ಮ್ಯಾನೇಜರ್ ಮೇಲೆ ಹಲ್ಲೆ- ನಟ ಉನ್ನಿ ಮುಕುಂದನ್ ವಿರುದ್ಧ ಕೇಸ್

Public TV
1 Min Read
Unni Mukundan

ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಖ್ಯಾತ ಮಲಯಾಳಂ ನಟ ಉನ್ನಿ ಮುಕುಂದನ್ (Unni Mukundan) ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊಚ್ಚಿ ಇನ್ಫೋ ಪಾರ್ಕ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:ಚಾಕ್ಲೇಟ್ ಕಲರ್ ಕಟ್ ಔಟ್ ಡ್ರೆಸ್‌ನಲ್ಲಿ ಸಮಂತಾ ಮಿಂಚಿಂಗ್- ಬೆಂಕಿ ಲುಕ್ ಎಂದ ಫ್ಯಾನ್ಸ್

Unni Mukundan 1ನಟ ಉನ್ನಿ ಮುಕುಂದನ್ ವಿರುದ್ಧ ಮ್ಯಾನೇಜರ್ ವಿಪಿನ್ ಕುಮಾರ್ ದೂರು ನೀಡಿದ್ದಾರೆ. ಟೋವಿನೋ ಥಾಮಸ್ (Tovino Thomas) ನಟನೆಯ ‘ನರಿವೆಟ್ಟ’ ಸಿನಿಮಾ ಬಗ್ಗೆ ಮೆಚ್ಚಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ನಟ ಉನ್ನಿ ತಮಗೆ ಕಪಾಳಮೋಕ್ಷ ಮಾಡಿದ್ದಲ್ಲದೇ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಮ್ಯಾನೇಜರ್ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:ಫಸ್ಟ್‌ ಟೈಮ್‌ ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್‌ ಬ್ಯಾನ್‌

unni mukundanಕೊಚ್ಚಿ ಇನ್ಫೋ ಪಾರ್ಕ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸೋದರ ಜೊತೆಗೆ ಮಲಯಾಳಂ ಕಲಾವಿದರ ಸಂಘದಲ್ಲಿಯೂ ಉನ್ನಿ ಮುಕುಂದನ್ ವಿರುದ್ಧ ಮ್ಯಾನೇಜರ್ ದೂರು ನೀಡಿರೋದಾಗಿ ತಿಳಿಸಿದ್ದಾರೆ.

ನಾನು ಅನೇಕ ಸಿನಿಮಾಗಳಿಗೆ ಪಿಆರ್ ಆಗಿ ಕೆಲಸ ಮಾಡಿದ್ದೇನೆ. ಅದರಂತೆ ‘ನರಿವೆಟ್ಟ’ ಸಿನಿಮಾಗೂ ಪ್ರಚಾರ ಮಾಡಿದ್ದೆ, ಈ ಸಿನಿಮಾ ಬಗ್ಗೆ ಹೊಗಳಿ ಪೋಸ್ಟ್ ಮಾಡಿದ್ದು ಉನ್ನಿ ಮುಕುಂದನ್‌ಗೆ ಇಷ್ಟವಾಗಲಿಲ್ಲ. ಹಾಗಾಗಿ ಮೇ 26ರಂದು ತಮ್ಮ ಫ್ಲಾಟ್‌ನ ಪಾರ್ಕಿಂಗ್ ಏರಿಯಾಗೆ ತಮ್ಮನ್ನು ಕರೆದು ನಟ ಹಲ್ಲೆ ಮಾಡಿರೋದಾಗಿ ಮ್ಯಾನೇಜರ್ ದೂರು ನೀಡಿದ್ದಾರೆ. ಈ ಬಗ್ಗೆ ನಟ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share This Article