Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತಾಳಿ ಕಟ್ಟುವಾಗಲೇ ಮದುವೆ ಬೇಡವೆಂದ ವಧು ತಾನು ಪ್ರೀತಿಸಿದ ಯುವಕನ ಜೊತೆ ವಿವಾಹ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Hassan | ತಾಳಿ ಕಟ್ಟುವಾಗಲೇ ಮದುವೆ ಬೇಡವೆಂದ ವಧು ತಾನು ಪ್ರೀತಿಸಿದ ಯುವಕನ ಜೊತೆ ವಿವಾಹ

Hassan

ತಾಳಿ ಕಟ್ಟುವಾಗಲೇ ಮದುವೆ ಬೇಡವೆಂದ ವಧು ತಾನು ಪ್ರೀತಿಸಿದ ಯುವಕನ ಜೊತೆ ವಿವಾಹ

Public TV
Last updated: May 23, 2025 11:05 pm
Public TV
Share
2 Min Read
hassan re marriage
SHARE

– ಪೊಲೀಸ್ ಠಾಣೆ ಮೆಟ್ಟಿಲೇರಿದ ನೊಂದ ವರನ ಕುಟುಂಬಸ್ಥರು

ಹಾಸನ: ತಾಳಿ ಕಟ್ಟುವ ಶುಭವೇಳೆಯೇ ವಧುವೇ ಮದುವೆ ಬೇಡವೆಂದ ಪ್ರಕರಣ ಮತ್ತೊಂದು ರೀತಿಯಲ್ಲಿ ಸುಖಾಂತ್ಯ ಕಂಡಿದೆ. ಕಡೆಗೂ ವಧುವಿನ ಇಚ್ಛೆಯಂತೆ ಮದುವೆ ನೆರವೇರಿದೆ.

ತಾನು ಪ್ರೀತಿಸಿದ ಯುವಕನೊಂದಿಗೆ ವಧು ವಿವಾಹವಾಗಿದ್ದಾರೆ. ಆದರೆ ಮದುವೆ ನಿಶ್ವಯವಾಗಿದ್ದ ವರ ಹಾಗೂ ಆತನ ಕುಟುಂಬಸ್ಥರು ನೋವಿನಿಂದಲೇ ಕಲ್ಯಾಣ ಮಂಟಪದಿಂದ ಹೊರ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಧುವಿಗೆ ನೀಡಿದ ಒಡವೆ, ಧಾರೆ ಸೀರೆ, ಖರ್ಚು ಮಾಡಿದ ಹಣ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಇತ್ತ ಮದುವೆ ಮುರಿದು ಬಿದ್ದಿದ್ದರಿಂದ ವಧುವಿನ ಪೋಷಕರ ಆಘಾತಕ್ಕೆ ಒಳಗಾಗಿದ್ದರು. ಆದರೆ ಮಗಳ ಒತ್ತಾಯಕ್ಕೆ ಮಣಿದು ಆಕೆ ಇಷ್ಟಪಟ್ಟಿದ್ದವನ ಜೊತೆ ಒಲ್ಲದ ಮನಸ್ಸಿನಿಂದಲೇ ಮದುವೆ ನೆರವೇರಿಸಿದ್ದಾರೆ.

ಹಾಸನ ಹೊರವಲಯದ ಬೂವನಹಳ್ಳಿಯ ಪಲ್ಲವಿ ಮತ್ತು ಆಲೂರು ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೇಣುಗೋಪಾಲ ಜಿ. ನಡುವೆ ಮೂರು ತಿಂಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಇಂದು ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟದಲ್ಲಿ ವಿವಾಹ ಮಹೋತ್ಸವ ಏರ್ಪಡಿಸಲಾಗಿತ್ತು. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಪಲ್ಲವಿ ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಪಟ್ಟು ಹಿಡಿದ ಕಾರಣ ಮದುವೆ ಮುರಿದು ಬಿದ್ದಿತ್ತು. ಯಾರು ಎಷ್ಟೇ ಮನವೊಲಿಸಿದರೂ ಮನಸ್ಸು ಬದಲಾಯಿಸಲಿಲ್ಲ. ಕಡೆಗೆ ತಾಯಿ ಹಾಗೂ ವರ ಕೇಳಿಕೊಂಡರೂ ಪಲ್ಲವಿ ಮನಸ್ಸು ಕರಗಲಿಲ್ಲ. ಪರಿಣಾಮ ಮದುವೆ ಮುರಿದು ಬಿದ್ದಿತ್ತು. ನಂತರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ, ಯಾವುದೇ ಫಲಪ್ರದ ಆಗಲಿಲ್ಲ. ಪಲ್ಲವಿ ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವೆ ಎಂದು ಪೊಲೀಸರ ಮುಂದೆಯೂ ತಿಳಿಸಿದ್ದಳು.

ಇಷ್ಟೆಲ್ಲಾ ಬೆಳವಣಿಗೆ ಬಳಿಕ ರಾತ್ರಿ ವೇಳೆಗೆ ತಾನು ಪ್ರೀತಿಸಿದ ಯುವಕನೊಂದಿಗೆ ಪಲ್ಲವಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ಹಾಸನ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಕಲ್ಯಾಣಮಂಟಪಕ್ಕೆ ಹೊಂದಿಕೊಂಡಿರುವ ಗಣಪತಿ ದೇವಾಲಯದಲ್ಲಿ ಮಗಳ ಇಚ್ಛೆಯಂತೆಯೇ ಪ್ರಿಯಕರ ರಘು ಜೊತೆ ಪೋಷಕರು ಸರಳ ವಿವಾಹ ನೆರವೇರಿಸಿದರು. ಪ್ರಿಯತಮೆ ಪಲ್ಲವಿಗೆ ಪ್ರಿಯಕರ ರಘು ತಾಳಿ ಕಟ್ಟಿದ್ದು, ಇದಕ್ಕೆ ಎರಡೂ ಕಡೆಯ ಕುಟುಂಬಸ್ಥರು ಸಾಕ್ಷಿಯಾದರು. ರಘು ಮೂಲತಃ ಹಾಸನ ತಾಲ್ಲೂಕಿನ ಬಸವನಹಳ್ಳಿ ಗ್ರಾಮದವನಾಗಿದ್ದು, ಟ್ರಾನ್ಸ್‌ಪೋರ್ಟ್‌ ಬ್ಯುಸಿನೆಸ್ ಮಾಡಿಕೊಂಡಿದ್ದಾನೆ. ಹಲವು ತಿಂಗಳುಗಳಿಂದ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದನ್ನು ಹೆತ್ತವರ ಬಳಿ ಹೇಳಿಕೊಳ್ಳಲು ಪಲ್ಲವಿಗೆ ಧೈರ್ಯ ಇರಲಿಲ್ಲ. ಪರಿಣಾಮ ಮದುವೆಗೆ ಒಪ್ಪಿಕೊಂಡಿದ್ದಳು. ಈ ಸಂದರ್ಭದಲ್ಲಿ ಪ್ರಿಯಕರ ಕರೆ ಮಾಡಿ ನಾನೇ ನಿನ್ನನ್ನು ಮದುವೆ ಆಗುವೆ ಎಂದು ಹೇಳಿದ ನಂತರ ಕಡೇ ಕ್ಷಣದಲ್ಲಿ ತಾಳಿ ಕಟ್ಟಿಕೊಳ್ಳಲು ನಿರಾಕರಿಸಿದ್ದರಿಂದ ಮದುವೆ ಮುರಿದು ಬಿದ್ದಿತ್ತು. ಈಗ ಪರಸ್ಪರ ಪ್ರೀತಿಸಿದ್ದ ಜೋಡಿಗಳು ಒಂದಾಗಿವೆ.

TAGGED:hassanlovemarriageಮದುವೆಲವ್ಹಾಸನ
Share This Article
Facebook Whatsapp Whatsapp Telegram

Cinema news

Bengaluru International Film Festival
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ ಚಿತ್ರಕ್ಕೆ ಪ್ರಶಸ್ತಿ ಗರಿ
Bengaluru City Cinema Karnataka Latest Sandalwood States Top Stories
arvind reddy threat
ಉದ್ಯಮಿ ಅರವಿಂದ್‌ ರೆಡ್ಡಿಗೆ ಕೊಲೆ ಬೆದರಿಕೆ; ಆರೋಪಿ ಬಂಧನ
Bengaluru City Cinema Latest Main Post Sandalwood
again Bigg Boss Rajat controversy photo shoot in villain look while smoking a cigarette Mysuru
ಸಿಗರೇಟ್ ಸೇದುತ್ತಾ ವಿಲನ್ ಲುಕ್‌ನಲ್ಲಿ ಫೋಟೋ ಶೂಟ್ – ಮತ್ತೆ ರಜತ್‌ ವಿವಾದ
Cinema Crime Karnataka Latest Mysuru Top Stories TV Shows
jayant kaikini bengaluru international film festival
ಗೀತರಚನೆಯನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ, ಅದು ಸುಪ್ತಮನಸ್ಸಿನಿಂದ ಬರಬೇಕು: ಜಯಂತ್‌ ಕಾಯ್ಕಿಣಿ
Cinema Latest Main Post Sandalwood

You Might Also Like

congress leader
Chikkaballapur

ಚಿಕ್ಕಬಳ್ಳಾಪುರದಲ್ಲಿ ನಿಲ್ಲದ ಕಾಂಗ್ರೆಸ್ ಮುಖಂಡರ ದರ್ಪ- ರಾಜೀವ್ ಗೌಡ ಬಳಿಕ ಮತ್ತೋರ್ವನ ಗೂಂಡಾಗಿರಿ

Public TV
By Public TV
5 minutes ago
G.Parameshwar 1
Districts

ಬೇಲೂರು ಠಾಣೆಗೆ ದಿಢೀರ್ ಭೇಟಿ, ಪಾಕ್‌, ಅಫ್ಘಾನ್‌ನಿಂದ ಬಂದವ್ರನ್ನ ಹೇಗೆ ಹಿಡಿತೀರಿ – ಪೊಲೀಸರಿಗೆ ಪರಂ ಪ್ರಶ್ನೆ!

Public TV
By Public TV
40 minutes ago
g parameshwara 2
Chikkamagaluru

5 ವರ್ಷ ಸಿದ್ದರಾಮಯ್ಯ ಯಾಕೆ ಸಿಎಂ ಆಗಿರಬಾರದು: ಪರಮೇಶ್ವರ್‌

Public TV
By Public TV
1 hour ago
Crime 3
Bengaluru Rural

ಹಿಟ್‌ & ರನ್‌ಗೆ ವ್ಯಕ್ತಿ ಬಲಿ – 11 ಗಂಟೆಗಳ ಕಾಲ ರಸ್ತೆಯಲ್ಲೇ ಬಿದ್ದಿದ್ದ ಶವ!

Public TV
By Public TV
2 hours ago
team india U19 1
Cricket

U19 World Cup Final: ವೈಭವ್‌ ಸ್ಫೋಟಕ ಶತಕ; ಆಂಗ್ಲರ ಸದೆಬಡಿದು ವಿಶ್ವಕಪ್‌ ಗೆದ್ದ ‘ಯಂಗ್‌ ಇಂಡಿಯಾ’

Public TV
By Public TV
2 hours ago
male mahadeshwara temple
Chamarajanagar

ಮಹಾಶಿವರಾತ್ರಿ ಜಾತ್ರೆ: ಮಾದಪ್ಪನ ದರ್ಶನಕ್ಕೆ ಕಾಲ್ನಡಿಗೆಯ ಮೂಲಕ ಭಕ್ತರ ದಂಡು – ಪಾದಯಾತ್ರಿಗಳಿಗೆ ರೂಲ್ಸ್ ಜಾರಿ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?