಚಿಕೆಯಾಗಿಲ್ಲ. ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿರುವ ತಮ್ಮ ಖಾಸಗಿ ನಿವಾಸದಿಂದಲೇ ಅವರು ಕೆಲಸ ಮಾಡುತ್ತಿದ್ದಾರೆ.

ಅಧಿಕೃತ ವಸತಿ ಹಂಚಿಕೆಯ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರೇಖಾ ಗುಪ್ತಾ, ನಾನು ದೆಹಲಿಯ ಸಿಎಂ ಆಗಿ ಜನರಿಗೋಸ್ಕರ ರಸ್ತೆಯಲ್ಲೂ ಕೆಲಸ ಮಾಡಬಹುದು ಎಂದಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಕಟ್ಟಿಸಿದ ಶೀಶ್ ಮಹಲ್‌ಗೆ ಹೋಗೋಕೆ ಇಷ್ಟವಿಲ್ಲ – ಸಿಎಂ ಆಗಿ 50 ದಿನ ಕಳೆದ್ರೂ ರೇಖಾ ಗುಪ್ತಾಗೆ ಇನ್ನೂ ಅಧಿಕೃತ ನಿವಾಸವಿಲ್ಲ!

Sheesh Mahal

ಮೇ 22 ರಂದು, ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ಸೆಷನ್ಸ್ ಹೌಸ್‌ಗೆ ಅವರು ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಆ ಪ್ರದೇಶದಲ್ಲಿ ಅಧಿಕೃತ ನಿವಾಸ ಹಂಚಿಕೆಯಾಗಬಹುದು ಎಂಬ ಊಹಾಪೋಹಗಳು ಹರಿದಾಡಿದ್ದವು. ಇದರ ನಡುವೆ ಅವರು, ಲುಟ್ಯೆನ್ಸ್ ದೆಹಲಿಯ ಕೆಲವು ಬಂಗಲೆಗಳಿಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ, ರೇಖಾ ಗುಪ್ತಾ ಅವರು ಶೀಶ್ ಮಹಲ್‌ನಲ್ಲಿ (Sheesh Mahal) ವಾಸಿಸುವುದಿಲ್ಲ ಎಂದು ಘೋಷಿಸಿದ್ದರು. ಬದಲಿಗೆ ಅದನ್ನು ಸಾರ್ವಜನಿಕರಿಗೆ ಪ್ರವೇಶಿಸಬಹುದಾದ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಈ ಐಷಾರಾಮಿ ಬಂಗಲೆಯೂ 2015 ರಿಂದ ಅಕ್ಟೋಬರ್ 2024 ರವರೆಗೆ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಅಧಿಕೃತ ನಿವಾಸವಾಗಿತ್ತು. ಇದನ್ನೂ ಓದಿ: ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ

Share This Article