ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕ್ ಮೇಲೆ ಭಾರತ ನಡೆಸಿದ `ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯ ಲೋಗೋವನ್ನು ಇಬ್ಬರು ಸೈನಿಕರು ವಿನ್ಯಾಸಗೊಳಿಸಿರುವುದಾಗಿ ಭಾರತೀಯ ಸೇನೆಯ ನಿಯತಕಾಲಿಕ `ಬಾತ್‌ಚೀತ್’ (Batchit) ತಿಳಿಸಿದೆ.ಇದನ್ನೂ ಓದಿ: ಅಬ್ದುಲ್ ರಹೀಂ ಹತ್ಯೆ| ರಾತ್ರಿ ಆಸ್ಪತ್ರೆ ಮುಂದೆ ಮುಸ್ಲಿಮರ ಪ್ರತಿಭಟನೆ – ಮಂಗಳೂರಿಗೆ ಹೆಚ್ಚುವರಿ ಪೊಲೀಸರ ನಿಯೋಜನೆ
ಏ.22 ರಂದು ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಜೋರಾಗಿತ್ತು. ಮೇ 07ರಂದು ಪಾಕ್‌ನ 9 ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಸೇಡು ತೀರಿಸಿಕೊಂಡಿತ್ತು.
ಈ ಕಾರ್ಯಾಚರಣೆ ಬಳಿಕ `ಆಪರೇಷನ್ ಸಿಂಧೂರ’ ಲೋಗೋ ಭಾರಿ ವೈರಲ್ ಆಗಿತ್ತು. ಈ ಲೋಗೋವನ್ನು ಖುದ್ದು ಲೆ.ಕ. ಹರ್ಷ ಗುಪ್ತಾ ಮತ್ತು ಹವಾಲ್ದಾರ್ ಸುರೀಂದರ್‌ಸಿಂಗ್ ಜೊತೆಗೂಡಿ ವಿನ್ಯಾಸಗೊಳಿಸಿರುವುದಾಗಿ ತಿಳಿದು ಬಂದಿದೆ. ಸಿಂಧೂರದ ಅಕ್ಷರಗಳಲ್ಲಿ ಕುಂಕುಮವನ್ನು ಇರಿಸಿದ್ದು, ಭಾರತೀಯ ಸ್ತ್ರೀಯರ ಕುಂಕುಮದ ಬೆಲೆ ಹಾಗೂ ಗೌರವವನ್ನು ಎತ್ತಿತೋರಿಸುವಂತಿತ್ತು.
ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರು `ಆಪರೇಷನ್ ಸಿಂಧೂರ’ ಎಂಬ ಹೆಸರನ್ನು ನೀಡಿದರು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.ಇದನ್ನೂ ಓದಿ: 2000 ವರ್ಷಗಳಷ್ಟು ಹಳೆಯ ತಂತ್ರಜ್ಞಾನಕ್ಕೆ ಮರುಜೀವ – ಏನಿದು ಸ್ಟಿಚ್ಡ್ ಶಿಪ್?