ನವದೆಹಲಿ: ಕಳೆದ ಒಂದು ವಾರದಲ್ಲಿ ದೇಶದಲ್ಲಿ 752 ಹೊಸ ಕೋವಿಡ್-19 (Covid-19) ಪ್ರಕರಣಗಳು ವರದಿಯಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1,000ಕ್ಕೆ ಏರಿದೆ. ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತಿ ಹೆಚ್ಚು ಹೊಸ ಸೋಂಕು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (Ministry of Health and Family Welfare) ಹೇಳಿದೆ.
ಕೇರಳದಲ್ಲಿ 335 ಹೊಸ ಸೋಂಕುಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 430ಕ್ಕೆ ಏರಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕ್ರಮವಾಗಿ 153 ಮತ್ತು 99 ಹೊಸ ಪ್ರಕರಣಗಳು ದಾಖಲಾಗಿವೆ. ಸೋಮವಾರ ಬೆಳಗ್ಗೆ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು ಕ್ರಮವಾಗಿ 209 ಮತ್ತು 104ರಷ್ಟಿವೆ. ಇದನ್ನೂ ಓದಿ: ಸದ್ಯದಲ್ಲೇ ರಾಜನಾಥ್ ಭೇಟಿ, ಡಿಫೆನ್ಸ್ ಕಾರಿಡಾರ್‌ಗೆ ಪಟ್ಟು: ಎಂಬಿಪಿ
ಗುಜರಾತ್‌ನಲ್ಲಿ 83 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 47, ಉತ್ತರ ಪ್ರದೇಶದಲ್ಲಿ 15 ಮತ್ತು ಪಶ್ಚಿಮ ಬಂಗಾಳದಲ್ಲಿ 12 ಪ್ರಕರಣಗಳು ವರದಿಯಾಗಿವೆ. ಕೇಂದ್ರ ಸರ್ಕಾರಿ ಸಂಸ್ಥೆ ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂನ (ಇನ್ಸಾಕಾಗ್) ಇತ್ತೀಚಿನ ಮಾಹಿತಿಯ ಪ್ರಕಾರ, ಹೊಸ ಕೊರೊನಾ ಸೋಂಕುಗಳ ಹೆಚ್ಚಳದ ನಡುವೆ ಎರಡು ಹೊಸ ರೂಪಾಂತರಗಳ ಪ್ರಕರಣಗಳು ವರದಿಯಾಗಿದೆ. ಇದನ್ನೂ ಓದಿ: ಸ್ವಚ್ಛವಾಹಿನಿ ಚಾಲಕಿಯರ ವೇತನ, ಸೌಲಭ್ಯಗಳ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿ: ಪ್ರಿಯಾಂಕ್ ಖರ್ಗೆ
ಬಂಗಾಳದಲ್ಲಿ ಮತ್ತೆ ನಾಲ್ಕು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ಕೋಲ್ಕತ್ತಾ ಮತ್ತು ಅದರ ಉಪನಗರಗಳಿಂದ ವರದಿಯಾಗಿವೆ. ಇದನ್ನೂ ಓದಿ: ಮಾಡಾಳ್ ಜೈಲಿಗೆ ಹೋದಾಗ ಇವರಿಗೆ ಕನ್ನಡ ಅಸ್ಮಿತೆ ನೆನಪಾಗಲಿಲ್ಲ: ಬಿವೈವಿ ವಿರುದ್ಧ ಎಂಬಿಪಿ ಕಿಡಿ
ಬಿಹಾರದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ವರದಿಯಾಗಿದೆ. ಪಾಟ್ನಾದ 31 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಇತ್ತೀಚೆಗೆ ರಾಜ್ಯದಿಂದ ಹೊರಗೆ ಪ್ರಯಾಣ ಮಾಡಿದ ಇತಿಹಾಸವಿಲ್ಲ. ಇದನ್ನೂ ಓದಿ: ಮಂಡ್ಯ | ಬೈಕ್ ಅಡ್ಡಗಟ್ಟಿದ ಪೊಲೀಸ್ರು – ಆಯತಪ್ಪಿ ಬಿದ್ದು ತಾಯಿ ಮಡಿಲಲ್ಲೇ ಪ್ರಾಣಬಿಟ್ಟ ಮಗು