ನವದೆಹಲಿ: ಹೆನ್ರಿಕ್ ಕ್ಲಾಸೆನ್ (Heinrich Klaasen) ತೂಫಾನ್ ಶತಕ ಹಾಗೂ ಟ್ರಾವಿಸ್ ಹೆಡ್ (Travis Head) ಬೊಂಬಾಬ್ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್‌ನಲ್ಲಿ ಮತ್ತೊಂದು ವಿಶೇಷ ಸಾಧನೆ ಮಾಡಿದೆ. ಕೋಲ್ಕತ್ತಾ ವಿರುದ್ಧ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್‌ಗಳಲ್ಲಿ ಕೇವಲ 3 ವಿಕೆಟಿಗೆ 278 ಬಾರಿಸಿ ಎದುರಾಳಿ ಕೆಕೆಆರ್‌ಗೆ (KKR) 279 ರನ್‌ಗಳ ಗುರಿ ನೀಡಿದೆ.
300 ರನ್‌ಗಳ ಗುರಿಯೊಂದಿಗೆ 18ನೇ ಆವೃತ್ತಿಗೆ ಎಂಟ್ರಿಕೊಟ್ಟ ಸನ್ ರೈಸರ್ಸ್ ಹೈದರಾಬಾದ್ (SRH) 300 ರನ್‌ಗಳ ಹಡಿ ಸಮೀಪಿಸುವಲ್ಲಿ ಯಶಸ್ವಿಯಾಗಿದೆ. ಈ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರಂಭಿಕ ಪಂದ್ಯವನ್ನಾಡಿದ ಎಸ್‌ಆರ್‌ಹೆಚ್ ಇಶಾನ್ ಕಿಶನ್ ಶತಕದ ನೆರವಿನಿಂದ 6 ವಿಕೆಟ್‌ಗೆ 286 ರನ್ ಗಳಿಸಿತ್ತು. ಇಂದು ಹೆನ್ರಿಕ್ ಕ್ಲಾಸೆನ್ ಶತಕದ ನೆರವಿನಿಂದ 3 ವಿಕೆಟ್‌ಗೆ 278 ರನ್ ಬಾರಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರನೇ ಗರಿಷ್ಠ ರನ್ ಸಿಡಿಸಿದ ತಂಡ ಎಂಬ ಖ್ಯಾತಿಯನ್ನೂ ತನ್ನದೇ ಆಗಿಸಿಕೊಂಡಿದೆ. ವಿಶೇಷವೆಂದ್ರೆ ಇನ್ನಿಂಗ್ಸ್‌ವೊಂದರಲ್ಲಿ ಗರಿಷ್ಠ ರನ್ ಸಿಡಿಸಿದ ಟಾಪ್-5 ತಂಡಗಳ ಪೈಕಿ ಮೊದಲ ನಾಲ್ಕು ಸ್ಥಾನಗಳೂ ಸನ್‌ರೈಸರ್ಸ್ ತಂಡವೇ ಬಾಚಿಕೊಂಡಿದೆ. ಇದನ್ನೂ ಓದಿ: ಟೆಸ್ಟ್ ನಿವೃತ್ತಿ ಬಳಿಕ ಟೆಂಪಲ್ ರನ್; ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ವಿರುಷ್ಕಾ ದಂಪತಿ ಭೇಟಿ
ವೇಗದ ಶತಕ ಸಿಡಿಸಿದ ನಾಲ್ಕನೇ ಆಟಗಾರ:
ಇನ್ನೂ ಆರಂಭದಿಂದಲೇ ಸಿಕ್ಸರ್ ಬೌಂಡರಿ ಸಹಿತ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಹೆನ್ರಿಕ್ ಕ್ಲಾಸೆನ್ 37 ಎಸೆತಗಳಲ್ಲಿ 6 ಬೌಂಡರಿ, 9 ಸಿಕ್ಸರ್ ಸಹಿತ ಶತಕ ಸಿಡಿಸಿದರು. ಈ ಮೂಲಕ ಇಡೀ ಐಪಿಎಲ್ ಇತಿಹಾಸದಲ್ಲಿ ವೇಗದ ಶತಕ ಸಿಡಿಸಿದ 4ನೇ ಆಟಗಾರ ಹಾಗೂ ಈ ಆವೃತ್ತಿಯಲ್ಲಿ ವೇಗದ ಶತಕ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದನ್ನೂ ಓದಿ: ಚೆನ್ನೈ ಗುನ್ನಕ್ಕೆ ಗುಜರಾತ್ ಧೂಳಿಪಟ – CSKಗೆ 83 ರನ್‌ಗಳ ಭರ್ಜರಿ ಜಯ, ಆರ್‌ಸಿಬಿಗಿದೆಯಾ ನಂ.1 ಪಟ್ಟಕ್ಕೇರುವ ಚಾನ್ಸ್?
ಟಾಪ್-5ನ 4 ಸ್ಥಾನಗಳಲ್ಲಿ ಸನ್‌ರೈಸರ್ಸ್‌ದೇ ಹವಾ
SRH – 287/3 Vs RCB, 2024.
SRH – 286/6 Vs RR, 2025.
SRH – 278/3 Vs KKR, 2025*.
SRH – 277/3 Vs MI, 2024.
KKR – 272/3 vs DC, 2024
ಐಪಿಎಲ್‌ನಲ್ಲಿ ವೇಗದ ಶತಕ ಸಿಡಿಸಿದ ಟಾಪ್-5 ಬ್ಯಾಟರ್ಸ್
* ಕ್ರಿಸ್ ಗೇಲ್ – 30 ಎಸೆತ
* ವೈಭವ್ ಸೂರ್ಯವಂಶಿ – 35 ಎಸೆತ
* ಯೂಸುಫ್ ಪಠಾಣ್ – 37 ಎಸೆತ
* ಹೆನ್ರಿಕ್ ಕ್ಲಾಸೆನ್ – 37 ಎಸೆತ
* ಡೇವಿಡ್ ಮಿಲ್ಲರ್ – 38 ಎಸೆತ
ಈ ಆವೃತ್ತಿಯಲ್ಲಿ ವೇಗದ ಫಿಫ್ಟಿ ಬಾರಿಸಿದ ಟಾಪ್-5 ಆಟಗಾರರು
ಹೆನ್ರಿಕ್ ಕ್ಲಾಸೆನ್ (ಎಸ್‌ಆರ್‌ಹೆಚ್) – 17 ಎಸೆತ
ವೈಭವ್ ಸೂರ್ಯವಂಶಿ (ರಾಜಸ್ಥಾನ್) – 50 ರನ್ – 17 ಎಸೆತ
ನಿಕೋಲಸ್ ಪೂರನ್ (ಎಲ್‌ಎಸ್‌ಜಿ) – 50 ರನ್, 18 ಎಸೆತ
ಮಿಚೆಲ್ ಮಾರ್ಷ್ (ಎಲ್‌ಎಸ್‌ಜಿ) – 50 ರನ್, 21 ಎಸೆತ
ಟ್ರಾವಿಸ್ ಹೆಡ್ (ಎಸ್‌ಆರ್‌ಹೆಚ್) – 50 ರನ್, 21 ಎಸೆತ