ಹಾಸನ: ಸಕಲೇಶಪುರ (Sakleshpur) ಹಾಗೂ ಚಿಕ್ಕಮಗಳೂರು (Chikkamgaluru) ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಹಾಸನ (Hassana) ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದ (Hemavati Dam) ಒಳಹರಿವಿನಲ್ಲಿ ಬಾರಿ ಏರಿಕೆಯಾಗಿದೆ.
ಒಂದೇ ದಿನಕ್ಕೆ 6,356 ಕ್ಯುಸೆಕ್ ಒಳಹರಿವು ಹೆಚ್ಚಳವಾಗಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ ಇದ್ದು ಸದ್ಯ ಜಲಾಶಯದಲ್ಲಿ 19.627 ಟಿಎಂಸಿ ನೀರು ಸಂಗ್ರಹವಾಗಿದೆ.
ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922.00 ಅಡಿ ಇದ್ದು ಇಂದಿನ ನೀರಿನ ಮಟ್ಟ 2899.90 ಅಡಿ ಇದೆ. ಒಳಹರಿವು 9,808 ಕ್ಯುಸೆಕ್ ಇದ್ದು , ಹೊರಹರಿವು 3,225 ಕ್ಯುಸೆಕ್ ಇದೆ.